Advertisement

ಸರಳವಾಗಿ ನಡೆದ ಕ್ಯಾಮೇನಹಳ್ಳಿ ಅಂಜಿನೇಯಸ್ವಾಮಿ ರಥೋತ್ಸವ

06:15 PM Feb 08, 2022 | Team Udayavani |

ಕೊರಟಗೆರೆ: ತಾಲೂಕಿನ ಇತಿಹಾಸ ಪ್ರಸಿದ್ದ ಕ್ಯಾಮೇನಹಳ್ಳಿಯ ಅಂಜಿನೇಯಸ್ವಾಮಿ ಜಾತ್ರಾ ಮಹೋತ್ಸವ ರಥೋತ್ಸವವು ಜಿಲ್ಲಾಡಳಿತದ ಪರಿಶೀಲನೆ ಇಲ್ಲದ ಆದೇಶ ಮತ್ತು ತಾಲೂಕು ಆಡಳಿತದ ಅಸರ್ಮಕ ವರದಿ ಹಾಗೂ ನೂತನ ವ್ಯವಸ್ಥಾಪನಾ ಸಮಿತಿ ಅದ್ಯಕ್ಷರ ಗೊಂದಲ ಕೆಲಸಗಳಿಂದ ಮಂಕಾಗಿದ್ದು ಭಕ್ತರಿಗೆ ಮತ್ತು ಸಾರ್ವಜನಕರಿಗೆ ಬೇಸರ ನಿರಾಸೆ ವ್ಯಕ್ತವಾಗಿ ಅತಿ ಸರಳವಾಗಿ ನಡೆಯಿತು.

Advertisement

ರಥಸಪ್ತಮಿಯಂದು ಕ್ಯಾಮೇನಹಳ್ಳಿಯ ಅಂಜಿನೇಯಸ್ವಾಮಿ ರಥೋತ್ಸವ ಜಾತ್ರೆಯು ಪುರಾತನ ಇತಿಹಾಸ ಹೊಂದಿದೆ, ಹಲವಾರು ವರ್ಷಗಳಿಂದ ಸಾವಿರಾರು ಭಕ್ತರು ಈ ಧಾರ್ಮಿಕ ವಿಧಿ ವಿಧಾನದಲ್ಲಿ ಪಾಲ್ಗೂಳುತ್ತಿದ್ದರು, ನಡೆದು ಕೊಂಡು ಹೊಗುತ್ತಿದ್ದವು, ಆದರೆ ಕೊರೊನಾ ಬಂದ ಮೇಲೆ ಜಾತ್ರೆಗೆ ತಡೆಯಾದರು ಸಹ ಸಂಪ್ರದಾಯಿಕ ರಥೋತ್ಸವವು ನಡೆಯತ್ತಿತು. ಅದರೆ ಇಂದು ರಥಸಪ್ತಮಿಯ ರಥೋತ್ಸವವು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ನಿರ್ಲಕ್ಷ, ಸ್ಥಳಕ್ಕೆ ಬಾರದೆ ಪರಿಸ್ಥಿತಿ ಸಂಪ್ರದಾಯವನ್ನು ತಿಳಿದುಕೊಳ್ಳದೆ ಕೇಂದ್ರಸ್ಥಾಕ್ಕೆ ಅಂಟಿಕೊಂಡು ಇರುವುದು ಇಷ್ಟಕ್ಕೆಲ್ಲಾ ಕಾರಣವಾಯಿತು ಹಾಗೂ ಸರ್ಕಾರದ ಹೆಸರು ಹೇಳಿಕೊಂಡ ವ್ಯವಸ್ಥಾಪನಾ ಸಮಿತಿ ಅದ್ಯಕ್ಷನ  ಅರ್ಜಿಗೆ ಮನ್ನಣೆ ನೀಡಿ ನೂತನ ಅರ್ಚರನ್ನು ನೇಮಿಸಿ ಆದೇಶ ಮಾಡಿ ಗೋಂದಲ ಸೃಷ್ಟಿಸಿದ ಪರಿಣಾಮ  ಸಂಪ್ರದಾಯಿಕ ದೇವರ ರಥೋತ್ಸವ ಸರಳವಾಗಿಯ ನಡೆಯದೆ ಭಕ್ತರು ಸರ್ಕಾರಕ್ಕೆ ಇಲಾಖೆಗೆ ಹಿಡಿ ಶಾಪ ಹಾಕಿದರು.

ಭಾನುವಾರದಂದೇ ಆರ್ಚಕರ ಗೊಂದಲ ದೇವಸ್ಥಾಕ್ಕೆ ಬೀಗ ಹಾಕಿರುವ  ವಿಷಯ ಹರಡಿ ಮಾದ್ಯಮಗಳಲ್ಲಿ ಬಂದು ಸೋಮವಾರ ಬೆಳಿಗೆ ಆ ಘಟನೆಯ ಕಾವು ದೇವಸ್ಥಾನದ ಆವರಣದಲ್ಲಿ ಭಕ್ತರಿಂದ ಏರಿತ್ತು, ಆದರೆ ಅದನ್ನು ತಹಶೀಲ್ದಾರರು ಸಂಜೆ ಬಂದು ಬಗೆಹರಿಸಿದರು. ಇಷ್ಟೆಲ್ಲಾ ಮಾಹಿತಿ ಜಿಲ್ಲಾಧಿಕಾರಿಗಳಿಗೆ ಇದ್ದರೂ ಸ್ಥಳಕ್ಕೆ ಬರದೆ ಅರ್ಚಕರ ಬದಲಿ ಆದೇಶವನ್ನು ತಡವಾಗಿ ಕೊಟ್ಟರು. ಇಷ್ಟೆಲ್ಲಾ ಗೋಂದಲದ ಮದ್ಯೆ ರಥೋತ್ಸವ ನಿಂತು ಹೋಯಿತು.

ಕೊರೋನಾ ಮೂರನೇ ಅಲೇ ಕಡಿಮೆ ಇದೆ ಈಗ ಬಸ್ಸಿನಲ್ಲಿ ದಪ್ಪಟ್ಟು ಜನರು ದಿನವೂ ಪ್ರಯಾಣ ಮಾಡುತ್ತಿದ್ದಾರೆ. ಕುರಿ ಹಾಗೂ ಇತರ ಸಂತೆಗಳಲ್ಲಿ ಮಾಸ್ಕ್ ಇಲ್ಲದೆ ಸಾವಿರಾರು ಜನ ಸೇರುತ್ತಿದ್ದಾರೆ, ಸಿನಿಮಾ ಹಾಲ್ ಗಳಲ್ಲಿ ಹವಾನಿಯಂತ್ರಣದಲ್ಲಿ ನೂರರು ಜನ ಸೇರುತ್ತಾರೆ, ಅಭಿವೃಧಿ ಹೆಸರಿನಲ್ಲಿ ರಾಜಕೀಯ ಸಭೆ ಸಮಾರಂಭದಲ್ಲಿ ನೂರಾರು ಒಮ್ಮೆ ಸಾವಿರಾರು ಜನ ಸೇರುತ್ತಾ ಇದ್ದಾರೆ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಇಲ್ಲದೆ ಗುಂಪುಗಳ ಇವೆ, ದೊಡ್ಡ ದೇವಸ್ಥಾನ ಮಸೀದಿ ಚರ್ಚ್ಗಳಲ್ಲಿ ದಿನವೂ ಲಕ್ಕವಿಲ್ಲದಷ್ಟು ಜನ ಸೇರುತ್ತಿದ್ದಾರೆ ಧಾರ್ಮಿಕ ಕಾರ್ಯ ನಡೆಯುತ್ತಿದೆ ಅದನ್ನ ಕೇಳುವವರು ಯಾರು ಇಲ್ಲ,  ಆದರೆ ಕ್ಯಾಮೆನಹಳ್ಳಿ ಆಂಜಿನೇಯ ಸ್ವಾಮಿ ಸರಳ ರಥೋತ್ಸವಕ್ಕೆ ಜಿಲ್ಲಾಧಿಕಾರಿಗಳು ಅನುಮತಿ ನೀಡದೆ ಇರುವುದನ್ನು ಸಾರ್ವಜನಿಕರು ಹಾಗೂ ಭಕ್ತರು ಪ್ರಶ್ನಿಸಿದ್ದಾರೆ, ಕಾನೂನು ಎಲ್ಲರಿಗೂ ಒಂದೆ ಇರಬೇಕು ಎಂದು ಈ ಬಗ್ಗೆ ಸರ್ಕಾರ ಗಮನ ಹರಿಸಿಬೇಕು ಎಂದು ಒತ್ತಾಯಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next