Advertisement

ಕನಕದಾಸರು ಕೇವಲ ಒಂದು ಸಮುದಾಯಕ್ಕೆ ಸೀಮಿತ ಅಲ್ಲ

02:48 PM Nov 16, 2019 | Suhan S |

ಬಂಗಾರಪೇಟೆ: ಕನಕದಾಸರು ಕೇವಲ ಒಂದು ಸಮಾಜಕ್ಕೆ ಸೀಮಿತ ಅಲ್ಲ, 16ನೇ ಶತಮಾನದಲ್ಲಿ ಜಾತಿ ಪದ್ಧತಿ ಮತ್ತು ಮೂಢನಂಬಿಕೆಯನ್ನು ತಮ್ಮ ಕೀರ್ತನೆಗಳ ಮೂಲಕ ಬಲವಾಗಿ ಖಂಡಿಸಿದ್ದರು ಎಂದು ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

Advertisement

ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ಕುರುಬರ ಸಂಘ ಹಮ್ಮಿಕೊಂಡಿದ್ದ 532ನೇ ದಾಸಶ್ರೇಷ್ಠ ಭಕ್ತ ಕನಕದಾಸರ ಜಯಂತ್ಯುತ್ಸವನ್ನು ಉದ್ಘಾಟಿಸಿ ಮಾತನಾಡಿ, ಕನಕದಾಸರು ತಾವು ಕಂಡದ್ದನ್ನು ಅನುಭವಕ್ಕೆ ಬಂದದ್ದನ್ನು ಅಭಿವ್ಯಕ್ತಿಸಿದ್ದಾರೆ. ಅಂದು ಅವರು ಹೇಳಿದ ಸಂದೇಶಗಳು ಸಾರ್ವಕಾಲಿಕ. ಪ್ರಸ್ತುತತೆಯನ್ನು ಪಡೆದಂತವು. ಯಾವುದೇ ಜಾತಿ, ಮತ, ಪ್ರದೇಶ, ಭಾಷೆಗೆ ಸೀಮಿತವಾಗದ ವಿಶ್ವ ಮಾನವ ಪರಿಕಲ್ಪನೆಯ ಸಂದೇಶಗಳು. ಹಾಗಾಗಿ ಇಂದಿನ ಆಧುನಿಕ ಸಮಾಜಕ್ಕೆ ಕನಕದಾಸರ ತತ್ವ ಸಂದೇಶಗಳು ಅವಶ್ಯಕತೆ ಇದೆ ಎಂದು ಹೇಳಿದರು.

ಕವಿಗಳಲ್ಲಿ ದಾಸರು: ಕನಕದಾಸರ ಪೂರ್ವ ಮತ್ತು ನಂತರದ ಭಕ್ತಿ ಪರಂಪರೆ ಗಮನಿಸಿದರೆ ಅದುಸಂಪ್ರದಾಯಿಕ ನೆಲೆಯಲ್ಲಿಯೇ ಸಾಗಿರುವುದನ್ನು ಕಾಣಬಹುದು. ಅವರು ವೈಚಾರಿಕ ಪ್ರಖರತೆಯ ನೆಲೆಯಲ್ಲಿ ಭಕ್ತಿಯನ್ನು ನೋಡಿದವರು. ಕಲಿಯೂ, ಕವಿಯೂ ಆದ ಕನಕದಾಸರು ದಾಸರಲ್ಲಿ ಕವಿ, ಕವಿಗಳಲ್ಲಿ ದಾಸರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.

ರಾಯಣ್ಣ ಪ್ರತಿಮೆ, ರಸ್ತೆಗೆ ಹೆಸರು: ತಾಲೂಕಿನಲ್ಲಿ ಕುರುಬ ಸಮುದಾಯ ಬಲಪಡಿಸಲು ರಾಜಕೀಯ ಹಾಗೂ ಸಾಮಾಜಿಕ ಸ್ಥಾನಮಾನ ನೀಡಿದ್ದೇನೆ. ಕನಕ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಆರ್ಥಿಕ ಸಹಾಯ ನೀಡಲು ಸಿದ್ಧನಾಗಿದ್ದೇನೆ. ಪಟ್ಟಣದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪಿಸಲು ಹಾಗೂ ಪಟ್ಟಣದಲ್ಲಿ ಒಂದು ರಸ್ತೆಗೆ ಹೆಸರು ನಾಮಕರಣ ಮಾಡಲಾಗುವುದು ಎಂದು ಹೇಳಿದರು.

ಸ್ತಬ್ಧ ಚಿತ್ರಗಳಿಗೆ ಚಾಲನೆ: ತಾಲೂಕು ಕುರುಬ ಸಂಘದ ಅಧ್ಯಕ್ಷ ಎಲ್‌.ರಾಮಕೃಷ್ಣ ಅಧ್ಯಕ್ಷತೆವಹಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಸಮು ದಾಯದ ಮುಖಂಡರನ್ನು ಸನ್ಮಾನಿಸಲಾ ಯಿತು. ವೇದಿಕೆ ಕಾರ್ಯಕ್ರಮದ ನಂತರ ಶಾಸಕರು ಸ್ತಬ್ಧ ಚಿತ್ರಗಳಿಗೆ ಚಾಲನೆ ನೀಡಿದರು. ಕುರುಬರ ಪವಿತ್ರವಾದ ತೆಂಗಿನಕಾಯಿ ಪವಾಡ ಕಾರ್ಯಕ್ರಮವೂ ನಡೆಯಿತು.

Advertisement

ಜಿಲ್ಲಾ ಕಾಂಗ್ರಸ್‌ ಅಧ್ಯಕ್ಷ ಕೆ.ಚಂದ್ರಾ ರೆಡ್ಡಿ, ತಹಶೀಲ್ದಾರ್‌ ಕೆ.ಬಿ.ಚಂದ್ರ ಮೌಳೇಶ್ವರ್‌, ತಾಪಂ ಇಒ ಎನ್‌.ವೆಂಕಟೇಶಪ್ಪ, ಕ್ಷೇತ್ರ ಶಿಕ್ಷಾಣಾಧಿಕಾರಿ ಬಿ.ಪಿ.ಕೆಂಪಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಅಪ್ಪಯ್ಯಗೌಡ, ಪಶುವೈದ್ಯ ಇಲಾಖೆ ಎಡಿ ಡಾ.ರಾಮು, ರೇಷ್ಮೆ ಇಲಾಖೆಯ ಎಡಿ ಎಸ್‌.ಎನ್‌.ಶ್ರೀನಿವಾಸ್‌, ತಾಪಂ ಎಡಿ ಮಂಜುನಾಥ್‌, ಸದಸ್ಯ ಚಿನ್ನಕೋಟೆ ಅಮರೇಶ್‌, ಶಿಲ್ಪ ಗೋವಿಂದಪ್ಪ, ಮಹದೇವ್‌, ಪುರಸಭೆ ಸದಸ್ಯರಾದ ಸಾದಿಕ್‌, ಕಪಾಲಿ ಶಂಕರ್‌, ಗೋವಿಂದ, ಶಾರದಮ್ಮ, ಅರಕ್ಷಕ ಉಪ ನಿರೀಕ್ಷಕ ಜಗದೀಶ್‌ರೆಡ್ಡಿ, ಕಾಮಸಮುದ್ರ ಆರ್‌.ದಯಾನಂದ್‌, ಮುಖಂಡರಾದ ದೊಡ್ಡಪ್ಪ, ಬೊಪ್ಪನಹಳ್ಳಿ ನಾರಾ ಯಣಪ್ಪ, ಕಾರಮಂಗಲ ಆಶ್ವತ್ಥ್, ಗಾಜಗ ಮಂಜು ನಾಥ್‌, ಯುವರಾಜ್‌, ಚೌಡಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next