Advertisement

ಆಂಗ್ಲ ಶಾಲೆಯಲ್ಲಿ ಕನ್ನಡ ತರಗತಿ ನಡೆಯುತ್ತಿಲ್ಲ :ಪುನರೂರು

02:26 PM Nov 02, 2017 | |

ಕಿನ್ನಿಗೋಳಿ: ಆಂಗ್ಲ ಮಾಧ್ಯಮ ಶಾಲೆಗಳ ಹಾವಳಿಯಿಂದ ಕನ್ನಡ ಶಾಲೆಗಳು ಮುಚ್ಚುತ್ತಿದೆ. ಸರಕಾರ ಎಲ್ಲ ಆಂಗ್ಲ ಶಾಲೆಯಲ್ಲಿ ಕನ್ನಡ ತರಗತಿ ನಡೆಯಬೇಕು ಎಂದು ಕಡ್ಡಾಯ ಮಾಡಿದರೂ ಶಿಕ್ಷಣ ಸಂಸ್ಥೆಗಳು ಈ ಕಾನೂನು ಪಾಲಿಸುತ್ತಿಲ್ಲ. ಇದು ಕನ್ನಡದ ಅವನತಿಗೆ ಕಾರಣ ಎಂದು ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.

Advertisement

ಅವರು ನ. 1 ರಂದು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕರ್ನಾಟಕದಲ್ಲಿ ಶೇ. 40ರಷ್ಟು ಜನರು ಹೊರ ರಾಜ್ಯದವರು ತುಂಬಿ ಹೋಗಿದ್ದಾರೆ. ಆದ್ದರಿಂದ ಕನ್ನಡದ ಉಳಿವು
ಹಾಗೂ ಬೆಳವಣಿಗೆಯಲ್ಲಿ ನಮ್ಮೆಲ್ಲರ ಹೊಣೆಗಾರಿಕೆ ಇದೆ ಎಂದು ಹೇಳಿದರು. 

ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಸಾಹಿತಿ ಗಣೇಶ್‌ ಮಲ್ಯ, ತೋಕೂರು ಐಟಿಐ ಪ್ರಿನ್ಸಿಪಾಲ್‌ ವೈ. ಎನ್‌. ಸಾಲ್ಯಾನ್‌, ಮೂಡಬಿದಿರೆಯ ಉದ್ಯಮಿ ಶ್ರೀಪತಿ ಭಟ್‌, ಕಿನ್ನಿಗೋಳಿ
ಲಯನ್ಸ್‌ ಅಧ್ಯಕ್ಷೆ ಶಾಂಭವಿ ಶೆಟ್ಟಿ, ಶಿಮಂತೂರು ಶ್ರೀ ಶಾರದಾ ಮೋಡೆಲ್‌ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಗೀತಾ ಎಸ್‌. ಎಂ., ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್‌ ಪುನರೂರು, ಯಕ್ಷಲಹರಿ ಅಧ್ಯಕ್ಷ ಪಿ. ಸತೀಶ್‌ ರಾವ್‌, ರೇವತಿ ಪುರುಷೋತ್ತಮ್‌, ಅನುಷಾ ಕರ್ಕೇರಾ ಮತ್ತಿತರರು ಉಪಸ್ಥಿತರಿದ್ದರು. 

ಶಶಿಕಲಾ ಕೆಮ್ಮಡೆ ಅವರಿಂದ ನಾಡಹಬ್ಬದ ಗೀತಗಾಯನ ನಡೆಯಿತು. ಕೆ. ಭುವನಾಭಿರಾಮ ಉಡುಪ ಪ್ರಸ್ತಾವನೆಗೈದು ಸ್ವಾಗತಿಸಿ, ವಂದಿಸಿದರು. ಶರತ್‌ ಕಾರ್ಯಕ್ರಮ ನಿರೂಪಿಸಿದರು. ಅನಂತರ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಿತು.

Advertisement

ಸಾಧಕರಿಗೆ ಸಮ್ಮಾನ
ಈ ಸಂದರ್ಭ ಸಮಾಜಕ್ಕೆ ವಿಶಿಷ್ಟ ಸೇವೆ ಸಲ್ಲಿಸಿದ ಪತ್ರಿಕಾ ಸಂಗ್ರಾಹಕ, ಸಾಹಿತಿ, ನಿವೃತ್ತ ಶಿಕ್ಷಕ ಉಮೇಶ್‌ ರಾವ್‌ ಎಕ್ಕಾರು, ಸಾಹಿತಿ ಅಜಾರು ನಾಗರಾಜ ರಾಯ, ಧಾರ್ಮಿಕ ಚಿಂತಕ, ಸಾಹಿತಿ ಮೋಹನದಾಸ ಸುರತ್ಕಲ್‌, ಪತ್ರಕರ್ತ, ಕಲಾವಿದ ನರೇಶ್‌ ಸಸಿಹಿತ್ಲು, ಸಾಹಸಿ ಪ್ರಕಾಶ್‌ ಮರಾಠೆ ನಂದಾವರ, ಯೋಗ ಶಿಕ್ಷಕ, ಯಕ್ಷಗಾನ ಕಲಾವಿದ ಹರಿರಾಜ್‌ ಶೆಟ್ಟಿಗಾರ್‌ ಕುಜಿಂಗಿರಿ, ಕೆರೆಕಾಡು ಮಕ್ಕಳ ಮೇಳದ ವ್ಯವಸ್ಥಾಪಕ ಜಯಂತ ಕೆರೆಕಾಡು, ಅಂತಾರಾಷ್ಟ್ರೀಯ  ಪವರ್‌ ಲಿಫ್ಟರ್‌ ಅಕ್ಷತಾ ಪೂಜಾರಿ ಬೋಳ, ತಾರಸಿ ಕೃಷಿ ಸಾಧಕ ಕೃಷ್ಣಪ್ಪ ಗೌಡ ಪಲ್ಲಂಬೆಟ್ಟು, ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ರಾಷ್ಟ್ರ ಮಟ್ಟದ ಯೋಗಪಟು ಶ್ರೇಯಾ, ಬಹುಮುಖ ಪ್ರತಿಭೆ ಆಶ್ವೀಜ ಉಡುಪ, ರಾಷ್ಟ್ರಮಟ್ಟದ ಕರಾಟೆಪಟು ಸಂಯುಕ್ತ ನಾಯರ್‌, ರಾಜ್ಯಮಟ್ಟದ ಕರಾಟೆಪಟು ಮನೀಷ್‌, ಬಹುಮುಖ ಪ್ರತಿಭೆ ಧೃತಿ ಕುಲಾಲ್‌ ಅವರನ್ನು ಸಮ್ಮಾನಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next