Advertisement

ಕಾಂಡ್ಲಾ ರಕ್ಷಣೆ ಜನರಿಗೆ ಸೇರಿದ್ದು: ರೆಡ್ಡಿ

12:23 PM Jul 28, 2019 | Team Udayavani |

ಕಾರವಾರ: ಕಾಂಡ್ಲಾ ಸಸ್ಯಗಳ ಮಹತ್ವ ಸಾರ್ವಜನಿಕರಿಗೆ ತಿಳಿಸುವ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಜನರ ಮಧ್ಯೆ ಕಾಂಡ್ಲಾ ದಿನ ಆಚರಿಸುವುದು ಒಳಿತು ಎಂದು ಡಿಎಫ್‌ಓ ವಸಂತ ರೆಡ್ಡಿ ಅಭಿಪ್ರಾಯಪಟ್ಟರು.

Advertisement

ಅವರು ವಿಜ್ಞಾನ ಕೇಂದ್ರದಲ್ಲಿ ನಡೆದ ವಿಶ್ವ ಕಾಂಡ್ಲಾ ದಿನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕಾಂಡ್ಲಾ ಮಹತ್ವವನ್ನು ಜನತೆಗೆ ತಿಳಿಸುವಲ್ಲಿ ಪತ್ರಕರ್ತರ ಪಾತ್ರ ದೊಡ್ಡದು. ಕಾಂಡ್ಲಾ ಮಣ್ಣು ಸವಕಳಿ ತಡೆಯುತ್ತದೆ ಅಲ್ಲದೇ ನದಿಯ ಜೀವಿಗಳಿಗೆ ಆಶ್ರಯ ನೀಡುತ್ತವೆ ಎಂದರು. ಕೇವಲ ನಾಲ್ಕು ಗೋಡೆ ಮಧ್ಯೆ ಉಪನ್ಯಾಸ ಮಾಡುವುದಕ್ಕಿಂತ ನಾವು ನದಿ ದಂಡೆ ಜನರನ್ನು ತಲುಪಬೇಕಿದೆ ಎಂದರು.

ಮುಖ್ಯ ಅತಿಥಿಗಳಾಗಿ ಸರ್ಕಾರಿ ಪದವಿ ಕಾಲೇಜಿನ ಪ್ರಿನ್ಸಿಪಾಲೆ ಕಲ್ಪನಾ ಕೆರವಡಿಕರ ಕಾಂಡ್ಲಾ ಪರಿಸರದ ಉಪಯೋಗಗಳು ಹಾಗೂ ಜನಸಾಮಾನ್ಯರಲ್ಲಿ ಕಾಂಡ್ಲಾ ಪರಿಸರ ಹೇಗೆ ಪ್ರಭಾವ ಬೀರುತ್ತದೆ ಎಂದು ತಿಳಿಸಿದರು.

ಅಧ್ಯಕ್ಷತೆವಹಿಸಿದ್ದ ವಿ.ಎನ್‌. ನಾಯಕ ಮಾತನಾಡಿ ನೈಜ ಸಂಗತಿ ಮುಖಾಂತರ ಕಾಂಡ್ಲಾ ಪರಿಸರದ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು. ಇದೇ ವೇಳೆ ವಿಶ್ವ ಪರಿಸರ ದಿನಾಚರಣೆ ಹಾಗೂ ವಿಶ್ವ ಸಾಗರ ದಿನಾಚರಣೆ ಪ್ರಯುಕ್ತ ಕಾರವಾರ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ಚಿತ್ರಕಲಾ ಹಾಗೂ ಭಾಷಣ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Advertisement

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ ಉತ್ತರ ಕನ್ನಡ, ಕರ್ನಾಟಕ ಅರಣ್ಯ ಇಲಾಖೆ ಕಾರವಾರ ವಿಭಾಗ, ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ಕಾರವಾರ, ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ ಕಾರವಾರ ಹಾಗೂ ಉತ್ತರ ಕನ್ನಡ ಜಿಲ್ಲಾ ವಿಜ್ಞಾನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಕಾಂಡ್ಲಾ ದಿನಾಚರಣೆ ಪ್ರಯುಕ್ತ ಉತ್ತರ ಕನ್ನಡ ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಏರ್ಪಡಿಸಿದ್ದವು. ಕರ್ನಾಟಕದಲ್ಲಿನ ಕಾಂಡ್ಲಾ ಸಸ್ಯಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ ಎಂಬ ವಿಷಯದ ಮೇಲೆ ಡಾ| ವಸಂತ ರೆಡ್ಡಿ ಕಾಂಡ್ಲಾ ಸಸ್ಯಗಳ ಪುನಃಸ್ಥಾಪನೆ ಎಂಬ ವಿಷಯದ ಮೇಲೆ ಸುಹಾಸ ನಾಯ್ಕ, ಸಂರಕ್ಷಣಾಧಿಕಾರಿ ಕಾಂಡ್ಲಾ ಸಸ್ಯಗಳ ವೈವಿಧ್ಯತೆ ಕುರಿತು ಕುಮಟಾದ ಪ್ರಕಾಶ ಮೇಸ್ತಾ ಉಪನ್ಯಾಸ ನೀಡಿದರು.

ಬಸವರಾಜ, ವಲಯ ಅರಣ್ಯ ಸಂರಕ್ಷಣಾಧಿಕಾರಿ ಜಿ.ವಿ. ನಾಯ್ಕ ಇದ್ದರು. ಹೊನ್ನಾವರ, ಅಂಕೋಲಾ ಮತ್ತು ಕಾರವಾರ ತಾಲೂಕಿನ ವಿವಿಧ ಕಾಲೇಜಿನಿಂದ ಸುಮಾರು 100 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರದ ಅಧಿಕಾರಿ ಡಾ| ಸಂಜೀವ ದೇಶಪಾಂಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಭಾಗ್ಯಶ್ರೀ ನಾಯ್ಕ ವಂದಿಸಿದರು. ಕವಿತಾ ಮೇಸ್ತಾ ನಿರೂಪಿಸಿದರು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ಕಾಂಡ್ಲಾ ಸಸ್ಯಗಳ ಮೇಲೆ ಚಲನಚಿತ್ರ ಪ್ರದರ್ಶಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next