ಕನಕಗಿರಿ: ಸಮೀಪದ ಆದಾಪುರ ಗ್ರಾಮದಲ್ಲಿ ತನ್ನ ಹೊಲದಲ್ಲಿ ನಕಲಿ ಮಧ್ಯ ಮಾರಾಟ ಮಾಡುತ್ತಿದ್ಧಾನ ಮೇಲೆ ಡಿ.ಎಸ್.ಪಿ ಶೇಖರಪ್ಪ, ಪಿಐ ಜಗದೀಶ ಕೆಜಿ ನೇತೃತ್ವದ ತಂಡ ದಾಳಿ ನಡೆಸಿ 22,750 ಮೌಲ್ಯದ ಮದ್ಯದ ಬಾಟಲಿಗಳನ್ನು ಗುರುವಾರ ವಶಪಡಿಸಿಕೊಂಡಿದೆ.
ನಕಲಿ ಮಧ್ಯ ಮಾರಾಟ ಮಾಡುತ್ತಿದ್ದಾತ ರಾಮಣ್ಣ ತಂ. ಗುರಿಕಾರ.
ಎಸ್ ಪಿ ಯಶೋದಾ ವೆಂಟಗೋಡಿ ಅವರ ಆದೇಶದ ಮೇರೆಗೆ ಸುತ್ತ-ಮುತ್ತಲಿನ ಗ್ರಾಮದಲ್ಲಿ ಮದ್ಯ ಮಾರಾಟ ಮಾಡುವವರ ಮೇಲೆ ಕಾನೂನು ಕ್ರಮ ಜರಗಿಸುವುದರ ಮೂಲಕ ನಕಲಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲಾಗುತ್ತಿದೆ.
ಗ್ರಾಮದ ರಾಮಣ್ಣ ಎಂಬ ವ್ಯಕ್ತಿ ತನ್ನ ಹೊಲದಲ್ಲಿ 350 ಲೀಟರ್ ಸ್ಪೀರಿಟ್ ಸಂಗ್ರಹಿಸಿಟ್ಟಿದ್ದಾನೆ ಮತ್ತು ಮದ್ಯದ ಬಾಟಲಿ 130 ಆಡೆಸ್ಯೂ ಲೇಬಲ್, 260 ಇಂಪಿರಿಯರ್ ಬ್ಲೂ ಹಾಗೂ ಸಣ್ಣ ಮತ್ತು ದೊಡ್ಡ ಮುಚ್ಚಳಗಳನ್ನು ಜಪ್ತಿ ಮಾಡಲಾಗಿದೆ.
ಅರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳ ಪಡಿಸಲಾಗಿದೆ ಎಂದು ಅಧಿಕಾರಿ ವರ್ಗ ತಿಳಿಸಿದ್ದಾರೆ.
ಈ ವೇಳೆಯಲ್ಲಿ ವಿಶೇಷ ತಂಡದ ಪೋಲಿಸ್ ಪೇದೆಗಳಾದ ಸಿದ್ದನಗೌಡ ಹೆಚ್.ಸಿ, ಗವಿಸಿದ್ದಯ್ಯ, ಮಲ್ಲಪ್ಪ, ಶ್ರೀಕಾಂತ ಎಹೆಚ್ ಸಿ, ಪ್ರಭುಗೌಡ ಇದ್ದರು.