Advertisement

World Cup ಕನಸು ಕಿತ್ತ ಗಾಯ! ವಿಶ್ವಕಪ್ ನಿಂದಲೂ ಹೊರಬಿದ್ದ ಕಿವೀಸ್ ನಾಯಕ

10:19 AM Apr 06, 2023 | Team Udayavani |

ವೆಲ್ಲಿಂಗ್ಟನ್: 16ನೇ ಸೀಸನ್ ನ ಐಪಿಎಲ್ (IPL) ನ ಆರಂಭಿಕ ಪಂದ್ಯದಲ್ಲೇ ಗಾಯಗೊಂಡು ಐಪಿಎಲ್ ನಿಂದ ಹೊರಬಿದ್ದ ಕೇನ್ ವಿಲಿಯಮ್ಸನ್ (Kane Williamson) ಅವರು ಶಸ್ತ್ರಚಿಕಿತ್ಸೆಗೆ ಒಳಪಡಬೇಕಾಗಿದೆ. ಹೀಗಾಗಿ ಮುಂದಿನ ಏಕದಿನ ವಿಶ್ವಕಪ್ ನಿಂದಲೂ ಅವರು ಹೊರಬೀಳುವ ಸಾಧ್ಯತೆಯಿದೆ ಎನ್ನಲಾಗಿದೆ.

Advertisement

ಗುಜರಾತ್ ಟೈಟಾನ್ಸ್ ತಂಡದ ಸದಸ್ಯ ಕೇನ್ ವಿಲಿಯಮ್ಸನ್ ಅವರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಗಾಯಗೊಂಡಿದ್ದರು. ಕೂಡಲೇ ಅವರನ್ನು ಮೈದಾನದಿಂದ ಹೊರಕ್ಕೆ ಕರೆದುಕೊಂಡು ಬರಲಾಗಿತ್ತು.

ವಿಲಿಯಮ್ಸನ್ ಅವರ ಬಲಕಾಲು ಮಂಡಿ ಊತವಾಗಿದ್ದು, ಸ್ಕ್ಯಾನ್ ವೇಳೆ ಗಾಯದ ಗಂಭೀರತೆ ಅರಿವಾಗಿದೆ. ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎನ್ನಲಾಗಿದೆ. ಒಂದು ವೇಳೆ ಕೇನ್ ಶಸ್ತ್ರಚಿಕಿತ್ಸೆಗೆ ಒಳಗಾದರೆ ಮುಂದಿನ ಅಕ್ಟೋಬರ್ ನಲ್ಲಿ ನಡೆಯಲಿರುವ ವಿಶ್ವಕಪ್ ನಲ್ಲಿ ಅವರು ಭಾಗವಹಿಸುವುದು ಅಸಾಧ್ಯವಾಗಿದೆ.

ಇದನ್ನೂ ಓದಿ:Snake Bite: ಹಾವು ಕೈಗೆ ಕಚ್ಚಿತೆಂದು, ಹಾವಿನ ತಲೆಗೆ ಕಚ್ಚಿ ಕೊಂದ ಯುವಕ; ಮೂವರ ಬಂಧನ

“ಇದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ, ಆದರೆ ನಾನು ಸಾಧ್ಯವಾದಷ್ಟು ಬೇಗ ಮೈದಾನಕ್ಕೆ ಮರಳಲು ನಾನು ಎಲ್ಲವನ್ನೂ ಮಾಡುತ್ತೇನೆ. ಮುಂದಿನ ಕೆಲವು ತಿಂಗಳುಗಳಲ್ಲಿ ಗ್ಯಾರಿ ಮತ್ತು ತಂಡವನ್ನು ಬೆಂಬಲಿಸಲು ನಾನು ಏನು ಮಾಡಬಹುದೋ ಅದನ್ನು ಮಾಡಲು ನಾನು ಎದುರು ನೋಡುತ್ತಿದ್ದೇನೆ” ಎಂದು ಕೇನ್ ಹೇಳಿದ್ದರು.

Advertisement

2019 ರ ವಿಶ್ವಕಪ್ ನಲ್ಲಿ ರನ್ನರ್ ಅಪ್ ಆಗಿ ಮುಗಿಸಿದ ನ್ಯೂಜಿಲೆಂಡ್ ಈಗ 2023 ರ ಆವೃತ್ತಿಗೆ ಹೋಗುವ ತಮ್ಮ ಯೋಜನೆಗಳನ್ನು ಮರುಆಲೋಚಿಸಬೇಕಿದೆ. ಇಂಗ್ಲೆಂಡ್‌ ನಲ್ಲಿ ನಡೆದ 2019ರ ಪಂದ್ಯಾವಳಿಯಲ್ಲಿ, ವಿಲಿಯಮ್ಸನ್ ಒಂಬತ್ತು ಇನ್ನಿಂಗ್ಸ್‌ ಗಳಿಂದ 82.57 ರ ಅತ್ಯುತ್ತಮ ಸರಾಸರಿಯಲ್ಲಿ ಎರಡು ಶತಕ ಮತ್ತು ಎರಡು ಅರ್ಧಶತಕಗಳೊಂದಿಗೆ 578 ರನ್‌ಗಳನ್ನು ಒಟ್ಟುಗೂಡಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next