Advertisement
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಡಿ.ದೇವರಾಜು ಅರಸು ಭವನದಲ್ಲಿ ಶುಕ್ರವಾರ ನಡೆದ ಭಕ್ತ ಕನಕದಾಸ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
Related Articles
Advertisement
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಅವರು ಮಾತನಾಡಿದರು.
ಕನಕದಾಸರ ಕೀರ್ತನೆಗಳು ಪ್ರತಿಯೊಬ್ಬರೂ ಓದಬೇಕು. ಇದರಿಂದ ಸಮಾಜದಲ್ಲಿ ಬದಲಾವಣೆ ಕಾಣಬಹುದು ಎಂದರು.
ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಜಿ.ಕೆಂಚಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಕರಾದ ಮಚ್ಚಾಡೊ, ನಗರಸಭೆ ಪೌರಾಯುಕ್ತರಾದ ರಮೇಶ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಪುಟ್ಟರಾಜು, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಇಬ್ರಾಹಿಂ, ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಗೀತಾ, ಬಿಸಿಎಂ ಇಲಾಲೆಯ ತಾಲ್ಲೂಕು ಅಧಿಕಾರಿ ಕವಿತಾ, ಐಟಿಡಿಪಿ ಇಲಾಖೆಯ ವ್ಯವಸ್ಥಾಪಕರಾದ ದೇವರಾಜು ಇತರರು ಇದ್ದರು.
ಶಂಕರಯ್ಯ ನಾಡಗೀತೆ ಹಾಡಿದರು, ಮಂಜುನಾಥ್ ನಿರೂಪಿಸಿದರು, ಕೆ.ಟಿ.ದರ್ಶನ್ ಸ್ವಾಗತಿಸಿ, ವಂದಿಸಿದರು.
ಹಮ್ಮು, ಬಿಮ್ಮು ಬಿಡಬೇಕುಮುಖ್ಯ ಭಾಷಣ ಮಾಡಿದ ಸರಸ್ವತಿ ಡಿಇಡಿ ಕಾಲೇಜಿನ ಪ್ರಾಂಶುಪಾಲ ಕುಮಾರ್ ಅವರು ದಾಸ ಸಾಹಿತ್ಯವು ಒಂದು ಸಾಲು, ನಾಲ್ಕು ಪದ ಹೊಂದಿದೆ ಎಂದು ಅವರು ತಿಳಿಸಿದರು. ಭಕ್ತ ಕನಕದಾಸರು ಅಂಬಲಿ, ಕಂಬಳಿ, ಹಮ್ಮು ಮತ್ತು ಬಿಮ್ಮು ಈ ನಾಲ್ಕು ಪದಗಳಲ್ಲಿ ಸಾಕಷ್ಟು ಅರ್ಥಗಳನ್ನು ತಿಳಿಸಿದ್ದಾರೆ. ಪ್ರತಿಯೊಬ್ಬರಿಗೂ ಊಟ, ಬಟ್ಟೆ ಅತಿ ಅವಶ್ಯಕ, ಇವುಗಳನ್ನು ಗಳಿಸಲು ಹಮ್ಮು, ಬಿಮ್ಮು ಬಿಡಬೇಕು ಎಂದು ಭಕ್ತ ಕನಕದಾಸರು ಹೇಳಿದ್ದಾರೆ ಎಂದರು. ಜನರ ನಾಯಕನಾಗಿ ಬೆಳೆದ ಕನಕದಾಸರು, ಇವರ ಕೀರ್ತನೆ ಮತ್ತು ಸಂದೇಶಗಳು 21 ನೇ ಶತಮಾನದಲ್ಲಿ ದಾಸ ಸಾಹಿತ್ಯ ಪ್ರಾಯೋಗಾಲಯವಿದ್ದಂತೆ. ಕನಕದಾಸ ಚಿಂತನೆಗಳನ್ನು ಅಧ್ಯಯನ ಮಾಡಬೇಕು. ಕುಲ ಕುಲವೆಂದು ಹೊಡೆದಾಡದಿರಿ, ಕುಲ ಯಾವುದೆಂದು ಬಲ್ಲಿರ ಎಂಬ ಸಂದೇಶ ಸಾರುವ ಮೂಲಕ ಕನಕದಾಸರು ಎಲ್ಲರೂ ಸರಿ ಸಮಾನವಾಗಿ ಬದುಕಬೇಕು ಎಂಬುದನ್ನು ತಿಳಿಸಿದ್ದಾರೆ ಎಂದರು.