Advertisement

Uppinangady; ಮರದ ಸಲಕರಣೆಗೆ ಪರ್ಯಾಯವಾಗಿ ಹೊಸ ಪ್ರಯೋಗ

11:41 PM Jan 14, 2024 | Team Udayavani |

ಉಪ್ಪಿನಂಗಡಿ: ಗೃಹ ನಿರ್ಮಾಣದಲ್ಲಿ ನೂತನ ಅವಿಷ್ಕಾರ ದೊಂದಿಗೆ ಹೆಸರುವಾಸಿ ಯಾಗಿರುವ ಉಜಿರೆಯಲ್ಲಿರುವ ಲಕ್ಷ್ಮೀ ಇಂಡಸ್ಟ್ರೀಸ್‌ನವರ “ಕನಸಿನ ಮನೆ’ಯ ಉಪ್ಪಿನಂಗಡಿ ಶಾಖೆಯನ್ನು ಜ.14ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್‌ ಉದ್ಘಾಟಿಸಿದರು.

Advertisement

ಮನೆ ನಿರ್ಮಾಣದಲ್ಲಿ ಪೀಠೊಪಕರಣ ಸಹಿತ ಇತರ ಸಲಕರಣೆಗೆ ಮರಗಳ ಮತ್ತು ಕುಶಲಕರ್ಮಿಗಳ ಅಲಭ್ಯತೆಯ ನಡುವೆ ಕಡಿಮೆ ಮೊತ್ತದಲ್ಲಿ ಸಿಮೆಂಟ್‌ ಮತ್ತು ಫೈಬರ್‌ನಿಂದ ನಿರ್ಮಿಸುವ ಉಜಿರೆ ಕೆ. ಮೋಹನ್‌ ಅವರ “ಕನಸಿನ ಮನೆ’ಯು ಉತ್ಪನ್ನಗಳಿಂದಾಗಿ ಜನರಿಗೆ ಅನುಕೂಲವಾಗಿವೆ. ಬದುಕು ಕಟ್ಟೋಣ ಬನ್ನಿ ಎಂಬ ಸ್ವಯಂಸೇವಾ ತಂಡವನ್ನು ಕಟ್ಟಿರುವ ಅವರು ಸಮಾಜದ ಸಂಕಷ್ಟಕ್ಕೆ ನೆರವಾಗಿದ್ದಾರೆ ಎಂದು ಅವರು ಹೇಳಿದರು.

ಶಾಸಕ ಹರೀಶ್‌ ಪೂಂಜ ಮಾತನಾಡಿ, ಸಮಾಜದಿಂದ ದೊರೆತ ಸಂಪತ್ತನ್ನು ಸಮಾಜಕ್ಕೆ ಸಮರ್ಪಿಸುವ ಮೂಲಕ ಅವರು ಮಾದರಿ ಎನಿಸಿದ್ದಾರೆ. ಅವರ ತಾಯಿಯ ಆಶೀರ್ವಾದವೇ ಅವರ ಶಕ್ತಿಯಾಗಿದ್ದು, ಉದ್ಯಮ ಇನ್ನಷ್ಟು ವಿಸ್ತಾರಗೊಳ್ಳಲಿ ಎಂದು ಶುಭ ಹಾರೈಸಿದರು.

ವಿಧಾನ ಪರಿಷತ್‌ ಸದಸ್ಯರಾದ ಕೆ. ಪ್ರತಾಪ್‌ ಸಿಂಹ ನಾಯಕ್‌ ಅವರು ಮಾತನಾಡಿ, ಹೊಸ ತಂತ್ರಜ್ಞಾನದೊಂದಿಗೆ ಹೊಸ- ಹೊಸ ಉತ್ಪನ್ನಗಳನ್ನು ಅವಿಷ್ಕರಿಸಿರುವ ಮೋಹನ್‌ ಕುಮಾರ್‌ ಅವರು ತಾನು ಗಳಿಸುವುದು ಕೇವಲ ಸ್ವಂತಕ್ಕಾಗಿ ಅಲ್ಲ. ಸಮಾಜಕ್ಕಾಗಿ ಎಂಬ ಭಾವನೆಯುಳ್ಳವರು ಎಂದರು.

ಪುತ್ತೂರು ಕೌಶಲ್‌ ಕನ್‌ಸ್ಟ್ರಕ್ಷನ್‌ನ ನವೀನ್‌ ಕುಮಾರ್‌, ಅಧ್ಯಕ್ಷತೆ ವಹಿಸಿದ್ದ ಬರೋಡದ ಶಶಿ ಕೆಟರಿಂಗ್‌ ಸರ್ವೀಸಸ್‌ ಪ್ರç.ಲಿ.ನ ಶಶಿಧರ ಶೆಟ್ಟಿ ಮಾತನಾಡಿದರು.

Advertisement

ಬಿ.ಎಂ.ಆರ್ಕೇಡ್‌ನ‌ ಮಾಲಕ ಇಮಿ¤ಯಾಝ್ ಯು.ಟಿ. ಅವರನ್ನು ಸಮ್ಮಾನಿಸಲಾಯಿತು.

ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ರಾಜೇಶ್‌ ಪೈ ಉಪಸ್ಥಿತರಿದ್ದರು. ಪ್ರಮುಖರಾದ ನವಶಕ್ತಿಯ ರಾಜೇಶ್‌ ಶೆಟ್ಟಿ, ಲೀಲಾವತಿ ರಾಜು ಮೇಸ್ತ್ರಿ, ರೇಶ್ಮಾ ಮೋಹನ್‌ ಕುಮಾರ್‌, ಮೌಲ್ಯ ಲಕ್ಷ್ಮೀ, ಮಾನ್ವಿ ಲಕ್ಷ್ಮೀ, ಗಣ್ಯರಾದ ರಾಧಾಕೃಷ್ಣ ನಾೖಕ್‌, ಎನ್‌.ಗೋಪಾಲ ಹೆಗ್ಡೆ, ಹರೀಶ್‌ ಉಪಾಧ್ಯಾಯ, ಕೆ.ಉದಯ ಕುಮಾರ್‌, ಧನ್ಯ ಕುಮಾರ್‌ ರೈ, ಎನ್‌.ಉಮೇಶ್‌ ಶೆಣೈ ಭಾಗವಹಿಸಿದ್ದರು.

ಸಂಸ್ಥೆಯ ಮಾಲಕ ಕೆ.ಮೋಹನ್‌ ಕುಮಾರ್‌ ಸ್ವಾಗತಿಸಿದರು. ತಿಮ್ಮಯ್ಯ ನಾಯ್ಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

36 ವರ್ಷದ ಹಿಂದೆ ತನ್ನ ತಂದೆಯವರಾದ ದಿ| ರಾಜು ಮೇಸ್ತ್ರಿಯವರು ಈ ಸಂಸ್ಥೆಯನ್ನು ಕಟ್ಟಿದರು. ರಾಜ್ಯಾದ್ಯಂತ ನಮ್ಮ ಸಂಸ್ಥೆಯ ಉತ್ಪನ್ನಗಳು ಪರಿಚಿತವಾಗಿವೆ. ನಮ್ಮ ಬೆಳವಣಿಗೆಗೆ ಕಾರಣರಾದವರು ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಹಾಗೂ ಡಿ.ಹರ್ಷೇಂದ್ರ ಕುಮಾರ್‌ ಅವರು. ಸಂಸ್ಥೆಯ ಸಿಬಂದಿ ನಿಷ್ಠೆ, ಪ್ರಾಮಾಣಿಕತೆಯ ದುಡಿಮೆ ಹಾಗೂ ಗ್ರಾಹಕ ಬಂಧುಗಳ ಸಹಕಾರವೇ ಶ್ರೀರಕ್ಷೆಯಾಗಿದೆ ಎಂದು ಸಂಸ್ಥೆಯ ಮಾಲಕ ಕೆ. ಮೋಹನ್‌ ಕುಮಾರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next