Advertisement

Kollywood: ಕಮಲ್‌ ಹಾಸನ್‌ ʼಇಂಡಿಯನ್‌ -2ʼ ಬಿಡುಗಡೆ ಮುಂದೂಡಿಕೆ; ಈ ತಿಂಗಳಿನಲ್ಲಿ ರಿಲೀಸ್?

02:04 PM May 05, 2024 | Team Udayavani |

ಚೆನ್ನೈ: ಕಮಲ್‌ ಹಾಸನ್‌ ಅವರ ʼಇಂಡಿಯನ್‌ -2ʼ ಸೆಟ್ಟೇರಿದ ದಿನದಿಂದ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದೆ. ಚಿತ್ರೀಕರಣದ ಹಂತದಲ್ಲಿ ಸದ್ದು ಮಾಡಿದ ಬಳಿಕ ರಿಲೀಸ್‌ ವಿಚಾರದಲ್ಲಿ ಗಮನ ಸೆಳೆದಿತ್ತು.

Advertisement

2019 ರಲ್ಲೇ ʼಇಂಡಿಯನ್‌ -2ʼ ಪ್ರಾಜೆಕ್ಟ್‌ ಆರಂಭಗೊಂಡಿತ್ತು.  ಆದರೆ ಚಿತ್ರೀಕರಣದ ಸೆಟ್‌ ನಲ್ಲಿ ಆದ ಅವಘಡ ಹಾಗೂ ಕೋವಿಡ್‌ ನಿಂದಾಗಿ ಸಿನಿಮಾ ಅರ್ಧದಲ್ಲೇ ನಿಂತಿತ್ತು. ಸಾಕಷ್ಟು ವಿಳಂಬದ ಬಳಿಕ 2022 ರಲ್ಲಿ ಸಿನಿಮಾ ಮತ್ತೆ ಪ್ರಾರಂಭವಾಗಿತ್ತು. ಅಂದಿನಿಂದ ಸಿನಿಮಾದ ಬಗ್ಗೆ ಮತ್ತೆ ಚರ್ಚೆ ಶುರುವಾಗಿತ್ತು.

ಎಸ್‌. ಶಂಕರ್‌ ಅವರ ʼಇಂಡಿಯನ್‌ -2ʼ  ಸಿನಿಮಾ ಎರಡು ವಿಭಾಗದಲ್ಲಿ ಪ್ಯಾನ್‌ ಇಂಡಿಯಾದಲ್ಲಿ ತೆರೆ ಕಾಣಲಿದೆ. ಇದೇ ವರ್ಷದ ಜೂನ್‌ ನಲ್ಲಿ ಸಿನಿಮಾ ತೆರೆ ಕಾಣಲಿದೆ ಎನ್ನಲಾಗಿತ್ತು. ಬಹುತೇಕ ಇದೇ ತಿಂಗಳಿನಲ್ಲಿ ಸಿನಿಮಾ ಬರುವ ಸಾಧ್ಯತೆಯಿದೆ ಎನ್ನಲಾಗಿತ್ತು. ಇದೀಗ ಸಿನಿಮಾದ ರಿಲೀಸ್‌ ಮುಂದೂಡಿಕೆ ಆಗಿದೆ ಎನ್ನುವ ವರದಿಯೊಂದು ಹೊರಬಿದ್ದಿದೆ.

ಲೇಟೆಸ್ಟ್‌ ಅಪ್ಡೇಟ್‌ ಪ್ರಕಾರ ʼಇಂಡಿಯನ್‌ -2ʼ ಜೂನ್‌ ಬದಲಿಗೆ ಸಿನಿಮಾ ಜುಲೈ ತಿಂಗಳಿನಲ್ಲಿ ತೆರೆ ಕಾಣಲಿದೆ. ಆದರೆ ದಿನಾಂಕ ಮಾತ್ರ ಇನ್ನು ಅಧಿಕೃತವಾಗಿಲ್ಲ. ಮುಂದಿನ ದಿನಗಳಲ್ಲಿ ಸ್ಪಷ್ಟ ಮಾಹಿತಿ ಬರುವ ಸಾಧ್ಯತೆಯಿದೆ.

ಚಿತ್ರದಲ್ಲಿ ಕಮಲ್‌ ಹಾಸನ್‌ ಜೊತೆಗೆ ಸಿದ್ಧಾರ್ಥ್, ಕಾಜಲ್ ಅಗರ್ವಾಲ್, ರಾಕುಲ್ ಪ್ರೀತ್ ಸಿಂಗ್, ಎಸ್‌ಜೆ ಸೂರ್ಯ, ಬಾಬಿ ಸಿಂಹ, ಪ್ರಿಯಾ ಭವಾನಿ ಶಂಕರ್, ಮುಂತಾದ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next