Advertisement

ಮಕ್ಕಳ ಅಭಿನಯದಲ್ಲಿ ಕಳೆಗಟ್ಟಿದ ಕಂಸಾಯಣ

08:12 PM Feb 06, 2020 | mahesh |

 

Advertisement

ಬಂಧನದಲ್ಲಿದ್ದ ವಸುದೇವ ದೇವಕಿಯರ ನಡುವೆ ಹದಿನಾರು ವರುಷದ ಹಿಂದಿನ ಪೂತನಿಯ ಸಾವಿನಂದಿನಿಂದಲೇ ಎಲ್ಲವನ್ನೂ ತಿಳಿದಂತಿದ್ದ ಕಂಸ ತನ್ನ ಸಾವಿಗೆ ಕೃಷ್ಣನನ್ನೇ ಕಾಯುವಂತೆ ಭಾಸವಾಗುತ್ತದೆ ಒಂದೊಮ್ಮೆ ಇಲ್ಲಿ ಆತನ ಭಾವ ಮತ್ತು ಬಿಂಬದಲ್ಲಿ.

ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದ “ನಂದಗೋಕುಲ ‘ಹೆಸರಿಗೆ ತಕ್ಕಂತೆ ಐದರಿಂದ ಇಪ್ಪತ್ತರೊಳಗಿನ ವಯೋಮಾನದ,ಹೆಚ್ಚು ಕಲಾವಿದೆಯರನ್ನೆ ಒಳಗೊಂಡಿರುವ ಸುಮಾರು 20 ಮಂದಿಯ ಪುಟ್ಟ ತಂಡ. ಅತ್ತ ಪೂರ್ಣ ವೃತ್ತಿಪರರು ಅಲ್ಲದ ಹವ್ಯಾಸದ ಭಾಗವಾಗಿಯೇ ಕಾಣಿಸಿಕೊಳ್ಳುವ ಇವರಿಗೆ ಆಧುನಿಕ ರಂಗಭೂಮಿಯ ಅಗಾಧ ಅನುಭವವೆನಿಲ್ಲ. ಇದೀಗ ಅವರ ಎರಡನೇ ಪ್ರಯತ್ನ ಈ ಕಂಸಾಯಣ, ಡಾ| ಎಚ್ಚೆಸ್ವಿಯವರ ಗದ್ಯ ಪದ್ಯದ ರೂಪಕ ಆಧಾರಿತವಾಗಿ ಶಿರಸಿಯ ಶ್ರೀಪಾದ ಭಟ್ಟರ ನಿರ್ದೇಶನದಲ್ಲಿ ಪಾದುವ ಕಾಲೇಜಿನ ಬಯಲು ರಂಗಮಂದಿರದಲ್ಲಿ ಉತ್ತಮ ರೀತಿಯ ಮೊದಲ ಪ್ರದರ್ಶನ ಕಂಡಿದೆ.

ಕಾಕತಾಳೀಯವಾಗಿ ಈ ಹಿಂದೆ ಗೋಕುಲ ನಿರ್ಗಮನದಲ್ಲಿ ವೃಂದಾವನದ ಪ್ರೇಮ ಭರಿತ ಕೊಳಲಿನಾಟದ ಲೋಲುಪತೆಯಲ್ಲಿ ಮೈ ಮರೆತ್ತಿದ ಕೃಷ್ಣ, ಬೇರೆ ದಾರಿಯಿಲ್ಲದೆ ರಾಧೆಯ ಮುನಿಸಿನೆದುರು ಸಹ ಬಲರಾಮನೊಡನೆ ಮಥುರೆಗೆ ಹೊರಟು ಮುಂದೆ ಅಲ್ಲಿ ಒಂದೊಂದಾಗಿ ತನ್ನ ಪರಾಕ್ರಮಗಳನ್ನು ತೋರಿಸುತ್ತಾ ಕಂಸನ ವಧೆಯವರೆಗೆ ಸಾಗುತ್ತಾನೆ ಈ ಕಂಸಾಯಣದಲ್ಲಿ. ಈ ಹಂತದ ಕೃಷ್ಣನ ಆಟಾಟೋಪಕ್ಕಿಂತ ಕಂಸನ ತುಮುಲತೆಯೇ ಈ ನಾಟಕದ ವಸ್ತು. ಬಂಧನದಲ್ಲಿದ್ದ ವಸುದೇವ ದೇವಕಿಯರ ನಡುವೆ ಹದಿನಾರು ವರುಷದ ಹಿಂದಿನ ಪೂತನಿಯ ಸಾವಿನಂದಿನಿಂದಲೇ ಎಲ್ಲವನ್ನೂ ತಿಳಿದಂತಿದ್ದ ಕಂಸ ತನ್ನ ಸಾವಿಗೆ ಕೃಷ್ಣನನ್ನೇ ಕಾಯುವಂತೆ ಭಾಸವಾಗುತ್ತದೆ ಒಂದೊಮ್ಮೆ ಇಲ್ಲಿ ಆತನ ಭಾವ ಮತ್ತು ಬಿಂಬದಲ್ಲಿ.

ಬಿಲ್ಲ ಹಬ್ಬಕ್ಕೆ ಆಹ್ವಾನಿತನಾಗಿ ಮಥುರೆಗೆ ಕೃಷ್ಣನ ಆಗಮನ ಕಂಸನಿಗೆ ಒಳಗೊಳಗೇ ಭಯಾನಕವಾದರೆ ಜನತೆಗೆ ಆನಂದವೇ. ಕಂಸನ ಸಾವಿಗಿಂತಲೂ ಅರಾಜಕತೆಯ ಅಂತ್ಯದ ಬಯಕೆ ಅವರ ಆದ್ಯತೆ, ಹೀಗಾಗಿ ಕೃಷ್ಣ , ಕಂಸನ ಪಟ್ಟದಾನೆಯನ್ನು ಕೊಂದದ್ದು ಅವರಿಗೆ ಗಮ್ಮತ್ತಿನ ಮುಂದಿನ ಬಿಲ್ಲ ಹಬ್ಬದ ಸಂಕೇತವೇ ನಿಜ. ಇಂತಹ ಸನ್ನಿವೇಶಗಳನ್ನು ಕೃಷ್ಣನ ಹುಟ್ಟು, ಕಾಳಿಂಗ ಮರ್ದನ ಗೋವರ್ಧನ ಗಿರಿಯಂತಹ ಬಾಲಲೀಲೆಯ ತುಣುಕುಗಳನ್ನು ಜನರ ಮಾತುಕತೆ ಮೂಲಕ ರಂಗದಲ್ಲಿ ಪೇರಿಸಿ ಸಾಕಷ್ಟು ನೃತ್ಯದೊಂದಿಗೆ ಸಾಗಿದ ಈ ಕಂಸಾಯಣ, ದೃಶ್ಯಗಳ ಸಂಯೋಜನೆಯಲ್ಲಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ರೆಕಾರ್ಡೆಡ್‌ ಹಾಡು ಸಂಗೀತವಂತೂ ನಾಟಕದ ಲಯಕ್ಕೆ ಬಹಳ ಅಸಹಜತೆಯನ್ನೇ ಕೊಟ್ಟಂತ್ತಿತ್ತು. ಇವೆಲ್ಲ ಶಾಲಾ ವಾರ್ಷಿಕೋತ್ಸವಕ್ಕಷ್ಟೆ ಚಂದ ವಿನಹ ಕಮರ್ಷಿಯಲ್‌ ಟಚ್‌ ಇರುವಂತಹ ಈ ಬಗೆಯ ನಾಟಕ ತಂಡಗಳಿಗೆ ಖಂಡಿತ ಅಲ್ಲ.

Advertisement

ಅನೇಕ ಮಕ್ಕಳ ಅಭಿನಯ ಅದರಲ್ಲೂ ಒಂದಿಬ್ಬರ ಭಾವತೀವ್ರತೆ ಶ್ಲಾಘನೀಯ. ಅದಾಗಿಯೂ ವಸ್ತ್ರಾಲಂಕಾರ ಇನ್ನೊಂದಿಷ್ಟು ಹೊಸತನದೆಡೆಗೆ ಸಾಗಬಹುದಿತ್ತೇನೋ? ರಂಗಸಜ್ಜಿಕೆ ಉತ್ತಮವಿದ್ದರೂ ಅದನ್ನು ಮಕ್ಕಳು ರಂಗದಲ್ಲಿ ಸ್ವತಃ ನಿಭಾಯಿಸುವಾಗ ಕ್ಲಿಷ್ಟತೆ ಎದ್ದು ಕಾಣುತ್ತಿತ್ತು. ಪ್ರಸಾಧನ ಆಕರ್ಷಣೆಯೊಂದಿಗೆ ಸಹ ಕೆಲವು ಅನಿವಾರ್ಯ ಬದಲಾವಣೆ ಬಯಸುತಿದೆ.ಬೆಳಕು ನೃತ್ಯಕ್ಕೆ ಪೂರಕವಾಗಿತ್ತು ವಿನಹ ದೃಶ್ಯಕ್ಕಲ್ಲ. ಅತ್ಯುತ್ತಮ ಧ್ವನಿ ನಾಟಕದ ಹೈಲೈಟ್‌. ಸ್ವಲ್ಪ ಹೆಚ್ಚೇ ಬೊಬ್ಬಿರಿಯುತ್ತಿದ್ದ ಕಂಸನೆದುರು ಪೇಲವವಾಗಿ ಕಾಣುತ್ತಿದ್ದ ಕೃಷ್ಣ, ಬಲರಾಮನ ದಿಟ್ಟತನದೆದುರು ಕೊನೆಗೂ ಅವಸರವಸರದಿ ಕಂಸನ ವಧೆ ಮಾಡಿದಾಗ ಇಡೀ ಮಥುರೆ ಕೋಲಾಟದಿ ಕುಣಿದಾಡಿದ್ದು ಮಾತ್ರ ಮನಮೋಹಕ.ನಿರ್ದೇಶಕರು ಮಕ್ಕಳ ಮುಖ ನೋಡಿ ತಮ್ಮ ಆನುಭವವನ್ನು ಸಂಪೂರ್ಣವಾಗಿ ಧಾರೆಎರೆಯಲ್ಲಿಲ್ಲವೋ ಎಂಬ ಸಣ್ಣ ಅನುಮಾನ.

ಕಲ್ಲಚ್ಚು ಮಹೇಶ ಆರ್‌. ನಾಯಕ್‌

Advertisement

Udayavani is now on Telegram. Click here to join our channel and stay updated with the latest news.

Next