Advertisement

ಕಂಬಳ: ಈ ಋತುವಿನ ಸಂಭಾವ್ಯ ಪಟ್ಟಿ ಸಿದ್ಧ

02:17 AM Oct 20, 2021 | Team Udayavani |

ಮಂಗಳೂರು: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿಯು ಈ ಋತುವಿನ ಕಂಬಳಗಳ ಸಂಭಾವ್ಯ ಪಟ್ಟಿಯನ್ನು ಸಿದ್ಧಪಡಿಸಿದೆ. ಮುಂದಿನ ಮಹಾಸಭೆಯಲ್ಲಿ ಅಂತಿಮಗೊಳಿಸಿ ಅಂತಿಮಪಟ್ಟಿಯನ್ನು ಬಿಡುಗಡೆಗೊಳಿಸಲಿದೆ.

Advertisement

ಸಂಭಾವ್ಯ ಪಟ್ಟಿ ಪ್ರಕಾರ ಈ ಋತುವಿನ ಮೊದಲ ಕಂಬಳ ನ. 27ರಂದು ಮೂಡುಬಿದಿರೆಯಲ್ಲಿ ನಡೆಯಲಿದೆ. ಡಿ. 11ರಂದು ಹೊಕ್ಕಾಡಿ, ಡಿ. 18 ಮಂಗಳೂರು, ಡಿ. 26ರಂದು ಮುಲ್ಕಿ, 2022ರ ಜ. 1ರಂದು ಕಕ್ಕೆಪದವು, ಜ. 8ರಂದು ಅಡ್ವೆ ನಂದಿಕೂರು, ಜ. 16ರಂದು ಮಿಯಾರು, ಜ.22ರಂದು ಪುತ್ತೂರು, ಜ. 29ರಂದು ಐಕಳ, ಫೆ. 5ರಂದು ಬಾರಾಡಿ, ಫೆ. 12ರಂದು ಜಪ್ಪು, ಫೆ. 19ರಂದು ವಾಮಂಜೂರು, ಫೆ. 26ರಂದು ಪೈವಳಿಕೆ, ಮಾ. 5ರಂದು ಕಟಪಾಡಿ, ಮಾ. 12ರಂದು ಉಪ್ಪಿನಂಗಡಿ, ಮಾ. 19ರಂದು ಬಂಗಾಡಿ, ಮಾ. 26ರಂದು ವೇಣೂರು ಕಂಬಳ ನಡೆಸುವ ಸಂಭಾವ್ಯ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ:ಪಿಎನ್‌ಬಿ ಹಗರಣದ ಪ್ರಮುಖ ಆರೋಪಿ ದೇಶಭ್ರಷ್ಟ ನೀರವ್‌ ಮೋದಿಗೆ ಮತ್ತೆ ನಿರಾಶೆ

ಅಕ್ಟೋಬರ್‌ 30ರಂದು ಮೂಡುಬಿದಿರೆಯಲ್ಲಿ ನಡೆಯುವ ಕಂಬಳ ಸಮಿತಿಯ ಮಹಾಸಭೆಯಲ್ಲಿ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ ಎಂದು ಜಿಲ್ಲಾ ಕಂಬಳ ಸಮಿತಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next