Advertisement

Kambala ; ಹಲವು ಮೆಡಲ್ ಗೆದ್ದಿದ್ದ ಕೋಣ ‘ಲಕ್ಕಿ’ ಇನ್ನಿಲ್ಲ

11:15 PM Jul 17, 2024 | Team Udayavani |

ಮಂಗಳೂರು/ಕಿನ್ನಿಗೋಳಿ: ಹಲವು ಕಂಬಳ ಸ್ಪರ್ಧೆಗಳಲ್ಲಿ ಬಹುಮಾನ ಗೆದ್ದಿರುವ, ಕಂಬಳ ಪ್ರೇಮಿಗಳ ಕಣ್ಮಣಿ “ಲಕ್ಕಿ’ ಕೋಣ ಬುಧವಾರ ಸಾವನ್ನಪ್ಪಿದೆ.

Advertisement

ವರಪಾಡಿ ಬಡಗುಮನೆ ದಿವಾಕರ ಚೌಟ ಅವರು ಸಾಕಿದ್ದ “ಲಕ್ಕಿ’ಗೆ 6 ವರ್ಷ ಪ್ರಾಯವಾಗಿದ್ದು, ಉದರ ಸಂಬಂಧಿ ಕಾಯಿಲೆಯಿಂದ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ಬೆಂಗಳೂರಿನಲ್ಲಿ ನಡೆದಿದ್ದ ಕಂಬಳದಲ್ಲಿ ಸಹಿತ ಕಳೆದ ಸೀಸನ್‌ನಲ್ಲಿ 5 ಪದಕ ಗೆದ್ದಿತ್ತು. ಬೆಂಗಳೂರಿನಲ್ಲಿ ಮೊದಲ ಬಾರಿ ನಡೆದಿದ್ದ ಕಂಬಳದಲ್ಲಿ ನೇಗಿಲು ಹಿರಿಯ ವಿಭಾಗದಲ್ಲಿ ಎರಡನೇ ಬಹುಮಾನ ಲಕ್ಕಿ ಪಡೆದಿತ್ತು. ಕಕ್ಯಪದವು, ನರಿಂಗಾನ, ಐಕಳ ಮತ್ತು ಜಪ್ಪು ಕಂಬಳಗಳಲ್ಲೂ ಲಕ್ಕಿ ಬಹುಮಾನ ಗೆದ್ದಿತ್ತು. ಬುಧವಾರ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಅಂತ್ಯ ಸಂಸ್ಕಾರದಲ್ಲಿ ಭಾಗಿಯಾದರು.


ಕಳೆದ ಏಳೆಂಟು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಲಕ್ಕಿಗೆ ಜು.16ರಂದು ಕಾರ್ಕಳದಲ್ಲಿ ಖ್ಯಾತ ವೈದ್ಯ ವಾಸುದೇವ ಪೈ ಅಪರೇಷನ್‌ ನಡೆಸಿದ್ದರು. ಬುಧವಾರ ಮತ್ತೆ ಚಿಕಿತ್ಸೆಗೆಂದು ಕಾರ್ಕಳಕ್ಕೆ ಕರೆತರಲಾಗಿದ್ದು, ಅಲ್ಲಿ ಕೊನೆಯುಸಿರೆಳೆದಿದೆ.

Advertisement

ಐಕಳ ಪಂಚಾಯತ್‌ ಅಧ್ಯಕ್ಷ ದಿವಾಕರ ಚೌಟ ಅವರು ಎರಡು ವರ್ಷಗಳ ಹಿಂದೆ ಲಕ್ಕಿಯನ್ನು ಭಟ್ಕಳದ ಎಚ್‌. ಎನ್‌. ನಿವಾಸದಿಂದ ತಂದಿದ್ದರು. ಕೊಂಡೊಟ್ಟು ಬೊಲ್ಲ, ತೆಗ್ಗರ್ಸೆ ಪಾಂಡು, ನಾವುಂದ ಪುಟ್ಟ, ಮಳವೂರು ರಾಜೆ ಲಕ್ಕಿಯ ಅತ್ಯಂತ ಯಶಸ್ವೀ ಜೋಡಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next