ಕಂಪ್ಲಿ: ತಾಲೂಕಿನಾದ್ಯಂತ 73ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಕಂಡು ಬಂದಿತು. ಎಲ್ಲೆಲ್ಲಿಯೂ ತ್ರಿವರ್ಣ ಧ್ವಜಗಳ ಹಾರಾಟ, ವಿವಿಧ ಶಾಲೆಗಳ ವಿದ್ಯಾರ್ಥಿಗಳ ವೇಷಭೂಷಣಗಳು ಗಮನ ಸೆಳೆದವು.
ಕಂಪ್ಲಿ ಪುರಸಭೆ: ತಾಲೂಕಿನ ಏಕೈಕ ಪುರಸಭೆಯಾದ ಕಂಪ್ಲಿ ಪುರಸಭೆಯಲ್ಲಿ ಆಯೋಜಿಸಿದ್ದ 73ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷರಾದ ಎಂ. ಸುಧೀರ್ ಧ್ವಜಾರೋಹರಣ ನೆರವೇರಿಸಿ ಮಾತನಾಡಿ, ಹೋರಾಟಗಾರರ ಆದರ್ಶ ಗುಣಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಪುರಸಭೆ ಸದಸ್ಯರಾದ ಬಟ್ಟ ಪ್ರಸಾದ್, ಪುರಸಭೆ ಮುಖ್ಯಾಧಿಕಾರಿ ಕೆ. ದುರುಗಣ್ಣ, ಸದಸ್ಯರಾದ ಭಟ್ಟ ಪ್ರಸಾದ್, ಸಿ.ಆರ್. ಹನುಮಂತ, ಎಸ್. ಸುರೇಶ್, ಬಿ.ನಾಗರಾಜ, ಎಂ.ಮರೆಣ್ಣ, ಜಿಲಾನ್, ಜಾಫರ್, ರಮೇಶ ಹಾಗೂ ಪುರಸಭೆ ಸಿಬ್ಬಂದಿ ಪಾಲ್ಗೊಂಡಿದ್ದರು. ಆದರೆ ಪುರಸಭೆಯ 23 ಸದಸ್ಯರಲ್ಲಿ ಕೇವಲ ನಾಲ್ಕೈದು ಸದಸ್ಯರು ಮಾತ್ರ ಭಾಗವಹಿಸಿದ್ದರು.
ಪೊಲೀಸ್ ಠಾಣೆ: ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಸಿಪಿಐ ಡಿ. ಹುಲುಗಪ್ಪ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರೆವೇರಿಸಿದರು. ಪಿಎಸ್‌ಐ ಕೆ.ಬಿ.ವಾಸುಕುಮಾರ್ ಎಎಸ್‌ಐಗಳಾದ ಹಗರಪ್ಪ, ಪರಶುರಾಮ, ಸಿಬ್ಬಂದಿಗಳಾದ ಅನ್ವಾರಸಾಬ್, ವಿರೂಪಾಕ್ಷಪ್ಪ, ರವಿವರ್ಮ, ವಿ.ಸಿ.ವಿಘ್ನೕಶ್ವರ ಸೇರಿದಂತೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಭಾರತಿ ಶಿಶು ವಿದ್ಯಾಲಯ: ಪಟ್ಟಣದ ಪ್ರತಿಷ್ಠಿತ ಕಂಪ್ಲಿ ಎಜ್ಯುಕೇಷನ್ ಸಂಸ್ಥೆಯ ಭಾರತೀ ಶಿಶು ವಿದ್ಯಾಲಯದಲ್ಲಿ ಸಂಸ್ಥೆಯ ಮುಖ್ಯಸ್ಥರು ಧ್ವಜಾರೋಹಣ ನೆರವೇರಿಸಿದರು. ನಂತರ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಹಾಗೂ ಸಿಹಿಯನ್ನು ವಿತರಣೆ ಮಾಡಿದರು. ಷಾಮಿಯಾಚಂದ್ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪ್ರಾಚಾರ್ಯ ಮಹ್ಮದ್ ಷಫಿ ದ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಉಪಪ್ರಾಚಾರ್ಯರು, ಎಸ್‌ಡಿಎಂಸಿ ಅಧ್ಯಕ್ಷರು, ಉಪನ್ಯಾಸಕರು, ಅಧ್ಯಾಪಕರು ಭಾಗವಹಿಸಿದ್ದರು. ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನಲ್ಲಿ ಪ್ರಾಚಾರ್ಯ ಎಂ. ಚಂದ್ರಶೇಖರ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪ್ರಭಾರಿ ಉಪಪ್ರಾಚಾರ್ಯ ಶ್ರೀನಿವಾಸ್ ಸೇರಿದಂತೆ ಉಪನ್ಯಾಸಕರು, ಶಿಕ್ಷಕರು ಭಾಗವಹಿಸಿದ್ದರು.
ಕಂಪ್ಲಿ ಕಲ್ಮಠದ ಪ್ರಭುಸ್ವಾಮಿಗಳ ಅನುದಾನಿತ ಪ್ರೌಢಶಾಲೆ ಪಟ್ಟಣದ ಶ್ರೀಕ್ಷೇತ್ರ ಕಲ್ಮಠದ ಅನುದಾನಿತ ಪ್ರೌಢಶಾಲೆಯಲ್ಲಿ ಪುರಸಭೆ ಸದಸ್ಯರಾದ ಸಪ್ಪರದ ರಾಘವೇಂದ್ರ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಗುರುಸಿದ್ದೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಜಿ.ಜಿ. ಚಂದ್ರಣ್ಣ, ಖಜಾಂಚಿ ಜಿ. ಚಂದ್ರಶೇಖರಗೌಡ, ಪುರಸಭೆ ಮಾಜಿ ಅಧ್ಯಕ್ಷರುಗಳಾದ ಅದ್ದಪ್ಪ ಲಕ್ಷ್ಮೀದೇವಿ, ಬಿ. ಸಿದ್ದಪ್ಪ, ಅಯೋದಿ ವೆಂಕಟೇಶ್, ಪಿ.ಬ್ರಹ್ಮಯ್ಯ, ಸಂಸ್ಥೆಯ ನಿರ್ದೇಶಕರಾದ ಪಿ. ವೆಂಕನಗೌಡ, ಕಾಮರೆಡ್ಡಿ ಚಂದ್ರಶೇಖರ್, ಗುರುಸಿದ್ದಪ್ಪ ನಾಗರಾಜರೆಡ್ಡಿ, ಮುಖ್ಯಗುರು ಎ.ಎಂ.ಬಸವರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪಟ್ಟಣದ ವಿವಿಧ ಸರ್ಕಾರಿ ಇಲಾಖೆಗಳಾದ ಉಪನೋಂದಣಿ ಕಚೇರಿ, ನೀರಾವರಿ, ಎಪಿಎಂಸಿ, ಲೋಕೋಪಯೋಗಿ, ಸಹಕಾರ ಸಂಘಗಳು ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸ್ಥಳೀಯ ಮುಖ್ಯಸ್ಥರು ಧ್ವಜಾರೋಹಣ ನೆರವೇರಿಸಿದರು. ಪಟ್ಟಣ ಹಾಗೂ ಗ್ರಾಮೀಣ ಭಾಗದ ಶಾಲಾ, ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.