Advertisement

ಕಮಲಾ ಹ್ಯಾರಿಸ್‌ ಸ್ಪರ್ಧೆ ಖಚಿತ

02:19 AM Jan 22, 2019 | |

ವಾಷಿಂಗ್ಟನ್‌: ಅಮೆರಿಕ ಸಂಸತ್ತಿಗೆ ಕಾಲಿಟ್ಟ ಭಾರತ ಮೂಲದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿರುವ ಕಮಲಾ ಹ್ಯಾರಿಸ್‌ (54), 2020ರಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಅಧಿಕೃತವಾಗಿ ಘೋಷಿಸಿದ್ದು, ಸೋಮವಾರದಿಂದಲೇ ತಮ್ಮ ಚುನಾವಣಾ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ.

Advertisement

ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಟೀಕಾಕಾರರೂ ಆಗಿರುವ ಹ್ಯಾರಿಸ್‌, ಅಮೆರಿಕ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿರುವ ಡೆಮಾಕ್ರಾಟಿಕ್‌ ಪಕ್ಷದ ನಾಲ್ಕನೇ ನಾಯಕಿ ಎನಿಸಿದ್ದಾರೆ. ”ಅಮೆರಿಕದ ಮಾಜಿ ಅಧ್ಯಕ್ಷ ಮಾರ್ಟಿನ್‌ ಲೂಥರ್‌ ಕಿಂಗ್‌ ಅವರ ಜನ್ಮದಿನದಂದೇ ನಾನು ನನ್ನ ಚುನಾವಣಾ ಪ್ರಚಾರ ಆರಂಭಿಸಿರುವುದು ನನ್ನ ಪಾಲಿನ ಅತ್ಯಂತ ಗೌರವದ ವಿಚಾರ” ಎಂದು ಅವರು ಹೇಳಿದ್ದಾರೆ. ತಮ್ಮ ಅಭಿಯಾನಕ್ಕೆ ಅವರು ‘ಕಮಲಾ ಹ್ಯಾರಿಸ್‌: ಫಾರ್‌ ದಿ ಪೀಪಲ್‌’ ಎಂಬ ಉದ್ಘೋಷವನ್ನು ಬಳಸಿಕೊಳ್ಳಲಿದ್ದಾರೆ.

ಇತ್ತೀಚೆಗಷ್ಟೇ ಭಾರತೀಯ ಮೂಲದ ಮತ್ತೂಬ್ಬ ಸಂಸದೆ ತುಳಸಿ ಗಬ್ಟಾರ್ಡ್‌ ಅವರೂ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next