Advertisement

2024ರಲ್ಲೂ ಕಮಲಾ ನನ್ನ ಪ್ರತಿಸ್ಪರ್ಧಿ: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಘೋಷಣೆ

10:37 AM Jan 21, 2022 | Team Udayavani |

ವಾಷಿಂಗ್ಟನ್‌: “2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್‌ ಅವರು ನನ್ನ ಪ್ರತಿಸ್ಪರ್ಧಿಯಾಗಿರುತ್ತಾರೆ’ ಎಂದು ಹಾಲಿ ಅಧ್ಯಕ್ಷ ಜೋ ಬೈಡೆನ್‌ ಘೋಷಿಸಿದ್ದಾರೆ. ಈ ಮೂಲಕ ಮುಂಬರುವ ಚುನಾವಣೆಯಲ್ಲೂ ತಾವು “ಅಭ್ಯರ್ಥಿ’ ಎಂಬ ಸುಳಿವನ್ನು ಬೈಡೆನ್‌ ನೀಡಿದ್ದಾರೆ.

Advertisement

ವಯಸ್ಸಾಗಿರುವ ಕಾರಣ ಬೈಡೆನ್‌ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂಬ ಸುದ್ದಿಗಳು ಹರಿದಾಡಿದ್ದವು.  ಆದರೆ, ಅಮೆರಿಕ ಅಧ್ಯಕ್ಷ ಸ್ಥಾನ ವಹಿಸಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ವದಂತಿಗಳಿಗೆ ತೆರೆ ಎಳೆದಿದ್ದಾರೆ. “ಮುಂದಿನ ಚುನಾವಣೆಯಲ್ಲಿ ನಾನು ಮತ್ತೂಮ್ಮೆ ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧಿಸಿದ್ದೇ ಆದಲ್ಲಿ ಕಮಲಾ ಅವರು ನನ್ನ ಪ್ರತಿಸ್ಪರ್ಧಿಯಾಗಿರುತ್ತಾರೆ’ ಎಂದು ಹೇಳಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ ಕಮಲಾ ಹ್ಯಾರಿಸ್‌ಗೆ ಈ ಕುರಿತು ಪ್ರಶ್ನಿಸಿದಾಗ, “ನಾವು ಈ ಬಗ್ಗೆ ಚರ್ಚಿಸಿಯೇ ಇಲ್ಲ’ ಎಂದು ಹೇಳಿದ್ದರು.

ಸ್ಥೈರ್ಯ ಕುಗ್ಗಿಸಿದ ಕೊರೊನಾ:

ಕೊರೊನಾ ಸಾಂಕ್ರಾಮಿಕವು ಅಮೆರಿಕನ್ನರನ್ನು ಹತಾಶರನ್ನಾಗಿ ಮಾಡಿದೆ, ನೈತಿಕ ಸ್ಥೈರ್ಯವನ್ನು ಕುಗ್ಗಿಸಿದೆ. ಆದರೆ, ನಾವು ಸೋಂಕನ್ನು ನಿರೀಕ್ಷೆಗೂ ಮೀರಿ ಸಮರ್ಥವಾಗಿ ಎದುರಿಸಿದ್ದೇವೆ ಎಂದು ಬೈಡೆನ್‌ ಹೇಳಿದ್ದಾರೆ. ಏರುತ್ತಿರುವ ಹಣದುಬ್ಬರವನ್ನು ನಿಯಂತ್ರಿಸುವ ಕೆಲಸ ಆಗಬೇಕಾಗಿದೆ. ನನ್ನ ದೇಶ ನನ್ನೊಂದಿಗಿದೆ ಎಂದು ನಂಬಿದ್ದೇನೆ ಎಂದಿರುವ ಬೈಡೆನ್‌, “ದೇಶದ ಒಳಿತಿಗೆ ತಮ್ಮ ಸಲಹೆಗಳನ್ನು ನೀಡುವ ಬದಲು ನಮ್ಮೆಲ್ಲ ಪ್ರಸ್ತಾಪಗಳಿಗೂ ರಿಪಬ್ಲಿಕನ್‌ ಪಕ್ಷ ವಿರೋಧಿಸುತ್ತಿದೆ. ಇದು ಸರಿಯಲ್ಲ’ ಎಂದೂ ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next