Advertisement

NZ V/s SA: ಎರಡೂ ಇನ್ನಿಂಗ್ಸ್‌ ಗಳಲ್ಲಿ ಕೇನ್‌ ವಿಲಿಯಮ್ಸನ್‌ ಶತಕ

10:53 PM Feb 06, 2024 | Team Udayavani |

ಮೌಂಟ್‌ ಮೌಂಗನಿ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ನ‌ ಸೀನಿಯರ್‌ ಬ್ಯಾಟರ್‌ ಕೇನ್‌ ವಿಲಿಯಮ್ಸನ್‌ ಎರಡೂ ಇನ್ನಿಂಗ್ಸ್‌ಗಳಲ್ಲಿ ಸೆಂಚುರಿ ಬಾರಿಸಿ ಮಿಂಚಿದ್ದಾರೆ. ಇದರೊಂದಿಗೆ 3ನೇ ದಿನದಾಟದ ಅಂತ್ಯಕ್ಕೆ ನ್ಯೂಜಿಲ್ಯಾಂಡ್‌ 528 ರನ್ನುಗಳ ಬೃಹತ್‌ ಮುನ್ನಡೆ ಸಾಧಿಸಿದೆ.

Advertisement

ಕೇನ್‌ ವಿಲಿಯಮ್ಸನ್‌ ಮೊದಲ ಇನ್ನಿಂಗ್ಸ್‌ನಲ್ಲಿ 118 ರನ್‌ ಬಾರಿಸಿದ್ದರು. ದ್ವಿತೀಯ ಸರದಿಯಲ್ಲಿ ಮತ್ತೆ ಅಬ್ಬರಿಸಿ 109 ರನ್‌ ಮಾಡಿದ್ದಾರೆ. ಇದು ಅವರ 31ನೇ ಶತಕ. ಸಮಕಾಲೀನ ಟೆಸ್ಟ್‌ ಶತಕ ಸಾಧಕರಲ್ಲಿ ಕೇನ್‌ಗೆ ಈಗ ದ್ವಿತೀಯ ಸ್ಥಾನ. ಸ್ಟೀವನ್‌ ಸ್ಮಿತ್‌ ಅಗ್ರಸ್ಥಾನದಲ್ಲಿದ್ದಾರೆ (32). ಜೋ ರೂಟ್‌ 3ನೇ (30) ಮತ್ತು ವಿರಾಟ್‌ ಕೊಹ್ಲಿ (29) 4ನೇ ಸ್ಥಾನಿಯಾಗಿದ್ದಾರೆ.

ನ್ಯೂಜಿಲ್ಯಾಂಡ್‌ನ‌ 511 ರನ್ನುಗಳ ದೊಡ್ಡ ಮೊತ್ತಕ್ಕೆ ಜವಾಬು ನೀಡಿದ ದಕ್ಷಿಣ ಆಫ್ರಿಕಾ 162ಕ್ಕೆ ಕುಸಿಯಿತು. 349 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದರೂ ದಕ್ಷಿಣ ಆಫ್ರಿಕಾಕ್ಕೆ ಕಿವೀಸ್‌ ಫಾಲೋಆನ್‌ ರಿಯಾಯಿತಿ ನೀಡಿತು. 3ನೇ ದಿನದಾಟದ ಅಂತ್ಯಕ್ಕೆ ನ್ಯೂಜಿಲ್ಯಾಂಡ್‌ 4 ವಿಕೆಟಿಗೆ 179 ರನ್‌ ಗಳಿಸಿದೆ. ಇದರಲ್ಲಿ ವಿಲಿಯಮ್ಸನ್‌ ಒಬ್ಬರ ಗಳಿಕೆಯೇ 109 ರನ್‌. 132 ಎಸೆತ ಎದುರಿಸಿದ ಅವರು 12 ಬೌಂಡರಿ, ಒಂದು ಸಿಕ್ಸರ್‌ ಬಾರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next