ಯಾದಗಿರಿ: ಕನಕದಾಸರು 15-16ನೇ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ಕನಕದಾಸರ ಮೂಲ ಹೆಸರು ತಿಮ್ಮಪ್ಪನಾಯಕ. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸ ಕೂಡ ಒಬ್ಬರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನೆಕಾರರು ಮತ್ತು ಪುರಂದರ ದಾಸರೊಂದಿಗೆ ಕರ್ನಾಟಕ ಸಂಗೀತಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವೇಂದ್ರನಾಥ ನಾದ್ ಹೇಳಿದರು.
ಇಲ್ಲಿನ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಕನಕದಾಸರ ಜಯಂತಿ ಅಂಗವಾಗಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟರಡ್ಡಿ ಅಬ್ಬೆತೂಮಕೂರ, ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಲಲಿತಾ ಅನಪುರ, ನಗರ ಮಂಡಲ ಅಧ್ಯಕ್ಷ ಮತ್ತು ನಗರಸಭೆ ಸದಸ್ಯ ಸುರೇಶ್ ಅಂಬಿಗೇರ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ್ ಕಾಡಂನೋರ,ನಗರಸಭೆ ಸದಸ್ಯರಾದ ಹಣಮಂತ ಇಟಗಿ, ಸ್ವಾಮಿದೇವ ದಾಸನ, ಅಂಬಯ್ಯ ಶಾಬಾದ, ಮಂಜು ದಾಸನಕೇರಿ, ಆನಂದ ಗಡ್ಡಿಮನಿ, ಅಜಯ್ ಸಿನ್ನೂರ, ಸಾಬ್ಬಣ್ಣ ಪರಸನಾಯಕ, ಸುನಿತಾ ಚೌವಾಣ, ಶಕುಂತಲಾ, ಭೀಮರಾಯ ಜಂಗಳಿ, ಶಂಕರ ಸೊನಾರ, ಮೊನೇಶ ಬೇಳಿಗೆರ, ರಿಯಾಜ್ ಕೊಲ್ಲೂರು, ಮಹದೇವಪ್ಪ ಗಣಪುರ, ಶಿವರಾಜ್ ದಾಸನಕೇರಿ, ಮಲ್ಲು ಕೊಲಿವಾಡ, ದೇವೇಂದ್ರಪ್ಪ ಯರಗೋಳ, ಹಣಮಂತ ವಲ್ಯಪುರೇ, ಗೋವಿಂದಪ್ಪ ಖಾನಾಪುರ, ಶಿವು ಕೊಂಕಲ ಸೇರಿದಂತೆ ಅನೇಕರು ಇದ್ದರು.