Advertisement

ರಾಮಸಾಗರ ಗುಡ್ಡದಲ್ಲಿ ದೊರಕಿದ ಅಸ್ತಿಪಂಜರದ ರಹಸ್ಯ ಬಯಲು ಮಾಡಿದ ಪೊಲೀಸರು : ಇಬ್ಬರ ಬಂಧನ

08:23 AM Apr 03, 2022 | Team Udayavani |

ಕಂಪ್ಲಿ(ಬಳ್ಳಾರಿ): ಕಂಪ್ಲಿ ತಾಲ್ಕೂಕಿನ ರಾಮಸಾಗರ ಗ್ರಾಮದ ವಿಠಲಾಪುರ ಕೆರೆಯ ಕೆರೆಗದ್ದೆ ಗುಡ್ಡಗಾಡು ಪ್ರದೇಶದಲ್ಲಿ ಮಾ 28ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಯುವಕನ ತಲೆ ಬುರಡೆ ಎಲುಬುಗಳು, ಅಸ್ತಿಪಂಜರ ದೊರಕಿದ ಬಗ್ಗೆ ಕಂಪ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನುಮಾನಸ್ಪದವಾಗಿ ಸಾವಿಗೀಡಾಗಿದ್ದ ವ್ಯಕ್ತಿಯನ್ನು ಕಲಬುರಗಿ ಜಿಲ್ಲೆ,ಜೇವರ್ಗಿ ತಾಲ್ಲೂಕಿನ ಬಳ್ಳಂಡುಗಿ ಗ್ರಾಮದ ಅಮರೇಶ ಎಂದು ಗುರುತಿಸಲಾಗಿದೆ.

Advertisement

ಘಟನೆಯ ಸ್ಥಳದಲ್ಲಿ ದೊರಕಿದ ಮೃತ ವ್ಯಕ್ತಿಯದು ಎನ್ನಲಾದ ಕೆಲವು ವಸ್ತುಗಳು ದೊರಕಿದ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದ್ದವು ಹಾಗೂ ಘಟನೆಯ ಸ್ಥಳಕ್ಕೆ ಎಎಸ್ಪಿ ಗುರು ಬಿ ಮತ್ತೂರು ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆಯ ಬಗ್ಗೆ ಪಿಐ ಸುರೇಶ್ ತಳವಾರ್ ಮತ್ತು ಸಿಬ್ಬಂದಿಗಳಿಗೆ ಮಾರ್ಗದರ್ಶನ ಮಾಡಿದ್ದರು. ಪಟ್ಟಣದಲ್ಲಿಂದು ಸುದ್ದಿಗೋಷ್ಟಿ ನಡೆಸಿದ ಬಳ್ಳಾರಿ ಎಸ್ಪಿ ಸೈದುಲ್ ಅಡಾವತ್, ಎಎಸ್ಪಿ ಗುರು ಬಿ ಮತ್ತೂರು, ಡಿಎಸ್ಪಿ ಎಸ್ ಎಸ್ ಕಾಶೀ , ಅಸ್ತಿಪಂಜರದ ಹಿಂದಿನ ರಹಸ್ಯ ಬಯಲು ಮಾಡಿದ್ದಾರೆ.

ಘಟನೆ ಕುರಿತು ಮಾಹಿತಿ ನೀಡಿದ ಪೊಲೀಸರು… ಮೃತನ ಸಹೋದರ ಪ್ರಭು, ತಂದೆ ಶರಣಪ್ಪ ಕಲ್ಲೂರು ಅವರು ಠಾಣೆಗೆ ಬಂದು ಮೃತ ವ್ಯಕ್ತಿಯ ಕೊರಳಲ್ಲಿನಲ್ಲಿದ್ದ ಸರ, ಮಣಿಕಟ್ಟಿನ ಕರಿಮಣಿ ಸರ ತಮ್ಮ ಸಹೋದರ ಅಮರೇಶನದ್ದೇ ಎಂದು ತಿಳಿಸಿ, ಅವನು ಗಂಗಾವತಿ ತಾಲ್ಲೂಕಿನ ಇಂದಿರಾ ಪವರ್ ಪ್ಲಾಂಟಿನಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದು, ಮಾ 19ರಂದು ಸಂಜೆ ಗಂಗಾವತಿ ಇಂದಿರಾ ಪವರ್ ಪ್ಲಾಂಟಿನಲ್ಲಿ ಕೆಲಸ ಮಾಡುವ ಕಿರಣ್ ಕುಮಾರ, ಮಲ್ಲಯ್ಯ, ಸಂಗಣ್ಣ ಇವರುಗಳು ಸೇರಿ ಮೋಟಾರು ಸೈಕಲ್ ನಲ್ಲಿ ಕರೆದುಕೊಂಡು ಹೋಗಿದ್ದು, ಅದೇ ದಿನ ಸಂಜೆ 7 ಗಂಟೆಗೆ ಪ್ಲಾಂಟಿಗೆ ಮೂರು ಜನ ಮಾತ್ರ ಬಂದಿದ್ದು ನಮ್ಮ ಸಹೋದರರನನ್ನು ವಾಪಸ್ಸು ಕರೆದುಕೊಂಡು ಬಂದಿಲ್ಲ. ಇವರೇ ಅಮರೇಶನನ್ನು ರಾಮಸಾಗರದ ವಿಠಲಾಪುರ ಕೆರೆಯ ಪಕ್ಕದ ಗುಡ್ಡದಲ್ಲಿ ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ತನಿಖೆ ನಡೆಸಿ ಮೂವರು ಅರೋಪಿಗಳ ಪೈಕಿ ಕಿರಣ್ ಕುಮಾರ್ ಮತ್ತು ರೇವಣಸಿದ್ದ ಎನ್ನುವವರನ್ನ ಬಂಧಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ : ಮನೆ ಮನೆಗಳಲ್ಲೂ ಸ್ವಾತಂತ್ರ್ಯದ ದೇಶಭಕ್ತಿ ಮೆರೆಯಲಿ

ಕಂಪ್ಲಿ ಪಿಐ ಸುರೇಶ್ ಎಚ್ ತಳವಾರ್ ಮತ್ತು ಸಿಬ್ಬಂದಿಗಳಾದ ನಾಗನಗೌಡ, ಗೋವಿಂದ, ಮಂಜುನಾಥ್, ವಿಜಯಕುಮಾರ್, ಘನಮೂರ್ತಿ, ಮಾರೆಪ್ಪ ಪ್ರಕರಣವನ್ನು ಶೀಘ್ರವಾಗಿ ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಇನ್ನಿಬ್ಬರು ಆರೋಪಿಗಳಾದ ಮಲ್ಲಯ್ಯ ಮತ್ತು ಸಂಗಣ್ಣ ಹಾಗೂ ಇದರಲ್ಲಿ ಶಾಮೀಲಾಗಿರುವ ಇತರೆ ಆರೋಪಿಗಳನ್ನ ಶೀಘ್ರವಾಗಿ ಬಂಧಿಸುವುದಾಗಿ ತಿಳಿಸಿದ ಅವರು ಕಂಪ್ಲಿ ಪೊಲೀಸ್ ಠಾಣೆ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಕಾರ್ಯವೈಖರಿಯನ್ನು ಪ್ರಶಂಸಿಸಿದರಲ್ಲದೆ 10 ಸಾವಿರ ನಗದು ಘೋಷಣೆ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next