Advertisement

ವೃತ್ತಿಯೊಂದಿಗೆ ಮಾನವೀಯ ಮೌಲ್ಯಗಳಿರಲಿ: ಜಾವೇದ್‌

12:12 AM Mar 14, 2023 | Team Udayavani |

ಉಳ್ಳಾಲ: ವೈದ್ಯಕೀಯ ಕ್ಷೇತ್ರದಲ್ಲಿ ಜ್ಞಾನ ಮತ್ತು ಅನುಭವ ಪ್ರಮುಖ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಯುವ ವೈದ್ಯರು ವೃತ್ತಿ ಕೌಶಲದೊಂದಿಗೆ ಮಾನವೀಯ ಮೌಲ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದು ಸ್ವಸ್ಥ ಸಮಾಜ ನಿರ್ಮಾಣ ಮಾಡಬೇಕು ಎಂದು ಅರಣ್ಯ ಮತ್ತು ಪರಿಸರ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯ ದರ್ಶಿ ಜಾವೇದ್‌ ಅಖ್ತರ್‌ ಹೇಳಿದರು.

Advertisement

ದೇರಳಕಟ್ಟೆಯ ಕಣಚೂರು ಇಸ್ಲಾಮಿಕ್‌ ಎಜುಕೇಶನ್‌ ಟ್ರಸ್ಟ್‌ನ ಕಣಚೂರು ಆರೋಗ್ಯ ವಿಜ್ಞಾನ ಶಿಕ್ಷಣ ಸಂಸ್ಥೆಗಳ ಪದವಿ ಪ್ರದಾನ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯದ ಉಪ ನಿರ್ದೇಶಕಿ ಡಾ| ರಜನಿ, ಮಾತನಾಡಿ ವೈದ್ಯಕೀಯ ವೃತ್ತಿಯಲ್ಲಿರುವವರು ಆರೋಗ್ಯಯುತ ಸಮಾಜ ನಿರ್ಮಾ ಣದ ಪಣ ತೊಡಬೇಕು ಎಂದರು.

ಕಣಚೂರು ಇಸ್ಲಾಮಿಕ್‌ ಟ್ರಸ್ಟ್‌ ಅಧ್ಯಕ್ಷ ಹಾಜಿ ಯು.ಕೆ. ಮೋನು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಣ ಚೂರು ವೈದ್ಯಕೀಯ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ವೈದ್ಯಕೀಯ ವೃತ್ತಿಯೊಂದಿಗೆ ದೇಶ ಮತ್ತು ಸಮಾಜಸೇವೆಗೂ ಸಮಯ ಮೀಸಲಿಟ್ಟು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದರು.

ಕಣಚೂರು ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌, ಫಿಸಿಯೋಥೆರಪಿ, ನರ್ಸಿಂಗ್‌ ಸೈನ್ಸ್‌, ಅಲೈಡ್‌ ಹೆಲ್ತ್‌ ಸೈನ್ಸ್‌ನ 272 ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು. ವೈದ್ಯಕೀಯ ಕಾಲೇಜಿನ 18, ಫಿಸಿಯೋಥೆರಪಿ, ಅಲೈಡ್‌ ಹೆಲ್ತ್‌ ಸೈನ್ಸ್‌ನ ತಲಾ ಇಬ್ಬರು, ಮತ್ತು ನರ್ಸಿಂಗ್‌ ಸೈನ್ಸ್‌ನ 12 ರ್‍ಯಾಂಕ್‌ ವಿಜೇತರನ್ನು ಗೌರವಿಸಲಾಯಿತು.

Advertisement

ಕಣಚೂರು ಎಜುಕೇಶನ್‌ ಟ್ರಸ್ಟ್‌ ಟ್ರಸ್ಟಿ ಝೊಹರಾ ಮೋನು, ವೈದ್ಯ ಕೀಯ ಕಾಲೇಜಿನ ಡೀನ್‌ ಡಾ| ಕೆ.ಜಿ. ಕಿರಣ್‌, ಸಲಹಾ ಸಮಿತಿ ಅಧ್ಯಕ್ಷ ಮಹಮ್ಮದ್‌ ಇಸ್ಮಾಯಿಲ್‌, ಮೆಡಿಕಲ್‌ ಸುಪರಿಂಟೆಂಡೆಂಟ್‌ ಡಾ| ಹರೀಶ್‌ ಶೆಟ್ಟಿ, ನರ್ಸಿಂಗ್‌ ಪ್ರಾಂಶುಪಾಲೆ ಮೋಲಿ ಸಲ್ಡಾನ್ಹಾ, ಫಿಸಿಯೋಥೆರಪಿ ಪ್ರಾಂಶುಪಾಲ ಮೊಹಮ್ಮದ್‌ ಸುಹೈಲ್‌, ಅಲೈಡ್‌ ಹೆಲ್ತ್‌ ಸೈನ್ಸ್‌ನ ಡಾ| ಶಮೀಮಾ, ಆಡಳಿತ ಅಧಿಕಾರಿ ಡಾ| ರೋಹನ್‌ ಮೋನಿಸ್‌, ವಿವಿಧ ವಿಭಾಗ ಮುಖ್ಯಸ್ಥರಾದ ಡಾ| ಗೌತಮ್‌ ಕಾಂಬ್ಳೆ, ಡಾ| ಸತೀಶ್‌ ಕುಮಾರ್‌ ಎನ್‌.ಎಸ್‌., ಡಾ| ಮಮತಾ ಬಿ.ವಿ., ಡಾ| ಸುಚಿತ್ರಾ ಎ. ಶೆಟ್ಟಿ, ಡಾ| ರತ್ನಾಕರ್‌ ಯು.ಪಿ., ಡಾ| ಯಶವಂತ್‌ ಕುಮಾರ್‌ ರೈ, ಡಾ| ಶಾನವಾಝ್ ಮಾಣಿಪ್ಪಾಡಿ, ಡಾ| ಶಾಹುಲ್‌ ಹಮೀದ್‌, ಡಾ| ಬದ್ರಿನಾಥ್‌ ತಲ್ವಾರ್‌, ಡಾ| ಅಂಜಾನ್‌ ಕುಮಾರ್‌ ಎ.ಎನ್‌., ಡಾ| ಅಶೋಕ್‌ ನಾಯಕ್‌, ಡಾ| ಕಿರಣ್‌ ಕುಮಾರ್‌, ಡಾ| ಸಲಾಹುದ್ದೀನ್‌ ಆರಿಫ್‌ ಕೆ., ಡಾ| ದೀಪಿಕಾ ರಾಮಚಂದ್ರ, ಡಾ| ಒನಿಲ್‌ ಫೆರ್ನಾಂಡಿಸ್‌, ಡಾ| ಅಗಸ್ಟಿನ್‌ ಕೆ.ಎನ್‌. ಡಾ| ಶ್ರುತಕೀರ್ತಿ ಡಿ. ಶೆಣೈ, ಡಾ| ಇರ್ಫಾನ್‌, ಡಾ| ವಿನ್ಸೆಂಟ್‌ ಮಥಾ ಯಸ್‌, ಡಾ| ಬೋಳಾರ್‌ ರಾಮಪ್ರಸಾದ್‌, ಡಾ| ಜಯಂತ್‌ ಕುಮಾರ್‌ ಕೆ., ಡಾ| ಮುಸ್ತಫಾ ಉಪಸ್ಥಿತರಿದ್ದರು.

ಕಣಚೂರು ಶಿಕ್ಷಣ ಸಂಸ್ಥೆಯ ನಿರ್ದೇಶಕ ಅಬ್ದುಲ್‌ ರಹಿಮಾನ್‌ ಸ್ವಾಗತಿಸಿದರು. ಪ್ರತೀûಾ, ಅಕ್ಷಯ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next