Advertisement

ಕನಕದಾಸರ ಕೀರ್ತನೆಗಳು ಮೌಲ್ಯಯುತ

02:41 PM Nov 16, 2019 | Suhan S |

ಕುಮಟಾ: ಕನಕದಾಸರು ಕೀರ್ತನೆ ಮೂಲಕ ಸಾಮಾಜಿಕ ಅನಿಷ್ಠಗಳು ಹಾಗೂ ಜಾತಿ ಪದ್ಧತಿಯಂತಹ ಸಮಾಜದಲ್ಲಿನ ಹಲವು ಅಂಧಕಾರಗಳನ್ನು ಹೋಗಲಾಡಿಸಲು ಹೋರಾಟ ಮಾಡಿದವರು. ಅವರು ಹಾಕಿಕೊಟ್ಟ ಮಾರ್ಗದರ್ಶನವನ್ನು ಎಲ್ಲರೂ ಪಾಲಿಸಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಭಿಯಂತರ ರಾಮದಾಸ ಗುನಗಿ ಅಭಿಪ್ರಾಯಪಟ್ಟರು.

Advertisement

ತಾಲೂಕು ಆಡಳಿತ ಮತ್ತು ತಾಪಂ ಸಂಯುಕ್ತಾಶ್ರಯದಲ್ಲಿ ತಾಪಂ ಸಭಾಭವನದಲ್ಲಿ ಆಚರಿಸಿದ ಕನಕದಾಸರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಶಿಕ್ಷಕ ಬಾಲಕೃಷ್ಣ ಭಟ್ಟ ಮಾತನಾಡಿ, ಹೆಸರು, ಚರಿತ್ರೆ, ಗುಣ, ನಿಷ್ಠೆ ಹಾಗೂ ಆಚಾರದಲ್ಲೂ ಕನಕ (ಬಂಗಾರವೇ) ವೇ ಆಗಿದ್ದ ಭಕ್ತ ಕನಕದಾಸರ ವಿಚಾರಧಾರೆ ಹಾಗೂ ಕೀರ್ತನೆಗಳು ಬಂಗಾರಕ್ಕಿಂತ ಹೆಚ್ಚು ಮೌಲ್ಯಯುತವಾದ್ದು ಎಂದ ಅವರು, ಕನಕದಾಸರ ಜೀವನ ಹಾಗೂ ಸಾಧನೆಗಳನ್ನು ವಿವರಿಸಿ, ಅವರ ಮೌಲ್ಯಯುತ ಜೀವನವನ್ನು ನಾವೆಲ್ಲರೂ ಅನುಸರಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ತಾ.ಪಂ ಇಒ ಸಿ.ಟಿ. ನಾಯ್ಕ ಮಾತನಾಡಿ, ಯಾವುದೇ ಬಲಿಷ್ಠ ಹಿನ್ನೆಲೆ ಇಲ್ಲದಿದ್ದರೂ ತಮ್ಮ ಸಮಾಜ ಹಿತದ ಚಿಂತನೆಗಳ ಮೂಲಕ ಇಂದಿಗೂ ಜಗತ್ತು ಅವರನ್ನು ನೆನೆದು, ಪೂಜಿಸುವ ಮಟ್ಟಕ್ಕೆ ಕನಕದಾಸರುಬೆಳೆದಿದ್ದು ಮಹತ್ವದ ಸಾಧನೆ. ಸ್ವಸಾಮರ್ಥ್ಯದಿಂದ ನಾಲ್ಕು ಜನರಿಗೆ ಸಹಾಯ ಮಾಡುವ, ಮಾರ್ಗದರ್ಶನ ನೀಡುವ ಗುಣವಿದ್ದರೆ ಯಾವುದೇ ಮಂದಿರಕ್ಕೂ ಹೋಗುವ ಅಗತ್ಯವಿಲ್ಲ. ನಂಬಿದ ದೇವರು ನಮ್ಮೆದುರಿಗೇ ಸಾಕ್ಷಾತ್ಕಾರ ಎಂಬುದಕ್ಕೆ ಕನಕದಾಸರು ಸ್ಪಷ್ಟ ಉದಾಹರಣೆ ಎಂದರು.

ಲೋಕೋಪಯೋಗಿ ಅಭಿಯಂತರ ರಾಜು ಶಾನಭಾಗ, ಸಿಪಿಐ ಪರಮೇಶ್ವರ ಗುನಗಾ, ಪುರಸಭೆ ಮುಖ್ಯಾಧಿಕಾರಿ ಸುರೇಶ ಎಂ.ಕೆ. ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಯಶೋದಾ ಹೊಸ್ಕಟ್ಟಾ ಸ್ವಾಗತಿಸಿದರು

Advertisement

Udayavani is now on Telegram. Click here to join our channel and stay updated with the latest news.

Next