Advertisement

6ನೇ  ಸ್ಥಾನಕ್ಕೆ ತೃಪ್ತಿಪಟ್ಟ ಕಮಲ್‌ಪ್ರೀತ್‌

05:09 PM Aug 03, 2021 | Team Udayavani |

ಟೋಕಿಯೊ: ಮಹಿಳೆಯರ ಡಿಸ್ಕಸ್‌ ತ್ರೋನಲ್ಲಿ ಪದಕದ ಭರವಸೆ ಮೂಡಿಸಿದ್ದ ಕಮಲ್‌ಪ್ರೀತ್‌ ಕೌರ್‌, ತಮ್ಮ ಮೊದಲ ಒಲಿಂಪಿಕ್ಸ್‌ನಲ್ಲಿ 6ನೇ ಸ್ಥಾನಕ್ಕೆ ತೃಪ್ತಿಪಟ್ಟರು.

Advertisement

ಸೋಮವಾರ ನಡೆದ ಡಿಸ್ಕಸ್‌ ತ್ರೋ ಫೈನಲ್ಸ್‌ನಲ್ಲಿ ತಮಗೆ ಸಿಕ್ಕಿದ ಮೂರು ಅವಕಾಶಗಳಲ್ಲಿ ಗರಿಷ್ಠ 63.70 ಮೀಟರ್‌ ವರೆಗೆ ಡಿಸ್ಕ್ ಎಸೆಯುವಲ್ಲಿ ಅವರು ಸಫ‌ಲರಾದರು. ಈ ಮೂಲಕ 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕೃಷ್ಣಾ ಪುನಿಯ ಅವರ  ಭಾರತದ ಸಾಧನೆಯನ್ನು (63.70 ಮೀ.) ಸರಿಗಟ್ಟಿದರು. ಶನಿವಾರ ನಡೆದಿದ್ದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ 2ನೇ ಶ್ರೇಷ್ಠ ಪ್ರದರ್ಶನ ನೀಡುವ ಮೂಲಕ ಕೌರ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದರು.

ಫೈನಲ್‌ನಲ್ಲಿ 68.98 ಮೀಟರ್‌ ವರೆಗೆ ಡಿಸ್ಕ್ ಎಸೆದ ಅಮೆರಿಕದ ವಲ್ಲಾರಿ ಅಲ್ಮನ್‌ ಚಿನ್ನದ ಗೌರವಕ್ಕೆ ಭಾಜನರಾದರು. ಜರ್ಮನಿಯ ಕ್ರಿಸ್ಟಿನ್‌ ಪುಜೆನ್ಜ್ (66.86 ಮೀ.) ಹಾಗೂ ಹಾಲಿ ವಿಶ್ವ ಚಾಂಪಿಯನ್‌ ಕ್ಯೂಬಾದ ಯೈಮೆ ಪೆರೆಜ್‌ (65.72 ಮೀ.) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು.

Advertisement

Udayavani is now on Telegram. Click here to join our channel and stay updated with the latest news.

Next