Advertisement

ಧಾರ್ಮಿಕ ಆಚರಣೆಯಿಂದ ನೆಮ್ಮದಿ-ಮನಃಶಾಂತಿ

05:05 PM Aug 03, 2019 | Team Udayavani |

ಕಂಪ್ಲಿ: ದೈನಂದಿನ ಒತ್ತಡದ ಜೀವನದಲ್ಲಿ ಮಾನಸಿಕ, ದೈಹಿಕ ನೆಮ್ಮದಿಗೆ ಹಾಗೂ ಶಾಂತಿಗೆ ಧಾರ್ಮಿಕ ಆಚರಣೆಗಳು ಅಗತ್ಯವಾಗಿವೆ ಎಂದು ಬುಕ್ಕಸಾಗರ ಕರಿಸಿದ್ದೇಶ್ವರ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಕರಿಸಿದ್ದೇಶ್ವರ ವಿಶ್ವಾರಾಧ್ಯ ಶ್ರೀ ತಿಳಿಸಿದರು.

Advertisement

ಅವರು ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆ ಆವರಣದಲ್ಲಿ ಶ್ರಾವಣಮಾಸದ ಅಂಗವಾಗಿ ತಿಂಗಳ ಕಾಲ ಆಯೋಜಿಸಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಪುರಾಣ ಪ್ರವಚನ ಕಾರ್ಯಕ್ರಮಗಳನ್ನು ಷಟ್ಸ್ಥಲ ಧ್ವಜಾರೋಹಣ ನೆರವೇರಿಸುವ ಮೂಲಕ ಉದ್ಘಾಟಿಸಿ ಆರ್ಶೀವಚನ ನೀಡಿದರು.

ಯಾಂತ್ರಿಕ ಜೀವನದಲ್ಲಿ ಮನುಷ್ಯರಿಗೆ ವಿಶ್ರಾಂತಿ ಎನ್ನುವುದೇ ಇಲ್ಲವಾಗಿದ್ದು, ಈ ಹಿನ್ನೆಲೆಯಲ್ಲಿ ನಮ್ಮ ಹಿರಿಯರು ಹಿಂದುಗಳ ಪವಿತ್ರ ಹಬ್ಬಗಳಲ್ಲಿ ಶ್ರಾವಣ ಮಾಸಕ್ಕೆ ವಿಶೇಷ ಸ್ಥಾನವನ್ನು ನೀಡಿದ್ದು, ಈ ಸಮಯದಲ್ಲಿ ದಣಿದಿರುವ ಮನಸ್ಸಿಗೆ ಶಾಂತಿ ನೆಮ್ಮದಿಗಾಗಿ ತಿಂಗಳ ಕಾಲ ಉತ್ತಮವಾದ ಆಧ್ಯಾತ್ಮಿಕ ವಿಚಾರಗಳನ್ನು ಆಲಿಸಲಿ ಎಂದು ವಿವಿಧ ಆಚರಣೆಗಳನ್ನು ಅಳವಡಿಸಿಕೊಂಡಿದ್ದಾರೆಂದು ವಿವರಿಸಿದರು. ಈ ನಿಟ್ಟಿನಲ್ಲಿ ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಕಳೆದ 57 ವರ್ಷಗಳಿಂದ ನಿರಂತರವಾಗಿ ಒಂದು ತಿಂಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಮತ್ತು ಪ್ರತಿದಿನ ಸಂಜೆ ಪುರಾಣ ಪ್ರವಚನ ಹಾಗೂ ನಾಡಿನ ಹೆಸರಾಂತ ಸಾಹಿತಿಗಳಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಸದ್ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

ಕಂಪ್ಲಿ ಫಿರ್ಕಾ ವೀರಶೈವ ಸಂಘದ ಅಧ್ಯಕ್ಷ ಪಿ. ಮೂಕಯ್ಯಸ್ವಾಮಿ, ಪಾಠಶಾಲೆಯ ಪ್ರಾಚಾರ್ಯ ಘನಮಠದಯ್ಯ ಶಾಸ್ತ್ರಿ, ಕೆ.ಎಂ. ಹೇಮಯ್ಯಸ್ವಾಮಿ, ಪಾಠಶಾಲೆಯ ಅಧ್ಯಕ್ಷ ಎಸ್‌.ಎಸ್‌.ಎಂ. ಚೆನ್ನಯ್ಯಸ್ವಾಮಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶ್ರಾವಣಮಾಸದ ಒಂದು ತಿಂಗಳ ಕಾಲ ಪ್ರತಿದಿನ ಸಂಜೆ 6-30ಕ್ಕೆ ಸೊನ್ನಲಾಪುರದ ಶ್ರೀ ಶಿವಯೋಗಿ ಸಿದ್ದಾರಾಮೇಶ್ವರ ಪುರಾಣ ಪ್ರವಚನ ನಡೆಯಲಿದ್ದು, ಪುರಾಣ ಪ್ರವಚನವನ್ನು ಬೆಟಸೂರಿನ ವೇ.ಪಂ. ವೀರೇಶ್ವರ ಶಾಸ್ತ್ರಿಗಳು ಹಿರೇಮಠ, ಸಂಗೀತ ಮತ್ತು ವಾಚನವನ್ನು ಗಂಗಾವತಿಯ ರವಿಕುಮಾರ್‌ ಕಾಶೆಟ್ಟಿ ಗವಾಯಿಗಳು ಮತ್ತು ತಬಲಾ ವಾದನವನ್ನು ಗಂಗಾವತಿಯ ವೇ. ವೀರಯ್ಯಸ್ವಾಮಿ ಕಲ್ಮಠ ನಡೆಸಿಕೊಡಲಿದ್ದಾರೆಂದು ಸಂಘಟಕರು ತಿಳಿಸಿದರು.

Advertisement

ಕಾರ್ಯಕ್ರಮದಲ್ಲಿ ಪಾಠಶಾಲೆಯ ಪದಾಧಿಕಾರಿಗಳಾದ ಕೆ.ಸಣ್ಣಗವಿಸಿದ್ದಪ್ಪ, ಇಟಗಿ ಬಸವರಾಜಗೌಡ, ಜಿ.ಜಿ. ಆನಂದಮೂರ್ತಿ, ಜಿ.ಎಚ್. ಶಶಿಧರ, ದಾನಶೆಟ್ಟಿ ಶಿವನಾಗಪ್ಪ, ಜೆ.ಶಂಕರ್‌, ಅಲಬನೂರು ಬಸವರಾಜ, ಕಾಮರೆಡ್ಡಿ ನಾಗರಾಜ್‌, ಹುಗ್ಗಿ ನಾಗಪ್ಪ, ವಾಲಿಕೊಟ್ಟಪ್ಪ, ಗೊಂದಿ ಚಂದ್ರಣ್ಣ, ವೀರಶೈವ ಸಮಾಜದ ಮುಖಂಡರಾದ ವಾಲಿಕೊಟ್ಟಪ್ಪ, ಎಚ್. ಗವಿಸಿದ್ದಪ್ಪ, ವೀರಭದ್ರಯ್ಯ, ಕೆ.ವಿರುಪಾಕ್ಷಪ್ಪ, ಕಲ್ಯಾಣಚೌಕಿಮಠದ ಬಸವರಾಜ ಶಾಸ್ತ್ರಿ, ಎಸ್‌.ಡಿ. ಬಸವರಾಜ್‌, ಸಾಂಗತ್ರಯ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ವೀರಶೈವ ಸಮಾಜದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಸಮಾಜಗಳ ಮುಖಂಡರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next