ಉಡುಪಿ: ಕನಕದಾಸರ ಮಾರ್ಗದಲ್ಲಿ ಸಾಗಿದರೆ ಸಮಾಜದಲ್ಲಿ ಶಾಂತಿ, ಪ್ರೀತಿ ಸಿಗಲು ಸಾಧ್ಯವಿದೆ. ಅವರು ನಮಗೆಲ್ಲ ಮಾರ್ಗದರ್ಶಕರು. ಕನಕದಾಸರಿಗೂ ಉಡುಪಿಗೂ ಅವಿನಾಭವ ಸಂಬಂಧವಿದೆ. ಶ್ರೀ ಕೃಷ್ಣನೇ ಕನಕದಾಸನ ಕಡೆಗೆ ತಿರುಗಿರುವುದಕ್ಕೆ ಕನಕನ ಕಿಂಡಿಯೇ ಸಾಕ್ಷಿ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
Advertisement
ಜಿಲ್ಲಾಡಳಿತ, ಜಿ.ಪಂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕನಕದಾಸ ಸಮಾಜ ಸೇವಾ ಸಂಘ, ಹಾಲುಮತ ಮಹಾಸಭಾದ ಸಹಯೋಗದೊಂದಿಗೆ ಗೋವಿಂದ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಕನಕದಾಸ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಬದಲಾವಣೆಯ ಹರಿಕಾರ: ಮುಲ್ಲೈ ಮುಗಿಲನ್
ಮಂಗಳೂರು: ಕನಕದಾಸರು ಬದಲಾವಣೆಯ ಹರಿಕಾರ. ಯೋಧನಾಗಿದ್ದ ಅವರು ದಾಸರಾಗಿ ಬದಲಾಗಿ ಸಮಾನತೆಯ ಸಂದೇಶ ನೀಡಿದರು. ಇಂದಿನ ಸಮಾಜ ಕನಕ ದಾಸರ ಜೀವನಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಆತ್ಮಾವಲೋಕನ ಮಾಡಿಕೊಂಡು ಸಮಾನತೆಯನ್ನು ಸಾರುವ ವ್ಯಕ್ತಿಗಳಾಗಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೆ$ç ಮುಗಿಲನ್ ಹೇಳಿದರು.
ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಗುರುವಾರ ಉರ್ವಸ್ಟೋರ್‌ನ ತುಳುಭವನದಲ್ಲಿ ನಡೆದ ಕನಕ ಜಯಂತಿ ಆಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಕನಕದಾಸರು ಸಮಾನತೆಯೊಂದಿಗೆ ಸ್ವಾಭಿಮಾನ ತೋರಿಸಿಕೊಟ್ಟಿದ್ದಾರೆ. ಕುಲವನ್ನು ಮುಂದಿಟ್ಟು ಹೊಡೆದಾಡದೆ, ದಾಸನ ಬದುಕು ಸ್ವೀಕರಿಸಿ ಸಮಾಜದ ಏರುಪೇರುಗಳನ್ನು ಸಮಾನತೆಗೆ ಪರಿವರ್ತಿಸಿದ ವ್ಯಕ್ತಿತ್ವ ಕನಕದಾಸರದ್ದು ಎಂದರು.
ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕ ಹಾಗೂ ಚಿಂತಕ ಅರವಿಂದ ಚೊಕ್ಕಾಡಿ ಮಾತನಾಡಿ, ಕನಕದಾಸರ ಭಕ್ತಿ ಮಾರ್ಗ ಜನರನ್ನು ತಲುಪಿದ್ದು, ಆರಾಧನಾ ಮಾನೋಭಾವ ಬೆಳೆಯಿತು. ಕನಕದಾಸರು ದಾಸನಾಗಿ ಉಳಿಯದೆ ಭವ್ಯ ಭವಿಷ್ಯ ತೋರಿಸಿದರು. ವಾದದ ಮೂಲಕ ಸುಸಂಸ್ಕೃತಿಯಿಂದ ಎದುರಾಳಿಯನ್ನು ಗೆಲ್ಲಬೇಕು ಎಂಬುವುದನ್ನು ದಾಸರು ತಿಳಿಸಿದ್ದಾರೆ ಎಂದು ಹೇಳಿದರು.
ಜಿ.ಪಂ. ಸಿಇಒ ಡಾ| ಆನಂದ್ ಕೆ., ಕರಾವಳಿ ಕುರುಬರ ಸಂಘದ ಅಧ್ಯಕ್ಷ ಕೆ.ಎಸ್. ಬಸವರಾಜಪ್ಪ, ಹಾಲುಮತ ಮಹಾಸಭಾ ಅಧ್ಯಕ್ಷ ಬಸವರಾಜ ಬಿ. ಉಪಸ್ಥಿತರಿದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿ, ವಂದಿಸಿದರು. ವಾರುಣಿ ನಾಗರಾಜ್ ಮಂಗಳಾದೇವಿ ನಿರೂಪಿಸಿದರು.