Advertisement
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುರುಬ ಬೃಹತ್ ಎಸ್ ಟಿ ಹೋರಾಟ ಸಮಾವೇಶದಿಂದ ಮಾಜಿ ಸಿಎಂ ಸಿದ್ದರಾಮಯ್ಯ ದೂರ ಉಳಿದಿಲ್ಲ. ಸಿದ್ದರಾಮಯ್ಯ ಕುರುಬ ಎಸ್ ಟಿ ಸೇರ್ಪಡೆ ವಿರೋಧಿಯಲ್ಲ. ಅವರಿಗೂ ಒಪ್ಪಿಗೆ ಇದೆ, ಸಮಾವೇಶದಲ್ಲಿ ಮಾತ್ರ ಭಾಗವಹಿಸುತ್ತಿಲ್ಲ. ಒಪ್ಪಿಗೆ ಪಡೆದೆ ಈ ಸಮಾವೇಶ ಮಾಡ್ತಿದ್ದೇವೆ ಎಂದರು.
Related Articles
Advertisement
ಎಸ್ ಟಿ ಸಮಾವೇಶ ಮೂಲಕ ಈಶ್ವರಪ್ಪ, ಪುತ್ರ ಕಾಂತೇಶ ಅವರನ್ನು ರಾಜಕೀಯವಾಗಿ ಮುನ್ನಲೆಗೆ ತರುವ ವಿಚಾರದಿಂದ ಮಾಡುತ್ತಿಲ್ಲ. ಇದರಲ್ಲಿ ಯಾರ ಹಿತಾಸಕ್ತಿಯೂ ಇಲ್ಲ. ಇಲ್ಲಿ ಒಂದೇ ಬೇಡಿಕೆ. ಬೇರೆ ಕಲ್ಪನೆ ನೀಡುವುದು ಬೇಡ ಎಂದರು.
ಯಾರನ್ನೂ ಮುನ್ನಲೆಗೆ ತರುವುದಲ್ಲ, ಕಾಂತೇಶ್ ರಾಜಕೀಯವಾಗಿ ತರುವುದೂ ಅಲ್ಲ. ಕುರುಬರಿಗೆ ಎಸ್ ಟಿ ಮೀಸಲಾತಿ ಸಿಗಬೇಕೆಂದು ಹೋರಾಟ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಶಾಸಕರು, ಮಂತ್ರಿಗಳು ಸಮಾಜಕ್ಕಾಗಿ ಅಧಿಕಾರ ತ್ಯಾಗ ಮಾಡಬೇಕೆಂದರೆ ಮಾಡಲೇಬೇಕು. ಸಮಯ ಬಂದರೆ ನಮ್ಮ ಶಾಸಕರಿಗೂ ಅಧಿಕಾರ ತ್ಯಾಗಕ್ಕೆ ಹೇಳುತ್ತೇವೆ. ಖಂಡಿತ ಅಧಿಕಾರ ತ್ಯಾಗಕ್ಕೆ ಕೇಳಿಯೇ ಕೇಳುತ್ತೇವೆ ಎಂದರು.
ಕುರುಬ ಸಮಾಜದ ಎಚ್ ವಿಶ್ವನಾಥ, ಎಂಟಿಬಿ, ಆರ್ ಶಂಕರ್ ಗೆ ಸಚಿವ ಸ್ಥಾನ ನೀಡಬೇಕು. ಬಿಜೆಪಿ ಸರ್ಕಾರ ಬರಲು 4 ಜನ ಶಾಸಕರ ಪಾತ್ರ ಇದೆ. ಅವರು ಬಂದಿದ್ದರಿಂದ ಬಿಜೆಪಿ ಸಕಾ೯ರ ಬಂತು. ಮಾತು ಕೊಟ್ಟಂತೆ ಸಿಎಂ ನಡೆಯಬೇಕು. ನಡೆಯುತ್ತಾರೆನ್ನುವ ಭರವಸೆ ಇದೆ. ಎಚ್.ವಿಶ್ವನಾಥ, ಎಂಟಿಬಿ, ಆರ್.ಶಂಕರ್ ಮೂರು ಶಾಸಕರಿಗೆ ಸಚಿವ ಸ್ಥಾನ ಕೊಡಲೇಬೇಕು ಎಂದು ಒತ್ತಾಯಿಸಿದರು.
ಸಚಿವ ಸ್ಥಾನ ಕೊಡದೆ ಹೋದರೆ ಯಾವ ತೀರ್ಮಾನ ಕೈಗೊಳ್ಳಬೇಕಾ ಅಂತ ನಿರ್ಧಾರ ಮಾಡುತ್ತೇವೆ ಎಂದು ಎಚ್ಚರಿಸಿದರು.