Advertisement

ಕಂಬಳ ಪರ ಇಂದು ತಿದ್ದುಪಡಿ ಮಸೂದೆ: ಟಿ.ಬಿ. ಜಯಚಂದ್ರ

03:45 AM Feb 09, 2017 | Team Udayavani |

ಬೆಂಗಳೂರು: ಕಂಬಳ ಮತ್ತು ಎತ್ತಿನ ಬಂಡಿ ಓಟಕ್ಕೆ ಕಾನೂನು ಮಾನ್ಯತೆ ದೊರಕಿಸಿ ಕೊಡಲು ಅನುವಾಗುವಂತೆ ತಿದ್ದುಪಡಿ ಮಸೂದೆಯನ್ನು ಗುರುವಾರ ವಿಧಾನಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ.

Advertisement

ಕಾಂಗ್ರೆಸ್‌ನ ಅಭಯಚಂದ್ರ ಜೈನ್‌ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಕಂಬಳ ಮತ್ತು ಎತ್ತಿನ ಬಂಡಿ ಓಟ ನಡೆಸಲು ಅನುವಾಗುವಂತೆ ಕೇಂದ್ರ ಅಧಿನಿಯಮ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವ ಕಾಯ್ದೆ-1960ಕ್ಕೆ ತಿದ್ದುಪಡಿ ತರಬೇಕಿದ್ದು, ಅದ ಕ್ಕಾಗಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವ (ಕರ್ನಾಟಕ ತಿದ್ದುಪಡಿ) ಮಸೂದೆ-2017ಕ್ಕೆ ಸಚಿವ ಸಂಪುಟ ಸಭೆ ಈಗಾಗಲೇ ಅನುಮೋದನೆ ನೀಡಿದೆ. ಈ ತಿದ್ದುಪಡಿ ಮಸೂದೆ ಯನ್ನು ಗುರುವಾರವೇ ಸದನದಲ್ಲಿ ಮಂಡಿಸಿ ಸಂಜೆಯೊಳಗೆ ಅನು ಮೋದನೆ ಪಡೆಯಲಾಗುವುದು. ಈ ಹಂತದಲ್ಲಿ ಅಧ್ಯಾದೇಶ ಹೊರಡಿಸಲು ಸಾಧ್ಯವಿಲ್ಲ ಎಂದರು.

ಇದಕ್ಕೂ ಮುನ್ನ ಸರಕಾರದ ಗಮನಸೆಳೆದ ಅಭಯಚಂದ್ರ ಜೈನ್‌, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಂಬಳ ಪ್ರತಿ ವರ್ಷ ನಡೆ ಯುವಂತಾಗಲು ತಮಿಳುನಾಡು ಸರಕಾರ ಜಲ್ಲಿ ಕಟ್ಟು ನಡೆಸಲು ಹೊರಡಿಸಿರುವ ಅಧ್ಯಾದೇಶ ಮಾದರಿಯಲ್ಲಿ ರಾಜ್ಯದಲ್ಲಿ ಕಂಬಳ ನಡೆಸಲು ಅಧ್ಯಾ ದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ದನಿಗೂಡಿಸಿದ ಬಿಜೆಪಿಯ ಸುನೀಲ್‌ ಕುಮಾರ್‌, ವರ್ಷದ 3 ತಿಂಗಳು ಮಾತ್ರ ಕಂಬಳ ನಡೆಯುತ್ತದೆ. ಪ್ರಸ್ತುತ ಕೋರ್ಟ್‌ ತಡೆಯಾಜ್ಞೆ ನೀಡಿರುವುದರಿಂದ 10 ಕಂಬಳ ನಡೆಸಲು ಸಾಧ್ಯ ವಾಗಿಲ್ಲ. ಕಂಬಳಕ್ಕೆ ಪ್ರಸಕ್ತ ಸಾಲಿನಲ್ಲಿ ಇನ್ನು ಎರಡು ತಿಂಗಳು ಮಾತ್ರ ಅವಕಾಶವಿರುವುದರಿಂದ ತತ್‌ಕ್ಷಣವೇ ಅಧ್ಯಾದೇಶ ಅಥವಾ ಕಾಯ್ದೆಗೆ ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next