ದುಬೈ: ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ ಅವರು ಈಗ ಟೆಸ್ಟ್ ಕ್ರಿಕೆಟ್ ನ ಅಗ್ರ ಕ್ರಮಾಂಕದ ಆಟಗಾರ. ಮೂರನೇ ಕ್ರಮಾಂಕದಲ್ಲಿದ್ದ ಅವರು ಸ್ಟೀವ್ ಸ್ಮಿತ್ ಮತ್ತು ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಜಿಗಿದಿದ್ದಾರೆ.
ಪಾಕಿಸ್ಥಾನ ವಿರುದ್ಧದ ಪಂದ್ಯದಲ್ಲಿ ಬಾರಿಸಿದ್ದ ಶತಕದ ನೆರವಿನಿಂದ 890 ಅಂಕಗಳೊಂದಿಗೆ ಮೊದಲ ಸ್ಥಾನ ಸಂಪಾದಿಸಿದ್ದಾರೆ. ಭಾರತದ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರಿದ ಸ್ಟೀವ್ ಸ್ಮಿತ್ ಎರಡು ಸ್ಥಾನ ಕಳೆದುಕೊಂಡು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಕೊಹ್ಲಿ ಎರಡನೇ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ.
ಮೆಲ್ಬರ್ನ್ ಪಂದ್ಯದಲ್ಲಿ ಶತಕ ಸಿಡಿಸಿದ ಅಜಿಂಕ್ಯ ರಹಾನೆ ಐದು ಸ್ಥಾನಗಳ ಭಡ್ತಿ ಪಡೆದು ಐದನೇ ಸ್ಥಾನಕ್ಕೇರಿದ್ದಾರೆ. ಚೇತೇಶ್ವರ ಪೂಜಾರ ಎರಡು ಸ್ಥಾನ ಕಳೆದುಕೊಂಡಿದ್ದು, 10ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ:ಡೇವಿಡ್ ವಾರ್ನರ್ ವಾಪಸ್: ಬಲಿಷ್ಠ ತಂಡ ಕಟ್ಟುವ ಯೋಜನೆಯಲ್ಲಿ ಆಸ್ಟ್ರೇಲಿಯ
ಬೌಲಿಂಗ್ ವಿಭಾಗದಲ್ಲಿ ಆರ್.ಅಶ್ವಿನ್ ಮತ್ತು ಮಿಚೆಲ್ ಸ್ಟಾರ್ಕ್ ತಲಾ ಎರಡು ಸ್ಥಾನ ಮೇಲೆರಿದ್ದು, ಕ್ರಮವಾಗಿ ಐದು ಮತ್ತು ಏಳನೇ ಸ್ಥಾನದಲ್ಲಿದ್ದಾರೆ. ಒಂದು ಸ್ಥಾನ ಮೇಲೇರಿರುವ ಬುಮ್ರಾ 9ನೇ ರ್ಯಾಂಕ್ ನಲ್ಲಿದ್ದು, ಜೋಶ್ ಹ್ಯಾಜಲ್ ವುಡ್ ಮೂರು ಸ್ಥಾನ ಕಳೆದುಕೊಂಡು 8ನೇ ಸ್ಥಾನದಲ್ಲಿದ್ದಾರೆ.