Advertisement

ಜಿಲ್ಲಾದ್ಯಂತ ದಾಸಶ್ರೇಷ್ಠ ಕನಕದಾಸರ ಸ್ಮರಣೆ

04:03 PM Nov 16, 2019 | Suhan S |

ತುಮಕೂರು: ದಾಸಶ್ರೇಷ್ಠ ಸಂತ ಕನಕದಾಸರ ಕೀರ್ತನೆಗಳಲ್ಲಿನ ಆದರ್ಶಗಳನ್ನು ಸಮಾಜದ ಪ್ರತಿಯೊಬ್ಬರೂ ಪಾಲಿಸುವುದು ಇಂದಿನ ದಿನದಲ್ಲಿ ಅಗತ್ಯ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್‌ ತಿಳಿಸಿದರು.

Advertisement

ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಕನಕದಾಸರ 532ನೇ ಜಯಂತ್ಯುತ್ಸವವನ್ನು ಕನಕ ದಾಸರು ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಚಿಂತನೆ ಪಾಲಿಸಿ: ನೂರಾರು ವರ್ಷಗಳ ಹಿಂದೆಯೇ ಕನಕದಾಸರು ತಮ್ಮ ಸಾಹಿತ್ಯದ ಮೂಲಕ ಜಾತೀಯತೆ ಮತ್ತು ಇನ್ನಿತರೆ ಸಮಾಜದ ಏಳುಬೀಳುಗಳ ವಿರುದ್ಧ ಸಮಾಜಕ್ಕೆ ಅರಿವು ಮೂಡಿಸಿದ್ದರೆ. ಕನಕದಾಸರ ಆದರ್ಶ, ಚಿಂತನೆಗಳು ಇಂದಿನ ಸಮಾಜಕ್ಕೆ ತುಂಬಾ ಅಗತ್ಯವಾಗಿದ್ದು, ಸಮಾಜ, ಊರು, ರಾಜ್ಯ, ದೇಶ ವ್ಯಾಪ್ತಿಯಲ್ಲಿ ಪರಿವರ್ತನೆ ಮಾಡಲು ನಾವೆಲ್ಲ ಸಂಕಲ್ಪ ಮಾಡೋಣವೆಂದರು.

ಅವಲೋಕನ ಮಾಡಿಕೊಳ್ಳಿ: ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‌ಕುಮಾರ್‌ ಮಾತನಾಡಿ, ಕನಕದಾಸರು 16ನೇ ಶತಮಾನದಲ್ಲಿ ಸಮಾಜಿಕ ಪಿಡುಗು ಹೋಗಲಾಡಿಸಲು ಸರಳವಾಗಿ ತಮ್ಮ ಕೀರ್ತನೆಗಳ ಮೂಲಕ ಜನರಿಗೆ ಅರಿವು ಮೂಡಿಸಿದ್ದರು. ಆದರೆ 21ನೇ ಶತಮಾನದಲ್ಲಿ ಇರುವ ನಾವು ಎಷ್ಟರಮಟ್ಟಿಗೆ ಅವರ ಆದರ್ಶ ಅಳವಡಿಸಿಕೊಂಡಿದ್ದೇವೆ ಎಂಬುದರ ಕುರಿತು ಅವಲೋಕನ ಮಾಡಿಕೊಳ್ಳಬೇಕೆಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೋ.ನಂ. ವಂಸಿಕೃಷ್ಣ ಮಾತನಾಡಿ, ದಾಸಶ್ರೇಷ್ಠ ಕನಕದಾಸರ ಆದರ್ಶಗಳು ನಮ್ಮ ಜೀವನಕ್ಕೆ ಅಗತ್ಯವಾಗಿದ್ದು, ಅವುಗಳನ್ನು ನಾವೆಲ್ಲರೂ ಪಾಲಿಸಬೇಕೆಂದರು. ಡಿ.ಎಂ.ಪಾಳ್ಯದ ಗುರು ರೇವಣ ಸಿದ್ದೇಶ್ವರ ಮಠದ ಬಿಂದುಶೇಖರ ಒಡೆಯರ್‌ ಮಾತನಾಡಿ, ಮನುಷ್ಯ ಧರ್ಮವನ್ನು ರಕ್ಷಣೆ ಮಾಡಬೇಕು, ಧರ್ಮ ವರ್ಗಕ್ಕೆ ಸೀಮಿತವಲ್ಲ. ಮಾನವೀಯತೆಗೆ ಸೀಮಿತವಾದುದು ಎಂದು ತಿಳಿಸಿದರು.

Advertisement

ವಿಧಾನ ಪರಿಷತ್‌ ಮಾಜಿಸದಸ್ಯ ಡಾ.ಎಂ.ಆರ್‌.ಹುಲಿನಾಯ್ಕರ್‌, ಕನ್ನಡ ಮತ್ತುಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವ ರಾಜಪ್ಪ ಆಪಿನಕಟ್ಟೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆ ಎಸ್‌.ನಟರಾಜ್‌, ಡಿಡಿಪಿಐ ಎಂ.ಆರ್‌. ಕಾಮಾಕ್ಷಮ್ಮ, ಡಿಡಿಪಿಯು ಲಲಿತಾ ಕುಮಾರಿ, ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮಂಜುನಾಥ, ಕುರುಬರ ಸಂಘದ ಅಧ್ಯಕ್ಷ ಭೀಮಣ್ಣ, ಮಹಾನಗರ ಪಾಲಿಕೆಯ ಸದಸ್ಯರಾದ ಎಚ್‌.ಮಲ್ಲಿಕಾರ್ಜುನ, ನಳಿನಾ ಇಂದ್ರಕುಮಾರ್‌, ನರಸಿಂಹ ರಾಜು, ಕನಕ ಪತ್ತಿನ ಸಹಕಾರ ಸಂಘದ ಸುನೀತಾ ನಟರಾಜ್‌, ಕುರುಬ ಸಮುದಾಯದ ಮುಖಂಡ ರಾದ ಎಸ್‌ .ನಾಗಣ್ಣ, ಎ.ಮಹಾಲಿಂಗಪ್ಪ, ಟಿ.ಆರ್‌.ಸುರೇಶ್‌, ಶಿವಮೂರ್ತಿ, ಮಧುಕರ್‌, ಟಿ.ಇ.ರಘು ರಾಮ್‌, ಚಿಕ್ಕಣ್ಣ, ಪ್ರಭು, ಚಿಕ್ಕವೆಂಕಟಯ್ಯ, ಕೆಂಪ ರಾಜು, ಕೃಷ್ಣಮೂರ್ತಿಂ ಲಿಂಗರಾಜು ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next