Advertisement

ಕಂಡ್ಲೂರು: ವಿದ್ಯುತ್‌ ಬಿಲ್‌ ಪಾವತಿಗೆ ಸಮಸ್ಯೆ

12:04 AM Jun 15, 2019 | Sriram |

ಕುಂದಾಪುರ: ಕಂಡ್ಲೂರು, ಕಾವ್ರಾಡಿ, ಹಳನಾಡು, ನೆಲ್ಲಿಕಟ್ಟೆ ಭಾಗದ ಜನರು ವಿದ್ಯುತ್‌ ಬಿಲ್‌ ಕಟ್ಟಲು ಸುಮಾರು 25 ಕಿ.ಮೀ. ದೂರದ ಶಂಕರನಾರಾಯಣಕ್ಕೆ ತೆರಳಬೇಕಿದೆ. ಈ ಕಾರಣಕ್ಕೆ ತಾತ್ಕಾಲಿಕವಾಗಿ ಕಾವ್ರಾಡಿ ಗ್ರಾ.ಪಂ. ವಠಾರಕ್ಕೆ ಮೆಸ್ಕಾಂ ಸಿಬಂದಿ ಬಂದು ಪ್ರತಿ ತಿಂಗಳು ಬಿಲ್‌ ಸಂಗ್ರಹಿಸುತ್ತಿದ್ದು, ಪ್ರತಿಬಾರಿಯೂ ಉದ್ದದ ಸರತಿ ಸಾಲಿದ್ದು, ಜನರು ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿಯಿದೆ.

Advertisement

ವಿದ್ಯುತ್‌ ಬಿಲ್‌ ಪಾವತಿಸುವ ಅವಧಿ ಮುಗಿದ ಬಳಿಕ ಇಲ್ಲಿರುವ ಅಂಚೆ ಕಚೇರಿಯಲ್ಲಿ ಬಿಲ್‌ ತೆಗೆದುಕೊಳ್ಳುವುದಿಲ್ಲ. ಇದರಿಂದ ಸಮಸ್ಯೆಯಾಗುತ್ತಿದೆ.

ಪಂಚಾಯತ್‌ ಕಚೇರಿಯಲ್ಲಿ ಬಿಲ್‌ ಪಾವತಿಸಲು ತಾತ್ಕಾಲಿಕ ವ್ಯವಸ್ಥೆ ಮಾಡಿದ್ದರೂ, ಇಲ್ಲಿ ಗಂಟೆಗಟ್ಟಲೆ ಕಾಯಬೇಕಾಗಿದೆ. ಇದರಿಂದ ಪಂಚಾಯತ್‌ ಕಟ್ಟಡದಲ್ಲಿ ಅಥವಾ ಬೇರೆ ಕಡೆಯಾದರೂ, ವಿದ್ಯುತ್‌ ಬಿಲ್‌ ಪಾವತಿಸುವ ಮೆಷಿನ್‌ ಅನ್ನು ಅಳವಡಿಸುವಂತೆ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಗಮಹರಿಸಲಿ ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.


Advertisement

Udayavani is now on Telegram. Click here to join our channel and stay updated with the latest news.

Next