Advertisement

ಕನಕಗಿರಿ:ವಿರೋಧಿಗಳಿಗೆ ಉತ್ತರ ನೀಡಲು ಸಕಾಲ: ಜನಾರ್ದನ ರೆಡ್ಡಿ

06:04 PM Mar 09, 2023 | Team Udayavani |

ಕನಕಗಿರಿ: ನನ್ನ ರಾಜಕೀಯ ಬೆಳವಣಿಗೆ ಸಹಿಸಲಾಗದೇ, ನನ್ನನ್ನು ಹತ್ತಿಕ್ಕಲು ಪ್ರಯತ್ನಿಸುವವರಿಗೆ ಉತ್ತರ ನೀಡುವ ಸಮಯ ಬಂದಿದೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು. ಅವರು ಪಟ್ಟಣದ ಉತ್ಸವ ಮೈದಾನದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ವತಿಯಿಂದ ಬುಧವಾರ ಏರ್ಪಡಿಸಿದ್ದ ಬೃಹತ್‌ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

Advertisement

ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರದ ಜೊತೆಗೆ ಬಿ. ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಮೂಲ ಕಾರಣ ನಾನು. ಕೆಲ ವಿರೋಧಿಗಳು ನನ್ನ ಬೆಳವಣಿಗೆ ಸಹಿಸಲಾಗದೇ ಇಲ್ಲಸಲ್ಲದೇ ನನ್ನ ವಿರುದ್ಧ ಆರೋಪ ಮಾಡಿ ಬಂಧನಕ್ಕೆ ಒಳಪಡಿಸಿದರು. ರಾಜ್ಯದಲ್ಲಿ ನೂತನವಾಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸುವ ಮೂಲಕ ಜನರ ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

ನಮ್ಮ ಪಕ್ಷಕ್ಕೆ ರಾಜ್ಯದ ಜನತೆಯಿಂದ ಉತ್ತಮ ಸ್ಪಂದನೆ ದೊರೆಯುತ್ತಿದ್ದು, 31ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧೆ ಮಾಡುವುದರ ಜೊತೆಗೆ 25ರಿಂದ 30 ಸ್ಥಾನಗಳಲ್ಲಿ ಜಯ ಸಾ ಧಿಸಲಿದ್ದಾರೆ. ನಾವು ಬಹುಮತ ಹೊಂದದಿದ್ದರೂ ಉತ್ತಮವಾದ ಆಡಳಿತ ನೀಡುವ ಸರ್ಕಾರದ ಜೊತೆ ಕೈಗೂಡಿಸುವ ನಿಟ್ಟಿನಲ್ಲಿ ಜನರ ಬೇಡಿಕೆಗಳನ್ನು ಈಡೇರಿಸಲಾಗುವುದು.

ಕನಕಗಿರಿ ಕ್ಷೇತ್ರದಲ್ಲಿ ಒಬ್ಬ ನಾಯಕ ಕ್ಷೇತ್ರವನ್ನು ಅಭಿವೃದ್ಧಿ ಪಡಿಸದೇ ಆರೋಪಗಳಲ್ಲಿ ಸಿಲುಕಿ ವೀಡಿಯೋಗಳಲ್ಲಿ ರಾಜ್ಯಾದ್ಯಂತ ಪ್ರಚಾರವಾಗಿದ್ದಾರೆ. ಇನ್ನೊಬ್ಬರನ್ನು ನಾನೇ ರಾಜಕೀಯವಾಗಿ ಬೆಳೆಸಿದರು ಈಗಾಗಲೇ ಅವರ ದರ್ಪ ಜನರಿಗೆ ಬೇಸರವಾಗಿದೆ. ವಿದ್ಯಾವಂತ ಕೆಆರ್‌ಪಿ ಪಕ್ಷದ ಚಾರುಲ್‌ ವೆಂಕಟರಮಣ ದಾಸರಿಯನ್ನು ಬಾರಿ ಗೆಲ್ಲಿಸಿ ನನಗೆ ಶಕ್ತಿ ನೀಡಿ ಎಂದರು.

ಕನಕಗಿರಿ ಕ್ಷೇತ್ರದ ಅಭ್ಯರ್ಥಿ ಚಾರುಲ್‌ ವೆಂಕಟರಮಣ ದಾಸರಿ, ಕೆಆರ್‌ಪಿ ಪಕ್ಷದ ಜಿಲ್ಲಾಧ್ಯಕ್ಷ ಮನೋಹರ ಗೌಡ, ರಾಜ್ಯ ಮಹಿಳಾ ಶಕ್ತಿ ಕೇಂದ್ರ ಅಧ್ಯಕ್ಷೆ ಹೇಮಲತಾ ಮಾತನಾಡಿದರು. ಈ ವೇಳೆಯಲ್ಲಿ ಕನಕಗಿರಿ, ಕಾರಟಗಿ ತಾಲೂಕಿನಲ್ಲಿ ಸಾಧನೆಗೈದ ಮಹಿಳೆಯರನ್ನು ಸನ್ಮಾನಿಸಿ, ಗೌರವಿಸಲಾಯಿತು.

Advertisement

ಜಿಪಂ ಮಾಜಿ ಉಪಾಧ್ಯಕ್ಷ ವಿರೂಪಾಕ್ಷಗೌಡ ಹೇರೂರು, ಕೆಆರ್‌ಪಿಪಿ ಮಹಿಳಾ ಜಿಲ್ಲಾಧ್ಯಕ್ಷೆ ರಾಜೇಶ್ವರಿ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಚನ್ನವೀರನಗೌಡ, ಜಿಲ್ಲಾ ವಕ್ತಾರ ಸಂಗಮೇಶ, ಯುವ ಮುಂದಾಳು ಚನ್ನಪ್ಪ ತೆಗ್ಗಿನಮನಿ, ಪ್ರಮುಖರಾದ ವಿರುಪನಗೌಡ ಹೇರೂರು, ಜಿಲಾನಿಭಾಷಾ, ಶಿವು ಸಜ್ಜನ, ಮಹೇಶ ಹಾದಿಮನಿ, ನಾಗರಾಜ ಬಾವಿಕಟ್ಟಿ, ಕರಿಬಸಪ್ಪ, ನಾಗರಾಜ, ರಮೇಶ ಆರ್ಯಾರ ಸೇರಿದಂತೆ ಇತರರು ಇದ್ದರು.

ಈ ಹಿಂದೆ ಪ್ರಾದೇಶಿಕ ಪಕ್ಷವನ್ನು ಕಟ್ಟಿದವರು ಅಧಿಕಾರ ಮಾಡುವಲ್ಲಿ ಯಶಸ್ವಿಯಾಗಿಲ್ಲ. ಜನಾರ್ದನ ರೆಡ್ಡಿ ಯಾವ ಲೆಕ್ಕ ಎನ್ನುವವರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಸಿಗಲಿದೆ. ರಾಜ್ಯದ ಉದ್ದಗಲ್ಲಕ್ಕೂ ಸಂಚರಿಸಿ ಪಕ್ಷವನ್ನು ಸಂಘಟಿಸುವ ಬೆಳೆಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುವಲ್ಲಿ ಯಶಸ್ವಿಯಾಗುತ್ತೇನೆ ಎಂಬ ವಿಶ್ವಾಸವಿದೆ.
ಗಾಲಿ ಜನಾರ್ದನ ರೆಡ್ಡಿ
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ

Advertisement

Udayavani is now on Telegram. Click here to join our channel and stay updated with the latest news.

Next