Advertisement

ಪ್ಯಾಟೆ ಬಸವೇಶ್ವರ  ಮಹಾರಥೋತ್ಸವ

03:40 PM Apr 12, 2019 | Team Udayavani |

ಕಂಪ್ಲಿ: ತಾಲೂಕಿನ ಎಮ್ಮಿಗನೂರು ಗ್ರಾಮದ ಶ್ರೀಪ್ಯಾಟೆ ಬಸವೇಶ್ವರ ಸ್ವಾಮಿ
ಮಹಾರಥೋತ್ಸವ ಬುಧವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ
ವಿಜೃಂಭಣೆಯಿಂದ ನಡೆಯಿತು.

Advertisement

ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಬೆಳಗಿನ ಜಾವದಿಂದಲೇ
ಹೋಮ, ಭಜನೆ, ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ವಿಶೇಷ ಪೂಜೆ
ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಎಚ್‌.ಎಂ.ದೊಡ್ಡ
ಅಜ್ಜಯ್ಯನ ನೇತೃತ್ವದಲ್ಲಿ ನಡೆದವು.

ಬೆಳಗ್ಗೆಯಿಂದಲೇ ಭಕ್ತರು ದೇವಸ್ಥಾನಕ್ಕೆ ತೆರಳಿ ಸರದಿ ಸಾಲಿನಲ್ಲಿ
ನಿಂತು ಪೂಜೆ ಸಲ್ಲಿಸಿದರು. ಸಂಜೆ ಎಮ್ಮಿಗನೂರು ಹಂಪಿ ಸಾವಿರದೇವರು
ಮಹಾಂತರ ಮಠದ ಪೀಠಾಧಿಪತಿ ವಾಮದೇವ ಶಿವಾಚಾರ್ಯ ಮಹಾಸ್ವಾಮಿಗಳು ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಮಹಾರಥೋತ್ಸವಕ್ಕೆ
ಚಾಲನೆ ನೀಡಿದರು. ದೇವಸ್ಥಾನದಿಂದ ಆರಂಭವಾದ ಮಹಾರಥೋತ್ಸವ
ದೂರದ ಎದುರುಬಸವಣ್ಣ ಕಟ್ಟೆವರೆಗೆ ರಥವನ್ನು ನೆರೆದಿದ್ದ ಭಕ್ತರು
ಎಳೆದೊಯ್ದು ಪುನಃ ಮೂಲ ಸ್ಥಳಕ್ಕೆ ಎಳೆದು ತಂದರು.

Advertisement

Udayavani is now on Telegram. Click here to join our channel and stay updated with the latest news.

Next