Advertisement
“ದೂಜೆ’ ಮತ್ತು “ಎರ್ಮುಡೆ’ ಜೋಡಿ ಈ ಬಾರಿಯ ಕೂಟದಲ್ಲಿ ಕಕ್ಯೆಪದವಿನಲ್ಲಿ ಸೆಮಿಫೈನಲ್‌ವರೆಗೆ ಹೋಗಿದ್ದವು. ವೇಣೂರು, ಹೊಕ್ಕಾಡಿಗೋಳಿಯಲ್ಲಿ ದ್ವಿತೀಯ, ಅಡ್ವೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದವು. ಐಕಳ ಕಂಬಳದ ಸಂದರ್ಭ ಎರಡು ಕೂಡ ಅಸ್ವಸ್ಥಗೊಂಡವು. ಅದರಲ್ಲಿ “ಎರ್ಮುಡೆ’ ಬೇಗ ಚೇತರಿಸಿಕೊಂಡಿತ್ತು. ಆದರೆ “ದೂಜೆ’ಯ ಆರೋಗ್ಯ ಹದಗೆಡುತ್ತ ಬಂದಿತ್ತು. ಸದ್ಯ ಸ್ವಲ್ಪ ಚೇತರಿಸಿಕೊಳ್ಳುತ್ತಿದೆ. ದೂಜೆ 10 ವರ್ಷಗಳಲ್ಲಿ 68 ಪದಕಗಳನ್ನು ಗಳಿಸಿದೆ ಎಂದು ಡೋಲ್ಫಿ ತಿಳಿಸಿದ್ದಾರೆ.
“ದೂಜೆ’ಯನ್ನು ನೋಡಲು ನಿತ್ಯ ನೂರಾರು ಮಂದಿ ಬರುತ್ತಿದ್ದರು. ಕೆಲವರು ಹಣ್ಣು ಹಂಪಲು ಇತ್ಯಾದಿ ನೀಡುತ್ತಿದ್ದರು. ನಾವು ತಡೆಯುತ್ತಿರಲಿಲ್ಲ. ಆದರೆ ದೂಜೆಗೆ ಅದೇನಾಯಿತು ಎಂದು ಗೊತ್ತಿಲ್ಲ. ಇತ್ತೀಚೆಗೆ ಕೊಟ್ಟಿಗೆ ಸ್ವತ್ಛಗೊಳಿಸುವಾಗ ನೂಲು, ಭಸ್ಮ, ತಗಡು ಕೂಡ ಸಿಕ್ಕಿತ್ತು. ಅದರ ಜತೆ ಚೆನ್ನೈ-ಮಂಗಳೂರು ರೈಲಿನ ಟಿಕೆಟ್ ಕೂಡ ಇತ್ತು. ಯಾರು ಏನು ಮಾಡಿದ್ದಾರೋ ಗೊತ್ತಾಗುತ್ತಿಲ್ಲ. ತಪ್ಪು ಮಾಡಿದವರಿಗೆ ದೇವರೇ ಶಿಕ್ಷೆ ನೀಡುತ್ತಾರೆ ಎಂದು ಡೋಲ್ಫಿ ಹೇಳಿದ್ದಾರೆ. “ದೂಜೆ’ ದರ್ಶನಕ್ಕಿಲ್ಲ ಅವಕಾಶ
ವಾಮಾಚಾರ ಸಾಧ್ಯತೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಚರ್ಚೆಯಾಗುತ್ತಿದೆ. ದೂಜೆಯನ್ನು ನೋಡಲು ಸದ್ಯ ಮಾಲಕರು ಹೊರಗಿನ ಯಾರಿಗೂ ಅವಕಾಶ ನೀಡುತ್ತಿಲ್ಲ. ಗೇಟಿಗೆ ಸಿಸಿ ಕೆಮರಾ ಕೂಡ ಅಳವಡಿಸಲು ನಿರ್ಧರಿಸಿದ್ದಾರೆ.