Advertisement
ಸೇವಂತಿಗೆ, ಗುಲಾಬಿ ಹೂಗಳಿಂದ ಅರಳಿರುವ ಶಕ್ತಿದೇವತೆ ಕಬ್ಟಾಳಮ್ಮ ದೇವಿಯ ದೇವಾಲಯ ಪ್ರಮುಖ ಆಕರ್ಷಣೆಯಾಗಿದೆ. 18 ಅಡಿ ಅಗಲ ಮತ್ತು 20 ಅಡಿ ಎತ್ತರಕ್ಕೆ ಸುಮಾರು 2 ಲಕ್ಷಕ್ಕೂ ಅಧಿಕ ಸೇವಂತಿಗೆ ಮತ್ತು ಗುಲಾಬಿ ಹೂಗಳಿಂದ ರಚನೆಯಾಗಿರುವ ದೇವಾಲಯದ ಪ್ರತಿರೂಪ ಮತ್ತು ಅದರಲ್ಲಿ ವಿರಾಜಮಾನವಾಗಿರುವ ದೇವಿಯ ಉತ್ಸವ ಮೂರ್ತಿ ನೋಡುಗರಲ್ಲಿ ಭಕ್ತಿಯನ್ನು ಮೂಡಿಸುತ್ತಿರುವುದು ವಿಶೇಷ.
ಕನಕಪುರದಲ್ಲಿ ಡಿಕೆಶಿ ಚಾರಿಟಬಲ್ ಟ್ರಸ್ ವತಿಯಿಂದ ಜಿಲ್ಲಾ ಮಟ್ಟದ ಕನಕೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆ ಫಲಪುಷ್ಪ ಪ್ರದರ್ಶನ ಏರ್ಪಡಿಸಿದೆ. ಸಾವಿರಾರು ಮಂದಿ ಫಲಪುಷ್ಪ ಪ್ರದರ್ಶನ ವೀಕ್ಷಿಸಿದರು.ಜೊತೆಗೆ ರೈತರು ಮತ್ತು ಸಾಮಾನ್ಯ ನಾಗರಿಕರಿಗೆ ವಿವಿಧ ವಿಚಾರಗಳಲ್ಲಿ ಮಾಹಿತಿಯನ್ನು ನೀಡುತ್ತಿದೆ. ಉತ್ತಮ ಆರೋಗ್ಯಕ್ಕೆ ಯೋಗ ಅವಶ್ಯ: ಸುರೇಶ್ ಕನಕಪುರ: ಬದುಕಿನಲ್ಲಿ ಶಾಂತಿ ನೆಮ್ಮದಿ ಆರೋಗ್ಯವನ್ನುಕಾಣಬೇಕಾದರೆ ಯೋಗಾಸನ ಅತ್ಯಂತ ಅವಶ್ಯ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು.
Related Articles
Advertisement
ದೇಗುಲ ಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮೀಜಿ ಮಾತನಾಡಿ, ಮನುಷ್ಯ ಜನೋಪಯೋಗಿ ಕಾರ್ಯಗಳನ್ನು ಮಾಡಿದಾಗ ಮಾತ್ರ ಜೀವನದಲ್ಲಿ ಸದ್ಗತಿಗಳು ಕಾಣಲು ಸಾಧ್ಯ. ರಾಮಾಯಣದಲ್ಲಿ ಶ್ರೀರಾಮ ತನ್ನ ಪ್ರಜೆಗಳಿಗಾಗಿ ಇಡೀ ತನ್ನ ಜೀವನವನ್ನೆ ಮುಡಿಪಾಗಿಟ್ಟನು. ಆದೇ ರೀತಿ ತಾಲೂಕಿನ ಜನರ ಏಳಿಗೆ ಹಾಗೂ ಅಭಿವೃದ್ಧಿಗಾಗಿ .ಕೆ.ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಅವರು ಟೊಂಕ ಕಟ್ಟಿನಿಂತಿರುವುದು ನಿಜಕ್ಕೂ ಅತ್ಯಂತ ಶ್ಲಾಘನೀಯವಾದವಿಚಾರವೆಂದರು. ಪ್ರತಿವರ್ಗದ ಜನರ ಏಳಿಗಾಗಿ ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಸಹ ಸನ್ಮಾನವನ್ನು ಮಾಡುತ್ತಿರುವುದು ಅವರ ವಿಶಾಲವಾದ ಹೃದಯವನ್ನು ತೋರಿಸುತ್ತದೆ ಎಂದು ನುಡಿದರು. ನೀರು ಗಾಳಿ ಶರೀರಕ್ಕೆ ಎಷ್ಟು ಅವಶ್ಯವೋ ಅಷ್ಟೇ ಅವಶ್ಯ ಯೋಗ. ಯೋಗವನ್ನು ಪ್ರತಿನಿತ್ಯ ಮಾಡುವುದರಿಂದ ರೋಗ ಮುಕ್ತವಾಗಿ ಮಾಡಬಹುದಾಗಿದೆ. ಪ್ರತಿನಿತ್ಯ ಧ್ಯಾನ ದೇವರ ಸ್ಮರಣೆ ಮಾಡುವುದರಿಂದ ಮನಸ್ಸಿನಲ್ಲಿ ಇರುವ ಕಲ್ಮಷವನ್ನು ಹೋಗಲಾಡಿಸಬಹುದಾಗಿದೆ ಎಂದರು. ಯೋಗ ಗುರು ವಿದ್ಯಾಶ್ರೀ ಚನ್ನಬಸವಣ್ಣ ಯೋಗ ಪ್ರದರ್ಶನ ಮಾಡಿದರು.