Advertisement

ಕನಕರ ಸಂದೇಶ ಸಾರ್ವಕಾಲಿಕ ಪ್ರಸ್ತುತ

12:23 PM Nov 16, 2019 | Team Udayavani |

ಹುಕ್ಕೇರಿ: ಕನಸದಾಸರ ಚಿಂತನೆ ಆದರ್ಶಗಳು ಪ್ರತಿಯೊಬ್ಬರಿಗೂ ದಾರಿದೀಪವಾಗಿವೆ ಎಂದು ತಹಶೀಲ್ದಾರ್‌ ರೇಷ್ಮಾ ತಾಳಿಕೋಟಿ ಹೇಳಿದರು.

Advertisement

ಹಳ್ಳೆ ತಹಶೀಲ್ದಾರ್‌ ಕಾರ್ಯಲಯದ ಆವರಣದಲ್ಲಿ ತಾಲೂಕಾ ಆಡಳಿತ ಹಮ್ಮಿಕೊಂಡ ಕನಕದಾಸ ಜಯಂತಿ ಕಾರ್ಯಕ್ರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕನಕದಾಸರು ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಕವಿಗಳು ವಿದ್ವಾಂಸರಾಗಿದ್ದಾರೆ. ಅವರ ಹೇಳಿದ ಸಂದೇಶಗಳು ಸರ್ವಕಾಲಿಕ ಪ್ರಸ್ತುತವಾಗಿವೆ ಎಂದರು. ವಿರಕ್ತಮಠದ ಶಿವಬಸವ ಸ್ವಾಮೀಜಿ ಕನದಾಸ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಕನಕದಾಸ ಜಯಂತಿ ಆಚರಣೆಗೆ ಮಾತ್ರ ಸೀಮಿತವಾಗಿದೆ ಅವರ ಜೀವನದ ಮಾರ್ಗವನ್ನು ನಾವು ಅನುಸರಿಸಬೇಕು ಎಂದರು.

ಹಾಲಮತದ ಸಮಾಜ ಬಾಂಧವರಿಂದ ಡೊಳ್ಳಿನ ಪದಗಳ ವಾದ್ಯಮೇಳೊಂದಿಗೆ ಕನದಾಸರ ಭಾವಚಿತ್ರದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹಳ್ಳೆ ತಹಶೀಲ್ದಾರ್‌ ಕಚೇರಿ ಆವರಣದ ಕಾರ್ಯಕ್ರಮ ಜರುಗುವ ಸ್ಥಳಕ್ಕೆ ತಲುಪಿತು.

ಹಾಲುಮತದ ಸಮಾಜ ಅಧ್ಯಕ್ಷ ಭೀಮಪ್ಪ ರಾಮಗೋನಟ್ಟಿ, ಮುಖಂಡರಾದ ನಾಗಪ್ಪ ಕರಜಗಿ, ಗಜಾನನ ಕೋಳ್ಳಿ, ಶಂಕರಾವ ಹೆಗಡೆ, ತಾಪಂ, ಕಾರ್ಯನಿರ್ವಾಹಕ ಅ ಕಾರಿ ಬಿರಾದರ ಪಾಟೀಲ, ಉಪತಹಶೀಲಾರ ಕಿರಣ ಬೆಳವಿ, ಬಿಇಒ ಮೋಹನ ದಂಡಿನ, ಮುಖ್ಯಾಧಿಕಾರಿ ಮೋಹನ ಜಾಧವ, ನ್ಯಾಯವಾದಿ ಭೀಮಸೇನ ಬಾಗಿ, ಅಂಗನವಾಡಿ ಕಾರ್ಯಕರ್ತರು ಹಾಗೂ ಜನಪ್ರತಿನಿಧಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next