Advertisement

ಕಮಲಶಿಲೆ ಶ್ರೀಬ್ರಾಹ್ಮೀದುರ್ಗಾಪರಮೇಶ್ವರೀ ದೇಗುಲದಲ್ಲಿ ಶರನ್ನವರಾತ್ರಿ ಮಹೋತ್ಸವ

09:16 PM Sep 28, 2019 | Sriram |

ಸಿದ್ದಾಪುರ : ಶ್ರೀ ದೇವಿಯ ಉದ್ಭವ ಲಿಂಗವು ಕಮಲವನ್ನು ಹೋಲುವ, ಅಷ್ಟೇ ನುಣುಪಾದ ಶಿಲೆಯಾದ್ದರಿಂದ ಕಮಲಶಿಲೆ ಎಂಬ ನಾಮ ಖ್ಯಾತಿಗೊಂಡಿತು. ಹೆಸರೇ ಸೂಚಿಸುವಂತೆ ಕಮಲವು ಮೃದುತ್ವವನ್ನು, ಶಿಲೆಯು ಕಠಿಣತ್ವವನ್ನು ಅರ್ಥೈಸಿದರೂ ಇಲ್ಲಿ ಎರಡೂ ಒಂದಾಗಿ ಏಕತೆ ಮತ್ತು ಸಮಾನತೆಯನ್ನು ಸೂಚಿಸುತ್ತದೆ. ಕಮಲಳಾಗಿ ಶಿಷ್ಟಪಾಲನೆ, ಶಿಲೆಯಾಗಿ ದುಷ್ಟರ ನಿಗ್ರಹ ಕಾರ್ಯ ನಡೆಯುತ್ತಿರುತ್ತದೆ.

Advertisement

ಪ್ರಾಕೃತಿಕವಾಗಿ ವಿಶಿಷ್ಟ ಸ್ಥಾನವನ್ನು ಪಡೆದು ಶ್ರೀಬ್ರಾಹ್ಮೀದುರ್ಗಾಂಬೆಯು ಪ್ರಕೃತಿ ಪ್ರೀಯಳಾಗಿ ಇಲ್ಲಿ ನೆಲೆ ನಿಂತಿದ್ದಾಳೆ. ಸೂತ್ತಲೂ ಅರಣ್ಯ ಪ್ರದೇಶದ ಮಧ್ಯದಲ್ಲಿ ಕುಬಾjನದಿ ಮತ್ತು ನಾಗತೀರ್ಥಗಳ ಸಂಗಮದಲ್ಲಿ ಪಾತಾಳದಲ್ಲಿ ಲಿಂಗರೂಪಿಣೆಯಾಗಿ ಹುಟ್ಟಿ ಬಂದಿದ್ದಾಳೆ. ಹುಟ್ಟಿದ್ದು ನೀರಿನಲ್ಲಿ, ರೂಪ ಕಲ್ಲು, ಆಭರಣ ಮಣ್ಣು (ಮತ್ತಿಕೆ)ಅದ್ಭುತ ಶಕ್ತಿವಂತ ವಿಧಿತವಾಗುತ್ತದೆ.

ಶರನ್ನವರಾತ್ರಿ ಪ್ರಯುಕ್ತ ಸೆ.29ರಿಂದ ಅ.08 ರವರೆಗೆ ಪ್ರತಿದಿನ ತ್ರಿಕಾಲ ಪೂಜೆ, ನವರಾತ್ರಿ ವಿಶೇಷ ಪೂಜೆ, ಮಹಾಪೂಜೆ, ಸುತ್ತುಬಲಿ ಹಾಗೂ ನವಮಿಯಂದು ಮಧ್ಯಾಹ್ನ ಚಂಡಿಕಾ ಹವನ, ರಾತ್ರಿ ರಜತ ರಥೋತ್ಸವ, ಲಾಲ್ಕಿ ಉತ್ಸವ(ರಥಬೀದಿ ಮತ್ತು ರಾಜಬೀದಿ) ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next