ನೇಪಿಯರ್: ಭಾರತ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಸೋಲನುಭವಿಸಿದ ನ್ಯೂಜಿಲ್ಯಾಂಡ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಇದೀಗ ಸರಣಿಯ ಅಂತಿಮ ಪಂದ್ಯಕ್ಕೆ ನಾಯಕ ಕೇನ್ ವಿಲಿಯಮ್ಸನ್ ಗೈರಾಗಲಿದ್ದಾರೆ.
ಪೂರ್ವ ನಿಯೋಜಿತ ವೈದ್ಯಕೀಯ ಅಪಾಯಿಂಟ್‌ಮೆಂಟ್ ಗೆ ಹಾಜರಾಗ ಬೇಕಾದ ಕಾರಣ ನಾಯಕ ಕೇನ್ ವಿಲಿಯಮ್ಸನ್ ನೇಪಿಯರ್ ನಲ್ಲಿ ಮಂಗಳವಾರ ನಡೆಯಲಿರುವ ಮೂರನೇ ಟಿ20 ಅನ್ನು ತಪ್ಪಿಸಿಕೊಳ್ಳಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಕೇನ್ ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ಹಿರಿಯ ಬೌಲರ್ ಟಿಮ್ ಸೌಥಿ ಅವರು ತಂಡವನ್ನು ಮುನ್ನಡೆಸಲಿದ್ದಾರೆ. ವಿಲಿಯಮ್ಸನ್ ಬದಲಿಗೆ ಮಾರ್ಕ್ ಚಾಪ್ಮನ್ ಅವರು ತಂಡ ಕೂಡಿಕೊಳ್ಳಲಿದ್ದಾರೆ.
ಶುಕ್ರವಾರದಂದು ಈಡನ್ ಪಾರ್ಕ್ ನಲ್ಲಿ ನಡೆಯಲಿರುವ ಏಕದಿನ ಸರಣಿಯ ಆರಂಭಿಕ ಪಂದ್ಯಕ್ಕೆ ಮುಂಚಿತವಾಗಿ ವಿಲಿಯಮ್ಸನ್ ತಂಡ ಕೂಡಿಕೊಳ್ಳಲಿದ್ದಾರೆ.
Related Articles
ಇದನ್ನೂ ಓದಿ:IFFI 53; ಸಿನಿಮಾಕ್ಕೂ ಬಾಲ್ಯಕ್ಕೂ ಬಹಳ ಸಂಬಂಧವಿದೆ…ಬಾಲ್ಯದ ನೆನಪುಗಳೇ ಹಲವು ಸಿನಿಮಾಗಳ ಕಥಾವಸ್ತು
ಮೌಂಟ್ ಮಂಗುನಾಯಿಯಲ್ಲಿ ರವಿವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.