Advertisement

ಕನಕದಾಸ, ರಾಯಣ್ಣ ಬೇರೆಯವರಿಂದ ಹೈಜಾಕ್‌

11:58 AM Apr 19, 2017 | |

ಬೆಂಗಳೂರು: ನಾಯಕ ಹಾಗೂ ಬೇಡ ಜನಾಂಗದಲ್ಲಿನ ಒಗ್ಗಟ್ಟಿನ ಕೊರತೆ ಹಾಗೂ ಆಲಕ್ಷ್ಯದ ಪರಿಣಾಮವಾಗಿ  ನಮ್ಮದೇ ಜನಾಂಗಕ್ಕೆ ಸೇರಿದ ಕನಕದಾಸ ಮತ್ತು ಸಂಗೊಳ್ಳಿ ರಾಯಣ್ಣ  ಅವರನ್ನು ಬೇರೆಯವರು ತಮ್ಮವರನ್ನಾಗಿ ಮಾಡಿ ಕೊಂಡಿದ್ದಾರೆ ಎಂದು ವಿಧಾನಪರಿಷತ್‌ ಸದಸ್ಯ ವಿ.ಎಸ್‌. ಉಗ್ರಪ್ಪ ತಿಳಿಸಿದ್ದಾರೆ.

Advertisement

“ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನಾಚರಣೆ’ ಪ್ರಯುಕ್ತ ಅಖೀಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಮಂಗಳವಾರ ಹಮ್ಮಿಕೊಂಡಿದ್ದ “ಕರ್ನಾಟಕದ ಇತಿಹಾಸದಲ್ಲಿ ನಾಯಕರ ಕೊಡುಗೆ’ ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, “ಒಡಕು ಮತ್ತು ನಿರ್ಲಕ್ಷ್ಯ ಹೀಗೆ ಇದ್ದರೆ, ಮುಂದೊಂದು ದಿನ ವಾಲ್ಮೀಕಿಯನ್ನೂ ನಾವು ಕಳೆದುಕೊಳ್ಳಬೇಕಾದಿತು. 

ನಾಯಕ ಹಾಗೂ  ಬೇಡ ಈ ಎರಡೂ ಜನಾಂಗಗಳು ಒಂದೇ. ಇವರೆಡು ಮೂಲವಾಗಿ ವಾಲ್ಮೀಕಿ ಜನಾಂಗಕ್ಕೆ ಸೇರಿದವು. ಕನಕದಾಸ ಮತ್ತು ಸಂಗೊಳ್ಳಿ ರಾಯಣ್ಣ ನಮ್ಮ ಜನಾಂಗಕ್ಕೆ ಸೇರಿದವರು. ಆದರೆ, ನಮ್ಮಲ್ಲಿನ ಒಗ್ಗಟ್ಟಿನ ಕೊರತೆ ಹಾಗೂ ನಿರ್ಲಕ್ಷ್ಯದಿಂದ ಇಂದು ಕೆಲವರು ಕನಕದಾಸ ಮತ್ತು ಸಂಗೋಳ್ಳಿ ರಾಯಣ್ಣನನ್ನು ತಮ್ಮವರನ್ನಾಗಿ ಮಾಡಿಕೊಂಡಿದ್ದಾರೆ,’ ಎಂದರು.

“ವಾಲ್ಮೀಕಿ ಜನಾಂಗದವರು ಈ ದೇಶದ ಮೂಲ ನಿವಾಸಿಗಳು. ಅದರಲ್ಲೂ ಮುಖ್ಯವಾಗಿ ದಕ್ಷಿಣ ಭಾರತ ಇವರ ಮೂಲಸ್ಥಾನ. ರಾಮಾಯಣದ ಕಾಲದಿಂದಲೂ ವಾಲ್ಮೀಕಿ ಜನಾಂಗ ಇತ್ತು ಎಂಬುದಕ್ಕೆ ವಾಲ್ಮೀಕಿ ರಾಮಾಯಣ ಬರೆದದ್ದೇ ಸಾಕ್ಷಿ.  ಇಷ್ಟೊಂದು ಇತಿಹಾಸ ಮತ್ತು ವೈಭವ ಹೊಂದಿದ ವಾಲ್ಮೀಕಿ ಜನಾಂಗ ಇಂದು ಒಗ್ಗಟ್ಟಿನ ಕೊರತೆ ಎದುರಿಸುತ್ತಿದೆ. ಅದರ ಪರಿಣಾಮವಾಗಿ ಅನೇಕ ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸ ಬೇಕಾಗಿದೆ,’ ಎಂದರು. 

ಕಾರ್ಯಕ್ರಮದಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಇತಿಹಾಸ ಉಪನ್ಯಾಸಕ ಡಾ. ಎಂ.ಕೆ. ದುರ್ಗಪ್ಪ, ವಾಲ್ಮೀಕಿ ನಾಯಕ ಮಹಾಸಭಾದ ಅಧ್ಯಕ್ಷ ಎಂ. ನರಸಿಂಹಯ್ಯ, ಪ್ರಧಾನ ಕಾರ್ಯದರ್ಶಿ ಡಾ. ಆರ್‌. ಗೋಪಾಲಕೃಷ್ಣ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next