Advertisement

ಕನಕಮಜಲು: ಇಲ್ಲಿ ಎಲ್ಲೆಂದರಲ್ಲಿ ಹರಿಯುವುದಿಲ್ಲ ತ್ಯಾಜ್ಯ ನೀರು..!

04:15 PM Jul 13, 2018 | |

ಸುಳ್ಯ : ಸಭಾಭವನ, ಮಂದಿರದಿಂದ ಬರುವ ತ್ಯಾಜ್ಯ ನೀರು ಎಲ್ಲೆಂದರಲ್ಲಿ ಹರಿಯುವ ಬದಲು ಒಂದೆಡೆ ಸಂಗ್ರಹವಾದರೆ ಹೇಗೆ ? ಇಂತಹ ಪರಿಸರ ಸ್ನೇಹಿ ಯೋಚನೆ ಹೊಳೆದು, ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ನೇತೃತ್ವ ವಹಿಸಿದ್ದು ಕನಕಮಜಲು ಯುವಕ ಮಂಡಲ..!

Advertisement

ನೆಹರೂ ಯುವಕೇಂದ್ರ, ಮಹಾತ್ಮಾ ಗಾಂಧಿ ಯುವ ಸ್ವಚ್ಚ ಮಹಾಭಿಯಾನ, ಸ್ವಚ್ಚ ಭಾರತ್‌ ಸಮ್ಮರ್‌ ಇಂಟರ್ನ್ಶಿಪ್‌ ಯೋಜನೆಯಡಿ ಕನಕಮಜಲು ಯುವಕ ಮಂಡಲದ ನೇತೃತ್ವದಲ್ಲಿ ಕನಕಮಜಲು ಗ್ರಾ.ಪಂ. ಉದ್ಯೋಗ ಖಾತರಿ ಯೋಜನೆ, ಭಜನ ಮಂದಿರ ಸಹಯೋಗದೊಂದಿಗೆ ಕನಕಮಜಲು ಶ್ರೀ ಆತ್ಮರಾಮ ಭಜನ ಮಂದಿರದ ವಠಾರದಲ್ಲಿ ತ್ಯಾಜ್ಯ ನೀರು ಸಂಗ್ರಹದ ಹೊಂಡ (sಟಚk ಟಜಿಠಿ) ನಿರ್ಮಿಸಿ, ಪರಿಸರ ಸ್ವಚ್ಚತೆಗೆ ಆದ್ಯತೆ ನೀಡಿದ ಸಕರಾತ್ಮಕ ಸಂಗತಿಯಿದು.

ಪರಿಸರ ಸ್ವಚ್ಚತೆ
ಇಲ್ಲಿನ ಭಜನ ಮಂದಿರ, ಸಭಾಭವನದಲ್ಲಿ ವರ್ಷದ ನಾನಾ ದಿನಗಳಲ್ಲಿ ಹಲವು ಚಟುವಟಿಕೆಗಳು ಆಯೋಜನೆಗೊಳ್ಳುತ್ತದೆ. ವಿವಾಹ, ಸಭೆ ಸಮಾರಂಭ, ಅಯ್ಯಪ್ಪ ವೃತಾಚರಣೆಯಂತಹ ಹಲವು ಧಾರ್ಮಿಕ ಚಟುವಟಿಕೆಗಳು ನಡೆಯುತ್ತವೆ. ಅಂತಹ ಸಂದರ್ಭದಲ್ಲಿ ಊಟ- ಉಪಾಹಾರ, ಇತ್ಯಾದಿ ವ್ಯವಸ್ಥೆಗಳ ತಯಾರಿ ವೇಳೆ ಸಂಗ್ರಹಗೊಳ್ಳುವ ತ್ಯಾಜ್ಯ ನೀರು ಎಲ್ಲೆಂದರಲ್ಲಿ ಸಾಗುವ ಬದಲು ಪೈಪು ಮೂಲಕ ಹೊಂಡದೊಳಗೆ ಇಳಿಸುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಪರಿಸರದಲ್ಲಿ ಸಾಂಕ್ರಾಮಿಕ ರೋಗ ನಿಯಂತ್ರಣ, ಪರಿಸರ ಸ್ವಚ್ಚತೆ ಸಾಧ್ಯ ಎಂಬ ಆಶಯ ಇಲ್ಲಿನದ್ದು.

33 ಸಾವಿರ ರೂ. ವೆಚ್ಚ 
ಈ ಹೊಂಡ (soak-pit)) ನಿರ್ಮಾಣಕ್ಕೆ 33 ಸಾವಿರ ರೂ. ವೆಚ್ಚ ತಗಲಿದೆ. 12ಫೀಟ್‌ ಹೊಂಡ ರಚಿಸಿ, ಅದರೊಳಗೆ 1 ಫೀಟ್‌ನ 12 ರಿಂಗ್‌ ಅಳವಡಿಸಲಾಗಿದೆ. ಈ ಹೊಂಡಕ್ಕೆ ಸಭಾಭವನ, ಮಂದಿರದ ಭಾಗದಿಂದ ಪೈಪ್‌ ಅಳವಡಿಸಿ, ತ್ಯಾಜ್ಯ ನೀರು ಹರಿದು ಹೋಗಲು ಸಂಪರ್ಕ ಕಲ್ಪಿಸಲಾಗಿದೆ. ವರ್ಷವಿಡಿ ಉತ್ಪತ್ತಿಯಾಗುವ ತ್ಯಾಜ್ಯ ಈ ಹೊಂಡಕ್ಕೆ ಇಳಿಯುತ್ತದೆ. ಹೊಂಡಕ್ಕೆ ಮೇಲ್ಭಾಗದಲ್ಲಿ ಮುಚ್ಚಳ ಅಳವಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next