Advertisement

ಕಂಡ್ಲೂರು: ಅಕ್ರಮ ಮರಳು ಅಡ್ಡೆಗೆ ದಾಳಿ

05:07 AM Mar 18, 2019 | |

ಕುಂದಾಪುರ: ಕಾವ್ರಾಡಿ ಗ್ರಾಮದ ಕಂಡ್ಲೂರಿನ ಜೆ.ಎಂ. ರಸ್ತೆಯ ವಾರಾಹಿ ಹೊಳೆಯಿಂದ ಅಕ್ರಮವಾಗಿ ಮರಳು ತೆಗೆಯುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಮಾ. 17ರಂದು ಬೆಳಗ್ಗೆ 6 ಗಂಟೆ ಸುಮಾರಿಗೆ ದಾಳಿ ನಡೆಸಿದ ಎಸ್‌ಐ ಶ್ರೀಧರ್‌ ನಾಯ್ಕ ನೇತೃತ್ವದ ಕುಂದಾಪುರ ಗ್ರಾಮಾಂತರ ಪೊಲೀಸರ ತಂಡ ನಾಲ್ವರನ್ನು ಬಂಧಿಸಿದ್ದಾರೆ.
 
ಕಂಡ್ಲೂರಿನ ನಿಸಾರ್‌ ಅಹಮದ್‌ (32), ಖಲೀಫಾ ಖಾಲಿದ್‌ (30), ಖಲೀಫಾ ಖುರೇಶಿ (46), ಹಾವೇರಿ ಜಿಲ್ಲೆಯ ವಿರೂಪಾಕ್ಷಪ್ಪ ಯಾನೆ ಹರೀಶ (48) ಬಂಧಿತರು. 

Advertisement

ಸ್ಥಳದಲ್ಲಿದ್ದ ಕಂಡ್ಲೂರಿನ ಕರಾಣಿ ಬಿಲಾಲ್‌, ಸಮೀರ್‌, ಅಫಾನ್‌ ಹಾಗೂ ಮುತಾಯಿಬ್‌ ಪರಾರಿಯಾಗಿದ್ದಾರೆ. 
ಸ್ಥಳದಿಂದ  2 ಪಿಕಪ್‌ ವಾಹನ, 1 ಆಮ್ನಿ ಕಾರು, ಮೊಬೈಲ್‌ ಫೋನ್‌ಗಳು, ಮರಳು ಸಾಗಾಟ ಮಾಡಿ ಸಂಗ್ರಹಿಸಿದ್ದ  37 ಸಾ.ರೂ.,  ಚೀಲಗಳಲ್ಲಿ  ಸಂಗ್ರಹಿಸಿಟ್ಟಿದ್ದ ಸುಮಾರು 3 ಯುನಿಟ್‌ ಮರಳು, ವಾಹನದಲ್ಲಿದ್ದ 1 ಯೂನಿಟ್‌ ಮರಳು ಹಾಗೂ  ದೋಣಿಯನ್ನು ವಶಪಡಿಸಿಕೊಳ್ಳಲಾಗಿದೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಡಿಸಿ, ಎಸ್ಪಿ ಭೇಟಿ ನೀಡಿದ್ದರು
ಕಂಡ್ಲೂರಿಗೆ ಇದೇ ವಿಚಾರವಾಗಿ ಮಾ. 14ರಂದು ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹಾಗೂ ಎಸ್‌ಪಿ  ನಿಶಾ ಜೇಮ್ಸ್‌  ಭೇಟಿ ನೀಡಿದ್ದರು ಎನ್ನಲಾಗಿದೆ.  

ಡಿಸಿ, ಎಸಿಗೆ  ಹಲ್ಲೆ ನಡೆದಿದ್ದ ಸ್ಥಳ
ಇದೇ ಸ್ಥಳವು ಸುಮಾರು 2 ವರ್ಷಗಳ ಹಿಂದೆ ಅಕ್ರಮ ಮರಳು ದಂಧೆಕೋರರು ಡಿಸಿ ಹಾಗೂ ಎಸಿ ಮೇಲೆ ಹಲ್ಲೆ ನಡೆಸಿ ರಾಜ್ಯ ಮಟ್ಟದಲ್ಲಿ ಕುಖ್ಯಾತಿ ಗಳಿಸಿತ್ತು. 2017ರ ಎ. 2ರಂದು ರಾತ್ರಿ ಇಲ್ಲಿಗೆ ಆಗಿನ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಕುಂದಾಪುರದ ಆಗಿನ ಉಪ ವಿಭಾಗಾಧಿಕಾರಿ ಶಿಲ್ಪಾ ನಾಗ್‌, ಅಂಪಾರು ಗ್ರಾಮ ಕರಣಿಕ ಕಾಂತರಾಜು ಹಾಗೂ ಇತರ ಅಧಿಕಾರಿಗಳು ದಾಳಿ ನಡೆಸಿದ್ದು, ಅವರ  ಮೇಲೆಯೇ ದಂಧೆಕೋರರು ಹಲ್ಲೆ ನಡೆಸಿದ್ದರು.  ಬಳಿಕ ಇಲ್ಲಿ ಮರಳುಗಾರಿಕೆ ಕಡಿಮೆಯಾಗಿದ್ದು, ಈಗ ಮತ್ತೆ  ಆರಂಭಗೊಂಡಿತ್ತು ಎನ್ನಲಾಗಿದೆ.  

Advertisement

Udayavani is now on Telegram. Click here to join our channel and stay updated with the latest news.

Next