Advertisement

ಜಾಂಬಿಯದ ಅಜ್ಜನ ಮನೆ ಹುಡುಕಿಕೊಂಡು ಹೋದ ಕಮಲಾ ಹ್ಯಾರಿಸ್‌

11:02 PM Apr 01, 2023 | Team Udayavani |

ನವದೆಹಲಿ: ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಈಗ ಅಮೆರಿಕದ ಉಪಾಧ್ಯಕ್ಷೆ. ಸದ್ಯ ಆಫ್ರಿಕಾ ಖಂಡದ ಜಾಂಬಿಯ ಪ್ರವಾಸಕ್ಕೆ ತೆರಳಿರುವ ಅವರು ಒಂದು ವಿಶೇಷ ಸಂತೋಷದಲ್ಲಿದ್ದಾರೆ. ಅದಕ್ಕೆ ಕಾರಣ ಅವರು ಲುಸಾಕದಲ್ಲಿ ತಮ್ಮ ಅಜ್ಜ ಒಂದು ಕಾಲದಲ್ಲಿ ವಾಸವಾಗಿದ್ದ ಮನೆಗೆ ಭೇಟಿ ನೀಡಿದ್ದು!

Advertisement

ಅವರ ತಾಯಿಯ ತಂದೆ ಪಿ.ವಿ.ಗೋಪಾಲನ್‌ 1966ರಲ್ಲಿ ಭಾರತ ಸರ್ಕಾರದ ಪ್ರತಿನಿಧಿಯಾಗಿ ಲುಸಾಕದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಆಗಷ್ಟೇ ಸ್ವತಂತ್ರಗೊಂಡಿದ್ದ ಜಾಂಬಿಯದಲ್ಲಿ ಬೇಕಾದಷ್ಟು ಕೆಲಸವಾಗಬೇಕಿತ್ತು.

ಈ ಹಿನ್ನೆಲೆಯಲ್ಲಿ ಗೋಪಾಲನ್‌ರನ್ನು “ಪರಿಹಾರ ಕ್ರಮಗಳು, ನಿರಾಶ್ರಿತರ ಕೇಂದ್ರದ’ ನಿರ್ದೇಶಕರಾಗಿ ನೇಮಿಸಲಾಗಿತ್ತು. ಇದರ ಆಸುಪಾಸಿನಲ್ಲೇ ಆಗಿನ್ನೂ ಚಿಕ್ಕ ವಯಸ್ಸಿನಲ್ಲಿದ್ದ ಕಮಲಾ ಹ್ಯಾರಿಸ್‌ ಲುಸಾಕಕ್ಕೆ ಹೋಗಿದ್ದರು. ಈಗವರು ಬಹಳ ಕಷ್ಟಪಟ್ಟು ಆ ಜಾಗವನ್ನು ಹುಡುಕಿಸಿ, ಭೇಟಿ ನೀಡಿ ಪುಳಕಿತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next