Advertisement

ಕಂಬಳ ಮಸೂದೆ ಶೀಘ್ರ ರಾಷ್ಟ್ರಪತಿ ಅಂಕಿತಕ್ಕೆ: ಡಿ.ವಿ.

03:19 PM Apr 10, 2017 | Harsha Rao |

ಮಂಗಳೂರು: ಕಂಬಳ ಮಸೂದೆಗೆ ರಾಷ್ಟ್ರಪತಿಯವರ ಅಂಕಿತ ಪಡೆಯುವ ನಿಟ್ಟಿನಲ್ಲಿ ಎಲ್ಲ ಪ್ರಕ್ರಿಯೆಗಳು ನಡೆಯುತ್ತಿದ್ದು ಗೃಹ ಸಚಿವಾಲಯದಿಂದ 10 ದಿನಗಳೊಳಗೆ ರಾಷ್ಟ್ರಪತಿ ಭವನಕ್ಕೆ ಹೋಗಲಿದೆ ಎಂದು ಕೇಂದ್ರ ಅಂಕಿ-ಅಂಶ  ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂಬಳ ಮಸೂದೆಯನ್ನು ಅತೀ ಶೀಘ್ರ ರೂಪಿಸಿರುವ ಬಗ್ಗೆ ನಾನು ಕರ್ನಾಟಕ ಸರಕಾರವನ್ನು ಅಭಿನಂದಿಸುತ್ತಿದ್ದೇನೆ. ಅಷ್ಟೇ ಶೀಘ್ರವಾಗಿ ನಾನು ಹಾಗೂ ಸಂಸದ ನಳಿನ್‌ ಕುಮಾರ್‌ ಕಟೀಲು ಇದು ರಾಷ್ಟ್ರಪತಿಯವರ ಅಂಕಿತ ಪಡೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ ಎಂದರು.

Advertisement

ಮಸೂದೆಯು ಕಾನೂನು, ಸಂಸ್ಕೃತಿ, ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಒಪ್ಪಿಗೆ ಪಡೆದು ಬಳಿಕ ಗೃಹಸಚಿವಾಲಯಕ್ಕೆ ಬಂದಿದೆ. ರೂಪಿಸಿರುವ ಮಸೂದೆಯಲ್ಲಿ ಕಂಬಳದಲ್ಲಿ ಪ್ರಾಣಿಹಿಂಸೆ ಇಲ್ಲ ಎಂಬ ಸ್ಪಷ್ಟತೆಯ ನ್ಯೂನತೆ ಇದೆ. ಅದನ್ನು ಸರಿಪಡಿಸಲು ಮರಳಿ ರಾಜ್ಯಕ್ಕೆ ಕಳುಹಿಸಿದರೆ ಮತ್ತೆ 1 ತಿಂಗಳು ವಿಳಂಬವಾಗಲಿದೆ. ಈ ಹಿನ್ನೆಲೆಯಲ್ಲಿ ನಾಳೆ ಹೊಸದಿಲ್ಲಿಯಲ್ಲೇ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ, ರಾಜ್ಯ ಹಾಗೂ ಕೇಂದ್ರ ಸರಕಾರದ ಕಾನೂನು ಕಾರ್ಯದರ್ಶಿಗಳ ಸಭೆ ನಡೆಯಲಿದೆ. ಅಲ್ಲೇ ನ್ಯೂನತೆಯನ್ನು ಸರಿಪಡಿಸಲಾಗುವುದು. ಬಳಿಕ ಗೃಹ ಸಚಿವಾಲಯದಿಂದ ರಾಷ್ಟ್ರಪತಿ ಭವನಕ್ಕೆ ರವಾನೆಯಾಗಲಿದೆ ಎಂದರು.

ನಾನು ಮುಖ್ಯಮಂತ್ರಿಯಾಗಿದ್ದ ವೇಳೆ 20 ಕಂಬಳಗಳಿಗೆ ತಲಾ 1 ಕೋ.ರೂ. ಅನುದಾನ ನೀಡಿದ್ದೆ. ಕಂಬಳ ಕ್ರೀಡಾಂಗಣ ನಿರ್ಮಣಕ್ಕೂ ಅನುದಾನ ಮಂಜೂರು ಮಾಡಿದ್ದೆ. ಕಂಬಳ ಮಸೂದೆ ಅಂಗೀಕಾರಗೊಳ್ಳುವಲ್ಲಿ ನಾನು ಹಾಗೂ ಸಂಸದ ನಳಿನ್‌ ಕುಮಾರ್‌ ಅವರ ಪ್ರಯತ್ನಗಳು ಸಾಗಿವೆ ಎಂದವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next