ಕಮಲನಗರ: ಮಹಾಳಪ್ಪಯ್ಯ ಅಪ್ಪನವರು ಪವಾಡ ಪುರುಷರಾಗಿದ್ದರು. ಭವರೋಗ ತಜ್ಞರಾಗಿದ್ದರು. ಅವರ ದರ್ಶನ ಪಡೆದು ಭಕ್ತರು ತಮ್ಮ ಜೀವನದಲ್ಲಿ ಸುಖ, ಶಾಂತಿ ನೆಮ್ಮದಿ ಜೀವನ ಸಾಗಿಸಬೇಕು ಎಂದು ಮಠದ ಪೀಠಾಧಿಪತಿ ಶಂಭುಲಿಂಗ ಶಿವಾಚಾರ್ಯರು ಕರೆ ನೀಡಿದರು.
ತಾಲೂಕಿನ ಡೋಣಗಾಂವ(ಎಂ) ಗ್ರಾಮದ ಹತ್ತಿರವಿರುವ ಮಹಾಳಪ್ಪಯ್ಯ ದೇವಸ್ಥಾನದಲ್ಲಿ ಅಮಾವಾಸ್ಯೆ ನಿಮಿತ್ತ ದೇವಸ್ಥಾನದಲ್ಲಿ ಅವರು ವಿಶೇಷ ಪೂಜೆ ಸಲ್ಲಿಸಿ ಸ್ವಾಮೀಜಿ ಮಾತನಾಡಿದರು.
ನಮ್ಮ ದೇಶ ಭಕ್ತಿ ಪ್ರಧಾನವಾದದ್ದು. ಭಕ್ತಿಯಿಂದಲೇ ಮುಕ್ತಿ ಪಡೆಯುವ ಸಾಧಕರು ಸಾಧನೆ ಮಾಡಿ ದೇವ ಮಾನವರಾದವರು. ಪ್ರತಿಯೊಬ್ಬರು ತನ್ನ ಬದುಕಿನಲ್ಲಿ ದೇವರ ಮೇಲೆ ಶ್ರದ್ಧೆ, ಭಕ್ತಿಯಿಂದ ನಡೆದರೆ ಮನಸ್ಸಿನ ಇಷ್ಟಾರ್ಥಗಳು ಪೂರ್ಣವಾಗುತ್ತವೆ. ದೇವರು ನಾವು ಬೇಡಿದ್ದನ್ನು ಕೊಡುವಾತ. ನಾವು ಬೇಡಲು ನಿಸ್ವಾರ್ಥವಾಗಿ ಸೇವೆ ಮಾಡಿದರೆ ದೇವರು ಎಲ್ಲ ಇಷ್ಟಾರ್ಥ ಪೂರೈಸುತ್ತಾನೆ ಎಂದು ಹೇಳಿದರು.
ಪ್ರತಿ ತಿಂಗಳ ಅಮಾವಾಸ್ಯೆ ದಿನದಂದು ಮಠದಲ್ಲಿ ಭಕ್ತರು ಪವಾಡ ಪುರುಷ ಮಹಾಳಪ್ಪಯ್ಯನವರ ಹಾಗೂ ಮಠದ ಶಂಭುಲಿಂಗ ಶಿವಾಚಾರ್ಯ ಅವರ ದರ್ಶನ ಪಡೆದು ಆಶೀರ್ವಚನ ಆಲಿಸಿ ಮನಸ್ಸು ಹಸುನಾಗಿಸಿಕೊಳ್ಳುವರು ಎಂದು ಮಠದ ಪೂಜಾರಿ ಜಗದೇವಿ ಮಹಾಳಪ್ಪ ಹೇಳಿದರು.
ಖತಗಾಂವ, ರಂಡ್ಯಾಳ, ಮದನೂರ, ಹಕ್ಯಾಳ, ಬೇಳಕೋಣಿ, ಕಮಲನಗರ, ಮುರ್ಕಿ, ಮಹಾರಾಷ್ಟ್ರದ ಉದಗೀರ, ತೋಗರಿ, ದೇವಣಿ, ರಾವಣಗಾಂವ ಗ್ರಾಮದ ಭಕ್ತರು ದರ್ಶನ ಪಡೆದು ಪುನೀತರಾದರು.
ಶಿವಾನಂದ ಸ್ವಾಮಿ ಪೂಜಾರಿ, ಸೋಮು, ವಿಜಯಕುಮಾರ ಪಾಟೀಲ, ಸಂಗಮೇಶ ಬಿರಾದಾರ, ಗಣೇಶ ಕಾರೇಗಾವೆ, ಮನು ಸ್ವಾಮಿ, ಸಂಜುಕುಮಾರ ಪಾಟೀಲ, ರವಿಕಾಂತ ಗಂದಗೆ, ರಾಜಕುಮಾರ ಮಗದುಮೆ, ಸತೀಶ ನಳಗೀರೆ, ಮಹಾಂತೇಶ ದೇವರ್ಸೆ, ಸಂಗಮೇಶ ವಲ್ಲೂರೆ, ಜೀತೇಂದ್ರ ಸ್ವಾಮಿ, ಶೈಲೇಶ ಪೇನೆ, ಮೋಹನ ಪಾಂಚಾಳ, ಜ್ಯೋತಿ ಬಿರಾದಾರ, ಸದಾನಂದ ಸ್ವಾಮಿ, ರಾಜಶೇಖರ ಪಾಟೀಲ, ಸಿದ್ರಾಮ ಸ್ವಾಮಿ, ಮಹೇಶ ಪಾಟೀಲ, ಮಹಾದೇವ ಮಂಠೊಳೆ ಪಾಲ್ಗೊಂಡಿದ್ದರು.