Advertisement

ಪುಸ್ತಕ ಪ್ರೇಮಿಗಳಿಗೆ ಗ್ರಂಥಾಲಯ ಕೊರತೆ

04:44 PM Oct 17, 2019 | Naveen |

ಕನಕಗಿರಿ: ಜ್ಞಾನಾರ್ಜನೆಯ ಮೂಲ ಗ್ರಂಥಾಲಯ. ಪತ್ರಿಕೆಗಳು ಜೊತೆಗೆ ಸಾಹಿತ್ಯ, ಕವನ ಸೇರಿದಂತೆ ವಿವಿಧ ಪುಸ್ತಕ ಓದಬೇಕಾದ ವಿದ್ಯಾರ್ಥಿಗಳಿಗೆ ಮತ್ತು ಓದುಗರಿಗೆ ಪಟ್ಟಣದಲ್ಲಿ ಸೂಕ್ತ ಗ್ರಂಥಾಲಯ ಸೌಲಭ್ಯ ಇಲ್ಲದಂತಾಗಿದೆ.

Advertisement

ಪಟ್ಟಣದಲ್ಲಿ ಪದವಿ, ಪಿಯುಸಿ ಸೇರಿದಂತೆ ವಿವಿಧ ಕಾಲೇಜುಗಳು ಇವೆ. ಶಿಕ್ಷಕರು ಪಟ್ಟಣದಲ್ಲೇ ವಾಸವಾಗಿದ್ದು, ಓದುಗರ ಸಂಖ್ಯೆ ಹೆಚ್ಚಿದೆ. ಆದರೆ ತಾಲೂಕು ಕೇಂದ್ರವಾಗಿರುವ ಕನಕಗಿರಿಗೆ ಒಂದು ಉತ್ತಮ ಗ್ರಂಥಾಲಯ ಅವಶ್ಯಕತೆ ಇದೆ.

ಕನಕಗಿರಿಯಲ್ಲಿ ಇರುವ ಸಾರ್ವಜನಿಕ ಗ್ರಂಥಾಲಯವೂ ಮೊದಲು ಗ್ರಾಪಂನಲ್ಲಿ ಪ್ರಾರಂಭಿಸಲಾಗಿತ್ತು. ಕಳೆದ 15 ವರ್ಷಗಳಿಂದ ಕನಕಾಚಲಪತಿ ದೇವಸ್ಥಾನದ ಹಿಂದೆ ಇರುವ ಗಾಂಧಿ ಭವನಕ್ಕೆ ಸ್ಥಳಾಂತರಿಸಲಾಯಿತು. ಸೂಕ್ತವಾದ ವ್ಯವಸ್ಥೆ ಇಲ್ಲದೇ ಇರುವ ಕಾರಣ ಸಾರ್ವಜನಿಕರು ಗ್ರಂಥಾಲಯಕ್ಕೆ ಹೋಗುವುದನ್ನೇ ಬಿಟ್ಟಿದ್ದಾರೆ.

ಸೌಲಭ್ಯ ಕೊರತೆ: ಸಾರ್ವಜನಿಕ ಗ್ರಂಥಾಲಯಕ್ಕೆ ಸ್ವಂತ ಕಟ್ಟಡ ಇಲ್ಲದಂತಾಗಿದೆ. ಇದರಿಂದ ಗಾಂಧಿ
ಭವನದಲ್ಲಿ ಗ್ರಂಥಾಲಯವನ್ನು ನಡೆಸಲಾಗುತ್ತಿದ್ದು,
ಮಳೆ ಬಂದ ಸಂದರ್ಭದಲ್ಲಿ ಸೋರುತ್ತದೆ. ಗ್ರಂಥಾಲಯದಲ್ಲಿ ಕುರ್ಚಿಗಳು, ಪುಸ್ತಕಗಳನ್ನು ಜೋಡಿಸಲು ಅಲಮೆರಾಗಳನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆ ಒದಗಿಸಿಲ್ಲ. ಗ್ರಂಥಾಲಯ 5200 ಪುಸ್ತಕವಿದ್ದು, ಅದರಲ್ಲಿ ಅರ್ಧದಷ್ಟು ಪುಸ್ತಕಗಳು ಹಾಳಾಗಿವೆ. ಜ್ಞಾನಾರ್ಜನೆಗೆ ಮೂಲವಾಗಬೇಕಾದ ಗ್ರಂಥಾಲಯವೂ ಮೂಲ ಸೌಲಭ್ಯವಿಲ್ಲದೇ ಸೊರಗುತ್ತಿದೆ.

ತೆರಿಗೆ ಸಂಗ್ರಹ: ಗ್ರಾಮ ಪಂಚಾಯಿತಿ ವತಿಯಿಂದಲೂ ಗ್ರಂಥಾಲಯ ತೆರಿಗೆಯನ್ನು ಸಂಗ್ರಹಿಸುತ್ತಾ ಬರಲಾಗುತ್ತಿದೆ. ಆದರೆ ಸೂಕ್ತವಾದ ಗಂಥಾಲಯ ಇಲ್ಲದಂತಾಗಿದೆ. ಸದ್ಯ ಪಟ್ಟಣ ಪಂಚಾಯಿತಿಯಲ್ಲಿ ಕೂಡಾ ಪಟ್ಟಣ ನಿವಾಸಿಗಳಿಂದ
ಗ್ರಂಥಾಲಯ ತೆರಿಗೆಯನ್ನು ಕಟ್ಟುತ್ತಿದ್ದಾರೆ. ಸಂಗ್ರಹ ವಾದ ಹಣವನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆ ಗೆ ಪಾವತಿಸಲಾಗುತ್ತಿದೆ ಎನ್ನುತ್ತಾರೆ  ಪಪಂ ಸಿಬ್ಬಂದಿ

Advertisement

ನಿವೇಶನವಿದೆ: ಪಟ್ಟಣದ 5ನೇ ವಾರ್ಡ್‌ನಲ್ಲಿ ಗ್ರಂಥಾಲಯ ನಿರ್ಮಿಸಲು ಹಿಂದಿನ ಗ್ರಾ.ಪಂಯಲ್ಲಿ ನಿವೇಶನವನ್ನು ನಿಗದಿ ಮಾಡಲಾಗಿದೆ. ಆದರೆ ನಿವೇಶನ ಇದ್ದರೂ ಕೂಡಾ ಕಟ್ಟಡ ನಿರ್ಮಾಣವಾಗಿಲ್ಲ.

ಜನಪತ್ರಿನಿಧಿಗಳ ಹಾಗೂ ಅ ಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ನೂತನ ಕಟ್ಟಡ ನಿರ್ಮಾಣವಾಗಿಲ್ಲ. ಈಗಲಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸುವ್ಯವಸ್ಥಿತವಾದ ಗ್ರಂಥಾಲಯ ನಿರ್ಮಾಣ ಮಾಡಬೇಕು ಎಂಬುದು ಕನಕಗಿರಿ ಪಟ್ಟಣದ ನಿವಾಸಿಗಳ ಆಗ್ರಹ.

Advertisement

Udayavani is now on Telegram. Click here to join our channel and stay updated with the latest news.

Next