Advertisement

Kanchanjunga Express ‘ಕವಚ’ ಇದ್ದಿದ್ದರೆ ರೈಲು ಅಪಘಾತ ತಪ್ಪುತ್ತಿತ್ತು!

12:59 AM Jun 18, 2024 | Team Udayavani |

ಹೊಸದಿಲ್ಲಿ/ಕೊಲ್ಕೊತಾ: ಕಾಂಚನಗಂಗಾ ಎಕ್ಸ್‌ಪ್ರೆಸ್‌ ರೈಲು ಅಪಘಾತವು ರೈಲು ಸುರಕ್ಷೆಯ ಬಗ್ಗೆ ಮತ್ತೂಮ್ಮೆ ವ್ಯಾಪಕ ಚರ್ಚೆಗೆ ಅವಕಾಶ ಕಲ್ಪಿಸಿದೆ. ರೈಲು ಅಪಘಾತಗಳನ್ನು ತಪ್ಪಿಸುವ ಅತ್ಯಾಧುನಿಕ “ಕವಚ’ ವ್ಯವಸ್ಥೆ ಇದ್ದಿದ್ದರೆ, ಈ ರೈಲು ಅಪಘಾತವನ್ನು ತಪ್ಪಿಸಬಹುದಾಗಿತ್ತು ಎಂದು ಹೇಳಲಾಗುತ್ತಿದೆ.

Advertisement

ಕಾಂಚನಗಂಗಾ ರೈಲು ಅಪಘಾತದ ಮಾರ್ಗದಲ್ಲೂ ಕವಚ ಇರಲಿಲ್ಲ ಎಂದು ರೈಲ್ವೇ ಮಂಡ ಳಿಯ ಸಿಇಒ ಜಯಾ ವರ್ಮಾ ಸಿನ್ಹಾ ಹೇಳಿದ್ದಾರೆ. ಹೊಸದಿಲ್ಲಿ- ಗುವಾಹಾಟಿ ರೈಲ್ವೇ ಮಾರ್ಗದಲ್ಲಿ ಸದ್ಯಕ್ಕೆ ಕವಚ ವ್ಯವಸ್ಥೆ ಇಲ್ಲ. ದೇಶಾದ್ಯಂತ 1,500 ಕಿ.ಮೀ. ರೈಲು ಮಾರ್ಗದಲ್ಲಿ ಮಾತ್ರ ಕವಚ್‌ ವ್ಯವಸ್ಥೆ ಇದ್ದು, ವರ್ಷಾಂತ್ಯಕ್ಕೆ 3 ಸಾವಿರ ಕಿ.ಮೀ. ಮಾರ್ಗಕ್ಕೆ ವಿಸ್ತರಿಸಲಾಗುತ್ತದೆ ಎಂದು ಜಯಾ ಸಿನ್ಹಾ ತಿಳಿಸಿದ್ದಾರೆ. ಕಳೆದ ವರ್ಷ ಒಡಿಶಾದಲ್ಲಿ ಸಂಭವಿಸಿದ ಅಪಘಾತದಲ್ಲಿ 288 ಜನರು ಮೃತಪಟ್ಟಿದ್ದರು. ಆಗಲೂ ಕವಚ ಬಗ್ಗೆ ಚರ್ಚೆ ನಡೆದಿತ್ತು.

ಅಷ್ಟು ದೊಡ್ಡ ಅಪಘಾತದ ಬಳಿಕವೂ ಕವಚ ವ್ಯವಸ್ಥೆಯನ್ನು ಎಲ್ಲ ರೈಲು ಮಾರ್ಗಗಳಿಗೆ ಯಾಕೆ ವಿಸ್ತರಿಸುತ್ತಿಲ್ಲ ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ. ಭಾರತೀಯ ರೈಲ್ವೇ ಒಂದು ಲಕ್ಷಕ್ಕೂ ಅಧಿಕ ರೈಲು ಮಾರ್ಗವನ್ನು ಹೊಂದಿದೆ. ಈ ಪೈಕಿ ಕೇವಲ 1,500 ಕಿ.ಮೀ. ರೈಲು ಮಾರ್ಗದಲ್ಲಷ್ಟೇ ಕವಚ ವ್ಯವಸ್ಥೆ ಇದೆ. ಹಾಗಾಗಿ, ಉಳಿದೆಲ್ಲ ಮಾರ್ಗಗಳಲ್ಲಿ ಸಂಭಾವ್ಯ ಅಪಘಾತ ತಡೆಯುವುದು ಬಹಳ ಕಷ್ಟ. ಕವಚ ದುಬಾರಿಯಾ ದ್ದರಿಂದ, ಅಳವಡಿಕೆ ನಿಧಾನವಾಗುತ್ತಿದೆ ಎನ್ನಲಾಗಿದೆ.

ಏನಿದು ಕವಚ ವ್ಯವಸ್ಥೆ?
“ಕವಚ’ ದೇಶಿಯವಾಗಿ ನಿರ್ಮಿಸಲಾಗಿರುವ ಸ್ವಯಂ ಚಾಲಿತ ರೈಲು ಸುರಕ್ಷ ವ್ಯವಸ್ಥೆಯಾಗಿದೆ. ಇದನ್ನು ಹಳಿಗಳ ಜತೆ ಅಳವಡಿಸುವುದರಿಂದ ರೈಲಿನ ವೇಗ ನಿಯಂತ್ರಿಸಬಹುದು. ಸಂಭಾವ್ಯ ರೈಲು ಅಪಘಾತ ತಡೆಯುತ್ತದೆ. ಹವಾಮಾನ ವೈಪರೀತ್ಯದಿಂದ ರೈಲು ಚಾಲಕರಿಗೆ ಸಿಗ್ನಲ್‌ ಕಾಣದೇ ಇದ್ದಾಗ ಕವಚ್‌ ರೈಲಿನ ಸುರಕ್ಷಿತ ಸಂಚಾರಕ್ಕೆ ಸಹಾಯ ಮಾಡುತ್ತದೆ.

ಕಾರ್ಯನಿರ್ವಹಣೆ ಹೇಗೆ?
ರೈಲು ಚಾಲಕ ಬ್ರೇಕ್‌ ಒತ್ತಲು ವಿಫ‌ಲವಾದಲ್ಲಿ ಕವಚ ಸ್ವಯಂ ಬ್ರೇಕ್‌ ಹಾಕುವ ಮೂಲಕ, ವೇಗವನ್ನು ತಗ್ಗಿ ಸುತ್ತದೆ. ಇದರಲ್ಲಿನ ರೇಡಿಯೋ ತರಂಗಗಳ ಮೂಲಕ ರೈಲಿನ ನಿರ್ದಿಷ್ಟ ಸ್ಥಳ, ಯಾವ ದಿಕ್ಕಿನಲ್ಲಿ ಸಂಚ ರಿಸುತ್ತದೆ ಎಂಬ ಮಾಹಿತಿ ದೊರಕುತ್ತವೆ. ಕವಚ ಸಕ್ರಿಯವಾದರೆ, 5 ಕಿ.ಮೀ. ವ್ಯಾಪ್ತಿ ಎಲ್ಲ ರೈಲುಗಳು ನಿಲ್ಲುತ್ತವೆ. ಎಚ್ಚರಿಕೆ ಸಂದೇಶ ರವಾನಿಸುತ್ತದೆ.

Advertisement

19 ರೈಲುಗಳ ಸಂಚಾರ ರದ್ದು
ಕೋಲ್ಕತಾ: ರೈಲು ದುರಂತದ ಹಿನ್ನೆಲೆಯಲ್ಲಿ ಒಟ್ಟು 19 ರೈಲುಗಳ ಸಂಚಾರಕ್ಕೆ ತೊಂದರೆಯಾಗಿದೆ. ರದ್ದಾಗಿರುವ ರೈಲುಗಳ ಪೈಕಿ ಗುವಾಹಾಟಿ- ಬೆಂಗ ಳೂರು ಎಕ್ಸ್‌ಪ್ರೆಸ್‌ ರೈಲು ಕೂಡ ಸೇರಿದೆ. ನಾಗರಕೋಯಿಲ್‌ ಜಂಕ್ಷನ್‌-ದಿಬ್ರೂ ಗಢ ಎಕ್ಸ್‌ ಪ್ರಸ್‌, ಕಾಮಾಖ್ಯ-ಗಯಾ ಎಕ್ಸ್‌ಪ್ರೆಸ್‌ ರೈಲುಗಳೂ ರದ್ದಾಗಿರುವ ರೈಲುಗಳ ಪಟ್ಟಿಯಲ್ಲಿ ಸೇರಿವೆ.

ವೈಷ್ಣವ್‌ ರಾಜೀನಾಮೆ ಕೊಡಲಿ: ಪ್ರತಿಪಕ್ಷಗಳು ಆಗ್ರಹ
ಪಶ್ಚಿಮ ಬಂಗಾಳದಲ್ಲಿನ ರೈಲು ದುರಂತದ ಬಗ್ಗೆ ಪ್ರತಿಪಕ್ಷಗಳು ಕೇಂದ್ರ ಸರಕಾರದ ವಿರುದ್ಧ ಮುಗಿ ಬಿದ್ದಿವೆ. ದುರಂತದ ಹಿನ್ನೆಲೆಯಲ್ಲಿ ರೈಲ್ವೇ ಸಚಿವ ಅಶ್ವಿ‌ನಿ ವೈಷ್ಣವ್‌ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿವೆ.

ದುರಂತದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ “ದುರಂತ ನಡೆದದ್ದು ವಿಷಾದನೀಯ. ಶೀಘ್ರ ಸಂತ್ರಸ್ಥರಿಗೆ ಪರಿಹಾರ ನೀಡಬೇಕು. 10 ವರ್ಷಗಳ ಮೋದಿ ಸರಕಾರ ರೈಲ್ವೇ ಇಲಾಖೆಯನ್ನು ಸೂಕ್ತವಾಗಿ ನಿಭಾಯಿಸಿಲ್ಲ. ಕ್ಯಾಮೆರಾ ಮೂಲಕ ಸ್ವಪ್ರತಿಷ್ಠೆ ಹೆಚ್ಚಿಸಿಕೊಳ್ಳುವ ತಾಣವನ್ನಾಗಿ ಪರಿವರ್ತಿ ಸಿದ್ದಾರೆ’ ಖರ್ಗೆ ಆರೋಪಿಸಿದ್ದಾರೆ.

10 ವರ್ಷಗಳಲ್ಲಿ ರೈಲ್ವೇ ದುರಂತಗಳು ಅಧಿಕವಾ ಗಿದೆ. ಇದು ಮೋದಿ ಸರಕಾರದ ಅವ್ಯವಸ್ಥೆ ಹಾಗೂ ನಿರ್ಲಕ್ಷದ ಪ್ರತಿಫ‌ಲವಾಗಿದೆ ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ದುರಂತಕ್ಕೆ ಮೋದಿ ಸರಕಾರವೇ ಹೊಣೆ ಹೊರ ಬೇಕು ಎಂದು ಟ್ವೀಟ್‌ನಲ್ಲಿ ತಿಳಿಸಿ ದ್ದಾರೆ. ಮಾಜಿ ಸಚಿವ ಶರದ್‌ ಪವಾರ್‌ ಪ್ರತಿ ಕ್ರಿಯೆ ನೀಡಿ, ವಾಜಪೇಯಿ ಸಂಪುಟದಲ್ಲಿ ರೈಲ್ವೇ ಸಚಿ ವ ರಾಗಿದ್ದ ನಿತೀಶ್‌ ಕುಮಾರ್‌ ಅವರು 1999ರಲ್ಲಿನ ರೈಲು ದುರಂತಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ದ್ದರು ಎಂದು ನೆನಪಿಸಿªದಾರೆ. ಆದರೆ, ಅಶ್ವಿ‌ನಿ ವೈಷ್ಣವ್‌ ಆ ರೀತಿ ನಡೆದುಕೊಂಡಿಲ್ಲ ಎಂದು ಟೀಕಿಸಿದ್ದಾರೆ.

ರೈಲ್ವೆ ಸುರಕ್ಷತ ಆಯುಕ್ತರಿಂದ ಅಪಘಾತ ತನಿಖೆ: ಸಚಿವ ವೈಷ್ಣವ್‌
ರೈಲು ದುರಂತದ ಬಗ್ಗೆ ರೈಲ್ವೇ ಸುರಕ್ಷಾ ಆಯುಕ್ತರಿಂದ ತನಿಖೆ ನಡೆಸಲಾಗುತ್ತದೆ ಎಂದು ಸಚಿವ ಅಶ್ವಿ‌ನಿ ವೈಷ್ಣವ್‌ ಹೇಳಿದ್ದಾರೆ. ಅಪಘಾತ ನಡೆದ ರಂಗಾಪಾನಿ ಎಂಬಲ್ಲಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಇಂಥ ದುರಂತಗಳು ಸಂಭವಿಸದಂತೆ ಎಚ್ಚರಿಕೆ ವಹಿಸಲಾಗುತ್ತದೆ. ದುರಂತ ಹೇಗಾಯಿತು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತದೆ. ಅದರ ನೇತೃತ್ವವನ್ನು ರೈಲ್ವೇ ಸುರಕ್ಷತ ಆಯುಕ್ತರು ವಹಿಸಿಕೊಳ್ಳಲಿ ದ್ದಾರೆ ಎಂದರು. ವಿಪಕ್ಷಗಳು ದುರಂತದ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು “ಇದು ರಾಜಕೀಯ ನಡೆಸುವ ಸಮಯ ಅಲ್ಲ’ ಎನ್ನುವ ವಿಪಕ್ಷಗಳಿಗೆ ತಿರುಗೇಟು ನೀಡಿದರು.

ದುರಂತ ಸ್ಥಳಕ್ಕೆ ಬೈಕಿನಲ್ಲಿ ಬಂದ ರೈಲ್ವೇ ಸಚಿವ!
ರೈಲು ದುರಂತ ನಡೆದ ರಂಗಾಪಾನಿ ಎಂಬಲ್ಲಿಗೆ ರೈಲ್ವೇ ಸಚಿವ ಅಶ್ವಿ‌ನಿ ವೈಷ್ಣವ್‌ ಬೈಕ್‌ನಲ್ಲಿ ತೆರಳಿದ ಘಟನೆ ನಡೆದಿದೆ. ತುರ್ತಾಗಿ ತೆರಳ ಬೇಕಾಗಿರುವ ಹಿನ್ನೆಲೆಯಲ್ಲಿ ಸಚಿವರು ಸ್ಥಳೀಯರೊಬ್ಬರ ಬೈಕ್‌ನಲ್ಲಿ ಕುಳಿತು ಘಟನ ಸ್ಥಳಕ್ಕೆ ತೆರಳಿ ಪರಿಸ್ಥಿತಿ ಪರಿಶೀಲಿಸಿದರು.

ದೇಶದಲ್ಲಿ ಕಳೆದ ವರ್ಷ 18 ರೈಲು ಅಪಘಾತಗಳು
ಸಾಕಷ್ಟು ಸುರಕ್ಷ ಕ್ರಮಗಳ ಹೊರತಾಗಿಯೂ ದೇಶದಲ್ಲಿ ರೈಲು ಅಪಘಾತಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂಬುದಕ್ಕೆ ಪಶ್ಚಿಮ ಬಂಗಾಲದ ಘಟನೆ ಸಾಕ್ಷಿಯಾಗಿದೆ. ಕಳೆದ ವರ್ಷದಲ್ಲಿ ಒಡಿಶಾದ ಬಾಲಾಸೋರ್‌ ಅಪಘಾತ ಸೇರಿ 18 ರೈಲು ಅಪಘಾತಗಳು ಸಂಭವಿಸಿವೆ. ಈ ಅವಘತಾದಲ್ಲಿ 296 ಜನರು ಮೃತಪ ಟ್ಟಿದ್ದರು. 2014ರಿಂದ ಇಲ್ಲಿಯ ವರೆಗೆ ಸಾಕಷ್ಟು ರೈಲು ಅಪಘಾತಗಳು ಸಂಭವಿಸಿವೆ. 2016ರಲ್ಲಿ ಉತ್ತರ ಪ್ರದೇಶದ ಕಾನ್ಪುರದಲ್ಲಿ ಸಂಭವಿಸಿದ ಅಪಘಾತದಲ್ಲಿ 159 ಜನರು ಮೃತಪಟ್ಟಿದ್ದರು.

ಬೆಳಗ್ಗಿನಿಂದಲೇ ಕೈಕೊಟ್ಟಿದ್ದ ಸ್ವಯಂಚಾಲಿತ ಸಿಗ್ನಲ್‌
ಪಶ್ಚಿಮ ಬಂಗಾಲದ ರಂಗಾಪಾನಿ ಎಂಬಲ್ಲಿ ರೈಲು ದುರಂತ ಉಂಟಾಗುವುದಕ್ಕಿಂತ ಮೊದಲೇ ಸ್ವಯಂಚಾಲಿತ ಸಿಗ್ನಲ್‌ ವ್ಯವಸ್ಥೆ ಬೆಳಗ್ಗೆ 5.50 ರಿಂದಲೇ ಕೆಟ್ಟು ನಿಂತಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ತ್ರಿಪುರಾದಿಂದ ಕೋಲ್ಕತಾಗೆ ತೆರಳುತ್ತಿದ್ದ ಕಾಂಚನಗಂಗಾ ಎಕ್ಸ್‌ಪ್ರೆಸ್‌ ರೈಲನ್ನು ರಾಣಿಪತ್ರ ಮತ್ತು ಚತ್ತರ್‌ಹತ್‌ ರೈಲು ನಿಲ್ದಾಣಗಳ ನಡುವೆ ನಿಲ್ಲಿಸಲಾಯಿತು.

ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ ಸ್ವಯಂಚಾಲಿತ ಸಿಗ್ನಲ್‌ ವ್ಯವಸ್ಥೆ ಕೆಟ್ಟು ನಿಂತಾಗ ರಾಣಿಪತ್ರ ರೈಲ್ವೇ ನಿಲ್ದಾಣಾಧಿಕಾರಿ ಟಿಎ912 (ಕೆಂಪು ಸಿಗ್ನಲ್‌ ದಾಟುವ ಅವಕಾಶ) ಎಂಬ ಲಿಖೀತ ಅಧಿಕಾರ ನೀಡಿದರು. ಅದೇ ಸಮಯದಲ್ಲಿ ಬೆಳಗ್ಗೆ 8.42ಕ್ಕೆ ರಂಗಪಾನಿಯಿಂದಲೇ ಹೊರಟಿದ್ದ ಗೂಡ್ಸ್‌ ರೈಲು, ಕಾಂಚನಗಂಗಾ ಎಕ್ಸ್‌ಪ್ರೆಸ್‌ ರೈಲಿಗೆ ಹಿಂದಿನಿಂದ ಗುದ್ದಿದೆ. ಹೀಗಾಗಿ ಇದರಿಂದ ಗಾರ್ಡ್‌ಗಳ ಕೋಚ್‌, ಎರಡು ಪಾರ್ಸೆಲ್‌ ಕೋಚ್‌ಗಳು, ಒಂದು ಆಸನದ ಕೋಚ್‌ ಕಳಚಿಕೊಂಡಿವೆ. ರೈಲ್ವೇ ಇಲಾಖೆಯ ಮೂಲಗಳು ಹೇಳುವ ಪ್ರಕಾರ ಘಟನೆಗೆ ನಿಖರವಾಗಿರುವ ಕಾರಣ ತನಿಖೆಯಿಂದಲೇ ಗೊತ್ತಾಗಲಿದೆ.

ವರ್ಷ   ದಿನಾಂಕ   ಅಪಘಾತ ನಡೆದ ಸ್ಥಳ   ಸಾವಿನ ಸಂಖ್ಯೆ
2024 ಫೆ. 28 ಕಾಲಾಜರಿಯಾ, ಝಾರ್ಖಂಡ್‌ 2
2023 ಜೂ. 2 ಬಾಲಾಸೋರ್‌, ಒಡಿಶಾ 296
2023 ಅ. 29 ವಿಜಯನಗರಂ, ಆಂಧ್ರಪ್ರದೇಶ 14
2022 ಜ. 13 ಮೈನಗುರಿ,
ಪ. ಬಂಗಾಲ 9
2017 ಆ. 18 ಖತೌಲಿ,
ಉ. ಪ್ರದೇಶ 23
2016 ನ. 20 ಕಾನ್ಪುರ, ಉ. ಪ್ರದೇಶ 150
2014 ಮೇ. 26 ಖಾಲಿಲಾಬಾದ್‌,
ಉ. ಪ್ರದೇಶ 25

ವಿಷಾದಕರ ಸಂಗತಿ
ರೈಲು ದುರಂತ ವಿಷಾದಕರ. ಎಲ್ಲ ಪರಿಹಾರ ಕಾರ್ಯಗಳು ನಡೆಯಲಿ. ಮೃತರ ಕುಟುಂಬಕ್ಕೆ ಸಾಂತ್ವನ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ.
ದ್ರೌಪದಿ ಮುರ್ಮು, ರಾಷ್ಟ್ರಪತಿ

ರೈಲ್ವೇ ಇಲಾಖೆ ಅನಾಥವಾಗಿದೆ
ರೈಲ್ವೇ ದರ ಹೆಚ್ಚು ಮಾಡುವುದರಲ್ಲಿ ತೊಡಗಿದೆ. ಪ್ರಯಾ ಣಿಕ ರಿಗೆ ಸೌಲಭ್ಯ ಕಲ್ಪಿಸಲ್ಲ ಯಾರೂ ಸರಿಯಾಗಿ ಗಮನಿಸದೆ ಇಲಾಖೆ ಅನಾಥ ವಾಗಿದೆ.
ಮಮತಾ ಬ್ಯಾನರ್ಜಿ, ಪ. ಬಂಗಾಲ ಸಿಎಂ

ಸಚಿವರು ರಾಜೀನಾಮೆ ನೀಡಲಿ
ತಪ್ಪು ನಿರ್ಧಾರ, ತಪ್ಪು ನಿರ್ವಹಣೆ ಯಿಂದ ರೈಲು ದುರಂತ ಸಂಭವಿಸಿದೆ. ರೈಲ್ವೇ ಸಚಿವರು ಹೊಣೆ ಹೊತ್ತು ರಾಜೀನಾಮೆ ನೀಡಬೇಕು.
ಪ್ರಮೋದ್‌ ತಿವಾರಿ, ಕಾಂಗ್ರೆಸ್‌ ನಾಯಕ

ದುರದೃಷ್ಟಕರ ಘಟನೆ
ರೈಲು ದುರಂತ ಸಂಭವಿಸಿದ್ದು ದುರದೃಷ್ಟಕರ. ಪರಿಸ್ಥಿತಿ ಸೂಕ್ಷ್ಮವಾಗಿ ಅವಲೋಕಿ ಸಿದ್ದೇವೆ. ಎಲ್ಲ ಅಗತ್ಯ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗಿದೆ.
ಹಿಮಂತ್‌ ಬಿಸ್ವಾ ಶರ್ಮಾ, ಆಸ್ಸಾಂ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next