Advertisement

ಫೆ.25ಕ್ಕೆ ಕಾಮಧೇನು ಗೋವಿಜ್ಞಾನ ಪರೀಕ್ಷೆ

01:34 AM Jan 07, 2021 | Team Udayavani |

ಹೊಸದಿಲ್ಲಿ: ಗೋವುಗಳ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಂಬಂಧ ಕೇಂದ್ರ ಪಶುಸಂಗೋಪನ ಸಚಿವಾಲಯ ಗೋ ವಿಜ್ಞಾನ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಫೆ.25ರಂದು ಈ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಯಾರೂ ಬೇಕಾದರೂ ಬರೆಯಬಹುದು.

Advertisement

ಪಶುಸಂಗೋಪನ ಇಲಾಖೆ ಅಡಿ ಬರುವ ರಾಷ್ಟ್ರೀಯ ಕಾಮಧೇನು ಆಯೋಗ ಈ ಪರೀಕ್ಷೆ ನಡೆಸುತ್ತಿದೆ. ಯುವಕರಲ್ಲಿ ಮತ್ತು ಜನರಲ್ಲಿ ಗೋವುಗಳ ಬಗ್ಗೆ ಅರಿವು ಮೂಡಿಸುವುದೇ ಈ ಪರೀಕ್ಷೆಯ ಉದ್ದೇಶ ಎಂದು ಆಯೋಗದ ಅಧ್ಯಕ್ಷ ವಲ್ಲಭಬಾಯ್‌ ಕಥಿರಿಯಾ ತಿಳಿಸಿದ್ದಾರೆ. ಪ್ರಾಥಮಿಕ, ಪ್ರೌಢ, ಕಾಲೇಜು ಹಂತದ ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಜನರು “ಕಾಮಧೇನು ಗೋ ವಿಜ್ಞಾನ ಪ್ರಚಾರ-ಪ್ರಸಾರ ಪರೀಕ್ಷೆ’ ತೆಗೆದುಕೊಳ್ಳಬಹುದು. ಇದಕ್ಕೆ ಬೇಕಾದ ವಿಷಯಗಳನ್ನೂ ತನ್ನ ವೆಬ್‌ಸೈಟ್‌ನಲ್ಲಿ ನೀಡುವುದಾಗಿ ಆಯೋಗ ತಿಳಿಸಿದೆ. ಪ್ರಶ್ನೆಗಳು ಸಂಪೂರ್ಣವಾಗಿ ಆಯ್ಕೆಯ ರೀತಿ ಇರಲಿವೆ, ತತ್‌ಕ್ಷಣವೇ ಫ‌ಲಿತಾಂಶ ಪ್ರಕಟವಾಗಲಿದ್ದು, ಪ್ರಮಾಣಪತ್ರವನ್ನೂ ನೀಡಲಾಗುತ್ತದೆ. ಅಷ್ಟೇ ಅಲ್ಲ, ಮೆರಿಟ್‌ನಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಬಹುಮಾನವನ್ನೂ ನೀಡಲಾಗುತ್ತದೆ. ಅಂದ ಹಾಗೆ ಈ ಪರೀಕ್ಷೆಗೆ ಯಾವುದೇ ಶುಲ್ಕವಿರುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next