Advertisement

ಕನಕದಾಸರು ಜಾತಿಗೆ ಸೀಮಿತರಲ್ಲ

09:59 PM Nov 15, 2019 | Lakshmi GovindaRaju |

ಚನ್ನರಾಯಪಟ್ಟಣ: ಕನಕದಾಸರ ಕೀರ್ತನೆಗಳು ಹಾಗೂ ಮಂಡಿಕೆಗಳನ್ನು ಅಧ್ಯಯನ ಮಾಡಿದರೆ ಪ್ರತಿ ಮಂಡಿಕೆಗಳಿಗೆ ನೊಬೈಲ್‌ ಪ್ರಶಸ್ತಿ ನೀಡಬೇಕಾಗುತ್ತದೆ ಇದಕ್ಕೆ ವಿಶ್ವದ ಸಂಪತ್ತು ಸಾಲುವುದಿಲ್ಲ ಎಂದು ವಾಗ್ಮಿ ಸುಬ್ಬಣ್ಣ ಹೇಳಿದರು.

Advertisement

ತಾಲೂಕು ಆಡಳಿತ ಹಾಗೂ ಕನಕ ಸಂಘದಿಂದ ನಡೆದ ಕನಕದಾಸರ 532ನೇ ಜಯಂತ್ಯುತ್ಸವದಲ್ಲಿ ಮಾತನಾಡಿ, ನಾವು ಕನಕದಾಸರನ್ನು ಒಂದು ಜನಾಂಗಕ್ಕೆ ಸೀಮಿತ ಮಾಡುತ್ತಿದ್ದೇವೆ, ಅದರೆ ಅವರು ಜಾತಿಯತೆಯನ್ನು ತೊಳೆಯಲು ಶ್ರಮಿಸಿದ ಮಹಾಸಂತ ಇವರ ಸಾಹಿತ್ಯವನ್ನು ಪ್ರತಿ ಮನೆ ಮನಗಳಲ್ಲಿ ಪಠಣವಾಗಬೇಕು ಆಗ ಕನಕರ ಕೀರ್ತನೆಗಳ ಮಹತ್ವ ತಿಳಿಯುತ್ತದೆ ಎಂದರು.

ಕೃತಿಗಳ ಸ್ಮರಣೆ ಅಗತ್ಯ: ವರ್ಷದಲ್ಲಿ ಒಂದು ದಿವಸ ಜಯಂತಿ ಆಚರಣೆ ಮಾಡಿದರೆ ಸಾಲುವುದಿಲ್ಲ ನಿತ್ಯೋತ್ಸವ ಆಗಬೇಕು, ರಾಜ್ಯದ ಪ್ರತಿ ಹಳ್ಳಿಯಲ್ಲಿ ಜಯಂತಿ ಆಚರಣೆ ಆಗಬೇಕು. ಇವರ ಭಕ್ತರು, ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಾಲೂಕು ಆಡಳಿತದ ಆಚರಣೆಯಲ್ಲಿ ಪಾಲ್ಗೊಳ್ಳಬೇಕು ಆದರೆ ಕುರುಬ ಸಮುದಾಯದವರು ಕೆಲವರು ಮಾತ್ರ ಆಗಮಿಸುತ್ತಿದ್ದಾರೆ ಅವರ ಕನ್ನಡ ಸಾಹತ್ಯಕ್ಕೆ ಕೊಡುಗೆ ನೀಡಿದ್ದಾರೆ ಅವರ ಕೃತಿಗಳ ಸ್ಮರಣೆ ಆಗಬೇಕಿದೆ ಎಂದು ತಿಳಿಸಿದರು.

ಒಂದು ಜನಾಂಗಕ್ಕೆ ಜಯಂತಿ ಮಾಡಬಾರದು: ಭಾರತೀಯ ಪರಂಪರೆ ಹೇಳುವ ನಾಥಪರಂಪರೆಯನ್ನು ನಾವು ನೆನಪು ಮಾಡಬೇಕೆಂದರೆ ಒಂದು ಜಾತಿಯವರು ಸಹಕಾರ ಮಾಡುತ್ತಿದ್ದಾರೆ ಸಂತರು, ಋಷಿಮುನಿಗಳು ಭಾರತಕ್ಕೆ ಅನೇಕ ಕೊಡುಗೆ ನೀಡಿದ್ದಾರೆ. ಅವರನ್ನು ನೆನಪು ಮಾಡುವುದು ನಮ್ಮಗಳ ಕರ್ತವ್ಯ, ಗುರುಗಳ ಸ್ಮರಣೆ ಆಗಬೇಕು, ಜಗತ್‌ ಪಾಲಕರನ್ನು ನಾವು ನಿತ್ಯವೂ ಸ್ಮರಣೆ ಮಾಡಬೇಕು ಇದಾಗುತ್ತಿಲ್ಲ ಒಂದು ಜನಾಂಗದ ಸಂಘದ ಪದಾಧಿಕಾರಿಗಳು ಸೇರಿ ಜಯಂತಿ ಆಚರಿಸುವಂತಾಗಿದೆ ಎಂದರು.

25 ಲಕ್ಷ ರೂ. ಅನುದಾನ: ಶಾಸಕ ಸಿ.ಎನ್‌.ಬಾಲಕೃಷ್ಣ ಮಾತನಾಡಿ, ತಾಲೂಕಿನಲ್ಲಿ ಕನಕ ಭವನ ನಿರ್ಮಾಣ ಮಾಡಲಾಗುತ್ತಿದ್ದು ಈಗಾಗಲೆ 25 ಲಕ್ಷ ರೂ. ಅನುದಾನ ನೀಡಲಾಗಿದೆ ಮುಂದೆ 25 ಲಕ್ಷ ರೂ. ಅನುದಾನ ನೀಡಲಾಗುವುದು. ಚನ್ನರಾಯಪಟ್ಟಣದಲ್ಲಿ ಇತ್ತೀಚಿನ ದಿವಸಗಳಲ್ಲಿ ಆತಂಕಕಾರಿ ಬೆಳವಣಿಗೆಗಳು ನಡೆಯುತ್ತಿವೆ ಇದಕ್ಕೆ ಕಡಿವಾಣ ಹಾಕಲು ತಾಲೂಕು ಆಡಳಿತ ಮುಂದಾಗಲಿದೆ ಎಂದು ಭರವಸೆ ನೀಡಿದರು.

Advertisement

ಗೈರಾದವರ ವಿರುದ್ಧ ಕ್ರಮಕ್ಕೆ ಮನವಿ: ತಾಲೂಕು ಕುರುಬರ ಸಂಘದ ಅಧ್ಯಕ್ಷ ರಮೇಶ್‌ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಯಡಿಯೂರಪ್ಪ ಕನಕಜಯಂತಿ ಆಚರಣೆ ಮಾಡುವಂತೆ ಆದೇಶ ಹೊರಡಿಸಿ ಸರ್ಕಾರಿ ರಜಾ ಘೋಷಣೆ ಮಾಡಿದರು, ಆದರೆ ಸರ್ಕಾರಿ ಅಧಿಕಾರಿಗಳು ಸರ್ಕಾರಿ ಆದೇಶವನ್ನು ಕಡೆಗಣಿಸುತ್ತಿದ್ದು ಪ್ರತಿ ವರ್ಷವೂ ಕನಕ ಜಯಂತಿಯಲ್ಲಿ ಪಾಲ್ಗೊಳ್ಳುತ್ತಿಲ್ಲ ಯಾವ ಇಲಾಖೆ ಅಧಿಕಾರಿಗಳು ಗೈರಾಗುತ್ತಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ನೆರೆ ಸಂತ್ರಸ್ತ ನಿಧಿಗೆ ತಾಲೂಕು ಕುರುಬರ ಸಂಘದಿಂದ 25 ಸಾವಿರ ದೇಣಿಗೆ ನೀಡಿದರು. ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ ಕನಕ ಭವನಕ್ಕೆ 10 ಲಕ್ಷ ರೂ. ಅನುದಾನ ನೀಡುವುದಾಗಿ ತಿಳಿಸಿದರು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಗಣನೀಯವಾಗಿ ಸಮಾಜ ಸೇವೆ ಸಲ್ಲಿಸಿದವರಿಗೆ ಸನ್ಮಾನಿಸಲಾಯಿತು. ತಹಶೀಲ್ದಾರ್‌ ಜೆ.ಬಿ.ಮಾರುತಿ, ತಾಪಂ ಇಒ ಚಂದ್ರಶೇಖರ್‌, ಪುರಸಭೆ ಮುಖ್ಯಾಧಿಕಾರಿ ಕುಮಾರ, ತಾಪಂ ಅಧ್ಯಕ್ಷ ಇಂದಿರಾ, ಉಪಾಧ್ಯಕ್ಷ ಗಿರೀಶ್‌, ಸದಸ್ಯರಾದ ಹೊನ್ನೇಗೌಡ, ಮಂಜುನಾಥ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next