Advertisement

ಖಾಲಿ ಇರುವ ವೈದ್ಯರ ಹುದ್ದೆ ಭರ್ತಿಗೆ ಆಗ್ರಹ

02:58 PM May 16, 2019 | Team Udayavani |

ಕಮಲನಗರ: ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೂರು ದಶಕಗಳಿಂದ ಖಾಲಿ ಇರುವ ವೈದ್ಯರು ಸೇರಿದಂತೆ ವಿವಿಧ ಸಿಬ್ಬಂದಿಗಳ ಹುದ್ದೆ ನೇಮಕ ಮಾಡಬೇಕು ಎಂದು ಆಗ್ರಹಿಸಿ ಸಮಾಜ ಸೇವಕ ವೈಜಿನಾಥ ವಡ್ಡೆ ಜಿಲ್ಲಾ ಆರೋಗ್ಯ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

Advertisement

ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಮೂಲಕ ಮನವಿ ಸಲ್ಲಿಸಿರುವ ಅವರು, ತಾಲೂಕು ಕೇಂದ್ರದಲ್ಲಿರುವ ಬೀದರ-ನಾಂದೇಡ ರಸ್ತೆಗೆ ಹೊಂದಿಕೊಂಡಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಟ್ಟು 30 ಹಾಸಿಗೆಯುಳ್ಳ ವ್ಯವಸ್ಥೆ ಇದೆ. ಅದಕ್ಕೆ ತಕ್ಕಂತೆ ವೈದ್ಯರು, ಸಿಬ್ಬಂದಿ ಕೊರತೆಯಿಂದಾಗಿ ನಿತ್ಯ ಆಸ್ಪತ್ರೆಗೆ ಬರುವ ಹೊರ ರೋಗಿಗಳಿಗೆ ಚಿಕಿತ್ಸೆ ದೊರೆಕದೇ ಪರದಾಡುವಂತಾಗಿದೆ. ಸರಿಯಾದ ಸಮಯಕ್ಕೆ ವೈದ್ಯರು ಬಾರದಕ್ಕೆ ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ಮೊರೆ ಹೋಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇದ್ದ ವ್ಯವಸ್ಥೆ ಚುರುಕುಗೊಳಿಸಲು ಜನರ ಪರವಾಗಿ ಮೇಲಧಿಕಾರಿ ಗಮನ ಸೆಳೆದರೂ ಯಾವುದೇ ತರಹದ ಬದಲಾವಣೆಯಾಗಿಲ್ಲ. ಆದರೆ ದಿನೇ-ದಿನೇ ವ್ಯವಸ್ಥೆ ಹದಗೆಡುತ್ತಿದೆ ಎಂದು ರೈತ ಮುಖಂಡ ಉತ್ತಮರಾವ ಮಾನೆ ವ್ಯವಸ್ಥೆಗೆ ಹಿಡಿಶಾಪ ಹಾಕಿದ್ದಾರೆ.

ಬೇಡಿಕೆಗಳು:ಆಡಳಿತ ವೈದ್ಯಾಧಿಕಾರಿ ಕೇಂದ್ರ ಸ್ಥಾನದಲ್ಲಿ ವಸತಿ ಮಾಡಬೇಕು. ಕೆಲಸದ ವೇಳೆಯಲ್ಲಿ ಹಾಜರಿದ್ದ ವೈದ್ಯರು ಸಮರ್ಪಕವಾಗಿ ಸೇವೆ ಸಲ್ಲಿಸಬೇಕು. ಖಾಲಿ ಇರುವ ವೈದ್ಯರ ಹುದ್ದೆ ತುಂಬಲು ಜಿಲ್ಲಾಡಳಿತ ಬದಲಿ ವ್ಯವಸ್ಥೆ ಮಾಡಿದೆ. ವೈದ್ಯರು ಆದೇಶ ಪಾಲಿಸದಿದ್ದಾಗ ಅವರ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಯಲ್ಲಿರುವ ಲಭ್ಯ ಔಷಧಿಗಳ ಪಟ್ಟಿಯನ್ನು ಗೋಡೆಗೆ ತೂಗಿ ಹಾಕಿಡಬೇಕು. ಅಲ್ಲದೇ ಫಲಕದಲ್ಲಿ ದಿನನಿತ್ಯ ಯಾವ ವೈದ್ಯರ ಸೇವೆ ಯಾವಾಗ ಎಂಬ ಮಾಹಿತಿ ಮತ್ತು ವೈದ್ಯರ ಹೆಸರು ಹಾಗೂ ದೂರವಾಣಿ ಸಂಖ್ಯೆ, ಆಸ್ಪತ್ರೆ ಕೆಲಸದ ಸಮಯ ನಮೂದಿಸಬೇಕು. ಆಸ್ಪತ್ರೆ ಹಿತರಕ್ಷಣೆ ಸಮಿತಿ ಸದಸ್ಯರ ಪಟ್ಟಿ

ಲಗತ್ತಿಸಬೇಕು. ಆಸ್ಪತ್ರೆ ಆಸ್ತಿಯಾದ ಸರ್ವೆ.ನಂ. 299ರಲ್ಲಿ 20 ಗುಂಟೆ ಜಮೀನು ರಕ್ಷಿಸಬೇಕಾದವರೆ ಕಬಳಿಕೆ ಮಾಡಲು ಅವಕಾಶ ಕೊಡುತ್ತಿರುವುದು ತಡೆಗಟ್ಟಬೇಕು. ಆಂಬ್ಯುಲೆನ್ಸ್‌ ವ್ಯವಸ್ಥೆ ಸುಸಜ್ಜಿತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

Advertisement

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸುಮಾರು ವರ್ಷಗಳಿಂದ ವೈದ್ಯರು ಮತ್ತು ಸಿಬ್ಬಂದಿ ಕೊರತೆ ನೀಗಿಸುವಲ್ಲಿ ಶಾಸಕರಾಗಲಿ, ಸಚಿವರಾಗಲಿ, ಜಿಪಂ ಸದಸ್ಯರಾಗಲಿ ವಿಫಲರಾಗಿದ್ದಾರೆ ಎಂದು ರೈತ ಸಂಘದ ಅಧ್ಯಕ್ಷ ಪ್ರವೀಣ ಕುಲಕರ್ಣಿ ಆರೋಪಿಸಿದ್ದಾರೆ.

ಡಾ| ಚಂದ್ರಶೇಖರ ಸಂತಪುಡಾ. ಸುಧೀರಕುಮಾರ, ಡಾ| ಅಪರ್ಣಾ, ಡಾ| ರಮೇಶ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next