Advertisement
ನಿರುದ್ಯೋಗ, ಕೊರೊನಾ ಸೋಂಕು, ಲಾಕ್‌ಡೌನ್, ಜನಾಂಗೀಯ ತಾರತಮ್ಯ, ಜಾರ್ಜ್ ಫ್ಲಾಯ್ಡ ಹತ್ಯೆ ಬಳಿಕ ಉಂಟಾದ ಗಲಾಟೆ ಹಾಗೂ ಆ ಮೊದಲು ಅಧ್ಯಕ್ಷರಾಗಿದ್ದ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ರ ಬಾಯಿಬಡುಕ ಸ್ವಭಾವದಿಂದ ಬೇಸತ್ತಿದ್ದ ಅಮೆರಿಕ ಪ್ರಜೆಗಳಿಗೆ ಬೈಡೆನ್ -ಕಮಲಾ ಜೋಡಿಯ ಈ ಸಂಭ್ರಮದ ಮಾತುಕತೆ ಹೊಸ ಭರವಸೆ ಹುಟ್ಟುಹಾಕಿತ್ತು. ಇತರ ದೇಶಗಳ ಜನರೂ ವೀಡಿಯೋ ನೋಡಿ ಬೆರಗಾ ಗಿದ್ದರು. ಭಾರತೀಯರಂತೂ, “ರಾಜಕಾರಣಿಗಳು ಇಷ್ಟು ಆತ್ಮೀಯವಾಗಿರುತ್ತಾರಾ? ನಮ್ಮಲ್ಲಿ ಕಾಲೆಳೆಯುವ ಪ್ರಸಂಗಗಳೇ ಜಾಸ್ತಿ’ ಎಂದು ಮಾತಾಡಿಕೊಂಡಿದ್ದರು.
Related Articles
Advertisement
ಇದನ್ನೂ ಓದಿ:ಮಹಾ ಸರ್ಕಾರಕ್ಕೆ 2 ವರ್ಷ: ಖುಷಿ ಹಂಚಿಕೊಂಡ ಸಿಎಂ
ಇವರಿಬ್ಬರೂ ಅಧಿಕಾರ ವಹಿಸಿ ಇನ್ನೂ ಒಂದು ವರ್ಷ ಸಂದಿಲ್ಲ. ಅಷ್ಟರಲ್ಲೇ ಮನಸ್ತಾಪ ಎದ್ದು ಕಾಣಿಸತೊಡಗಿದೆ. ಇತ್ತೀಚೆಗೆ ಬಿಡುಗಡೆಯಾದ ಅಪೂ›ವಲ್ ರೇಟಿಂಗ್‌ನಲ್ಲಿ ಕಮಲಾ ಹ್ಯಾರಿಸ್ ಅವರ ಜನಪ್ರಿಯತೆ ಶೇ.28ಕ್ಕಿಳಿದಿದೆ. ಕಮಲಾರನ್ನು ಬೈಡೆನ್ ನಿರ್ಲ ಕ್ಷಿಸುತ್ತಿರುವುದೇ ಇದಕ್ಕೆ ಕಾರಣ ಎಂದೂ ಹೇಳಲಾಗಿದೆ. ಅಮೆರಿಕದಲ್ಲಿ ಕಪ್ಪುವರ್ಣೀಯ ಮಹಿಳಾ ನಾಯಕತ್ವಕ್ಕೆ ಇದ್ದ ಕೊರತೆಯನ್ನು ಕಮಲಾ ತುಂಬಿದ್ದಾರೆ. ಡೈನಾಮಿಕ್ ನಾಯಕಿಯೂ, ಉತ್ತಮ ವಾಗ್ಮಿಯೂ ಆಗಿರುವ ಅವರು ಮುಂದಿನ ಡೆಮಾಕ್ರಾಟ್ ಅಧ್ಯಕ್ಷರಾಗಲು ಅರ್ಹ ವ್ಯಕ್ತಿ. ಆದರೆ ಬೈಡೆನ್‌ಗೆ ಮಾತ್ರ ಇದು ಕಹಿ ಸತ್ಯ.
ಬೈಡೆನ್ ವಿರುದ್ಧ ಅಸಮಾಧಾನ?: ಅಧ್ಯಕ್ಷ ಸ್ಥಾನಕ್ಕೇರಿದ ಮೊದಲ 7 ತಿಂಗಳು ಎಲ್ಲವೂ ಸರಿಯಾಗಿತ್ತು. ಟ್ರಂಪ್ ಎಷ್ಟೇ ಬಾಯಿ ಬಡಿದು ಕೊಂಡರೂ ಬೈಡೆನ್ ಬಹಳ ಶಾಂತ ಮೂರ್ತಿಯಾಗಿದ್ದರು. ಕೊರೊನಾ ಲಸಿಕೆ ವಿತರಣೆಗೆ ವೇಗ ನೀಡುತ್ತಾ, ಪರಿಹಾರ ಪ್ಯಾಕೇಜ್‌ಗಳನ್ನು ಘೋಷಿಸುತ್ತಾ ಶೇ.50ಕ್ಕಿಂತಲೂ ಹೆಚ್ಚು ಅಮೆರಿಕನ್ನರಿಂದ ಶಹಬ್ಟಾಸ್‌ಗಿರಿ ಗಳಿಸಿದ್ದರು. ಬೈಡೆನ್ ಮತ್ತು ಕಮಲಾ ಬಹಳ ಉತ್ಸಾಹದಲ್ಲಿ ಎಲ್ಲ ಸಾರ್ವಜನಿಕ ಸಭೆಗಳಲ್ಲೂ ಪಾಲ್ಗೊಳ್ಳುತ್ತಿದ್ದರು. ಆದರೆ ಕೆಲವೇ ತಿಂಗಳಲ್ಲಿ ಈ ಸನ್ನಿವೇಶ ಸಂಪೂರ್ಣ ಬದಲಾಯಿತು. ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಅನಿರೀಕ್ಷಿತ ಏರಿಕೆ, ಗಣನೀಯ ಪ್ರಮಾಣದಲ್ಲಾದ ಸಾವು, ಆರ್ಥಿಕ ಬಿಕ್ಕಟ್ಟು, ಅಫ್ಘಾನಿಸ್ಥಾನದಿಂದ ಸೇನೆ ಹಿಂಪಡೆತದ ನಿರ್ಧಾರ, ಕಾಂಗ್ರೆಸ್‌ನೊಳಗಿನ ಒಳಜಗಳಗಳು ಏಕಾಏಕಿ ಬೈಡೆನ್ ಜನಪ್ರಿಯತೆಯನ್ನು ನೆಲಕಚ್ಚುವಂತೆ ಮಾಡಿತು. ಅಷ್ಟೇ ಅಲ್ಲ, ಏಷ್ಯಾದಲ್ಲಿ ಕಮ್ಯೂನಿಸ್ಟ್ ಆಡಳಿತದ ಚೀನವು ಜಗತ್ತನ್ನೇ ಆಕ್ರಮಿಸಿಕೊಳ್ಳಲು ಹವಣಿಸುತ್ತಿರುವಾಗ, ಆ ದೇಶವನ್ನು ಸಮರ್ಥವಾಗಿ ಎದುರಿಸುವಲ್ಲೂ ಅಮೆರಿಕ ವೈಫಲ್ಯ ಕಾಣುತ್ತಿದೆ. ಪಿಜ್ಜಾ, ಬರ್ಗರ್ ತಿನ್ನುತ್ತಾ ಹಾಯಾ ಗಿದ್ದ ಅಮೆರಿಕದ ನಾಗರಿಕರಿಗೂ ಈ ಎಲ್ಲ ಬೆಳವಣಿಗೆಗಳು ಕಳವಳ ಮೂಡಿಸಿದ್ದು, ದೊಡ್ಡಣ್ಣನ ಸ್ಥಾನ ಕಳೆದುಕೊಳ್ಳುತ್ತೇವೋ ಎಂಬ ಭೀತಿ ಮೂಡಿಸಿದೆ.
ಈ ಆತಂಕವನ್ನು ಹ್ಯಾರಿಸ್ ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ನಾಗರಿಕರು ಪಕ್ಷದ ಮೇಲಿನ ಭರವಸೆ ಕಳೆದುಕೊಂಡರೆ, ಟ್ರಂಪ್ ಆಡಳಿತಾವಧಿಯಲ್ಲಿ ವಿಭಜನೆಗೊಂಡಿ ರುವ ದೇಶವನ್ನು ಒಗ್ಗೂಡಿಸುವ ನಮ್ಮ ಕನಸು ನನಸಾಗದು ಎಂಬುದು ಅವರಿಗೆ ಅರ್ಥವಾಗತೊಡಗಿದೆ. ಅಂತಾರಾಷ್ಟ್ರೀಯವಾಗಿ ಅತ್ಯಂತ ಮಹತ್ವದ ನಿರ್ಧಾರವಾಗಿರುವ ಅಫ್ಘಾನಿಸ್ಥಾನದಿಂದ ಸೇನೆ ಹಿಂಪಡೆತಕ್ಕೆ ಸಂಬಂಧಿಸಿದ ಸಭೆಯ ವೇಳೆಯೂ ಬೈಡೆನ್ ಅವರು ಕಮಲಾರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ. ಹ್ಯಾರಿಸ್‌ಗೆ ಉತ್ತೇಜನ ನೀಡಬೇಕಾಗಿದ್ದ ಅಧ್ಯಕ್ಷರೇ ಈಗ ಅವರ ಜನಪ್ರಿಯತೆ ಕುಗ್ಗಿಸಲು ಪ್ರಯತ್ನಿಸುತ್ತಿರುವುದು, ಕಮಲಾರ ಬೆಂಬಲಿಗರನ್ನೂ ಆತಂಕಕ್ಕೀಡುಮಾಡಿದೆ. ಡೆಮಾಕ್ರಾಟ್‌ನ ತಳಮಟ್ಟದ ಮತದಾರರು ಎಲ್ಲಿ ಕೈತಪ್ಪಿ ಹೋಗುತ್ತಾರೋ ಎಂಬ ಭಯ ಆವರಿಸಿದೆ. ಇನ್ನು, ತಮ್ಮ ಐತಿಹಾಸಿಕ ಉಪಾಧ್ಯಕ್ಷೆಯು ಪ್ರತಿದಿನವೂ ಇತಿಹಾಸ ಸೃಷ್ಟಿಸಬೇಕೆಂದು ಜನ ಬಯಸುತ್ತಿರುವಾಗ, ತಮ್ಮ ಪಕ್ಷದೊಳಗೇ ತಮ್ಮನ್ನು ಎರಡನೇ ದರ್ಜೆಯ ನಾಗರಿಕಳನ್ನಾಗಿ ನೋಡುತ್ತಿರುವುದು ಕಮಲಾ ಅವರ ಪಿತ್ತ ನೆತ್ತಿಗೇರುವಂತೆ ಮಾಡಿದೆ.
ಕಮಲಾ ವಿರುದ್ಧ ಬೈಡೆನ್ ತಂಡವೂ ಹಲವು ಆರೋಪಗಳನ್ನು ಮಾಡಿವೆ. ತಮ್ಮ ಕುಟುಂಬಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಸ್ವಾತಂತ್ರ್ಯ ಕೊಟ್ಟು ಕಮಲಾ ತಮ್ಮ ಕಾಲ ಮೇಲೆ ತಾವೇ ಚಪ್ಪಡಿ ಕಲ್ಲು ಎಳೆದುಕೊಂಡಿದ್ದಾರೆ ಎನ್ನುತ್ತಿದ್ದಾರೆ. ಕಮಲಾ ಸೋದರಿ ಮಾಯಾ ಹ್ಯಾರಿಸ್, ಸಂಬಂಧಿಕರಾದ ಟೋನಿ ವೆಸ್ಟ್, ಮೀನಾ ಹ್ಯಾರಿಸ್ ಮತ್ತಿತರರು ಆಡಳಿತದಲ್ಲಿ ಕೈಯಾಡಿ ಸುತ್ತಿದ್ದಾರೆ ಎಂದೂ ದೂರಿದ್ದಾರೆ. ಈ ಬೆಳವಣಿಗೆಯಿಂದ ಕಮಲಾ ಅವರ ಕಾರ್ಯಾ ಲಯದ ಅಧಿಕಾರಿಗಳಿಗೇ ಕಿರಿಕಿರಿಯಾಗುತ್ತಿದೆ. ಕೆಲವರು ರಾಜೀನಾಮೆ ಪತ್ರ ಇಟ್ಟು, ಹೇಳದೇ ಹೋಗಿದ್ದಾರೆ ಎಂಬ ಗಂಭೀರ ಆರೋಪಗಳನ್ನು ಬೈಡೆನ್ ಬಳಗ ಮಾಡುತ್ತಿದೆ.
ಬೈಡೆನ್ – ಕಮಲಾ ನಡುವಿನ ಅಭಿಪ್ರಾಯಭೇದಗಳು ಡೆಮಾಕ್ರಾಟ್ ಪಕ್ಷದ ಬುಡವನ್ನೇ ಅಲ್ಲಾಡಿಸುತ್ತಿರುವುದು ನಿಚ್ಚಳ. ಗೆಲುವಿಗಾಗಿ ಬೆವರು ಸುರಿಸಿದವರೇ ಕೊನೇ ಮೊಳೆ ಹೊಡೆಯುವ ಮುನ್ನ, ಡೆಮಾಕ್ರಾಟ್‌ನ ಇತರ ನಾಯಕರು ಎಚ್ಚೆತ್ತುಕೊಳ್ಳು ತ್ತಾರೋ ಎಂದು ಕಾದು ನೋಡಬೇಕು. ಬೈಡೆನ್-ಕಮಲಾ ಫೈಟ್ ನಡುವೆಯೇ ಹೊಸ ಸಮಾಚಾರ ಹೊರಬಿದ್ದಿದೆ. ಮುಂದಿನ ಅಧ್ಯಕ್ಷೀಯ ಚುನಾವಣ ಕಣಕ್ಕೆ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಪತ್ನಿ ಮಿಶೆಲ್ ಒಬಾಮಾ ಎಂಟ್ರಿಯಾಗುತ್ತಾರೆ ಎಂಬುದು. ಹೀಗಾಗಿ ಬೈಡೆನ್ ಸ್ಪರ್ಧಾಕಣದಿಂದ ಹಿಂದೆ ಸರಿದರೆ, ಡೆಮಾಕ್ರಾಟ್ ಅಧ್ಯಕ್ಷೀಯ ಅಭ್ಯರ್ಥಿ ಪಟ್ಟಕ್ಕೆ ಕಮಲಾ ಹ್ಯಾರಿಸ್ ಹಾಗೂ ಮಿಶೆಲ್ ನಡುವೆ ಪೈಪೋಟಿ ಗ್ಯಾರಂಟಿ. ಹೀಗಾಗಿ ಮುಂದಿನ ಚುನಾವಣೆಯೂ ಕೌತುಕದ ಕೇಂದ್ರಬಿಂದುವಾಗಲಿದೆ.
-ಹಲೀಮತ್ ಸಅದಿಯಾ