ಬ್ರಹ್ಮಾವರ: ಕಲ್ಯಾಣಪುರ ರೋಟರಿ ಕ್ಲಬ್‌ನ 33ನೇ ಚಾರ್ಟರ್ ಡೇ ಆಚರಣೆ ಹಾಗೂ 2020-21ನೇ ಸಾಲಿಗೆ ಜಿಲ್ಲಾ ಗವರ್ನರ್ ಆಗಿ ಆಯ್ಕೆಗೊಂಡ ಬಿ. ರಾಜಾರಾಮ್ ಭಟ್ ಅವರಿಗೆ ಅಭಿನಂದನಾ ಸಮಾರಂಭ ಶನಿವಾರ ಮದರ್ ಪ್ಯಾಲೇಸ್ ಸಭಾಂಗಣದಲ್ಲಿ ಜರಗಿತು.
ಮಾಜಿ ಜಿಲ್ಲಾ ಗವರ್ನರ್ ಡಾ| ಎಚ್. ಶಾಂತಾರಾಮ್ ಹಾಗೂ ಜಿಲ್ಲಾ ಗವರ್ನರ್ ಜಿ.ಎನ್. ಪ್ರಕಾಶ್ ಉದ್ಘಾಟಿಸಿದರು.
ಅತಿಥಿಗಳಾಗಿ ರೋಟರಿ ಮಾಜಿ ಜಿಲ್ಲಾ ಗವರ್ನರ್‌ಗಳಾದ ನಾಗೇಂದ್ರ ಎಸ್.ಕೆ., ಜ್ಞಾನವಸಂತ ಶೆಟ್ಟಿ, ಡಾ| ಭರತೇಶ್ ಆದಿರಾಜ್, ನಿಯೋಜಿತ ಗವರ್ನರ್ ಅಭಿನಂದನ್ ಎ. ಶೆಟ್ಟಿ, ಬಿ.ಎನ್. ರಮೇಶ್, ಡಿ.ಎಸ್. ರವಿ, ಅಸಿಸ್ಟೆಂಟ್ ಗವರ್ನರ್ ಚಂದ್ರ ನಾೖರಿ ಉಪಸ್ಥಿತರಿದ್ದರು.
ಬಿ. ರಾಜಾರಾಮ್ ಭಟ್ ದಂಪತಿಯನ್ನು ಸಮ್ಮಾನಿಸಲಾಯಿತು. ಕಲ್ಯಾಣಪುರ ರೋಟರಿಯ ಮಾಜಿ ಅಧ್ಯಕ್ಷರನ್ನು ಗೌರವಿಸಲಾಯಿತು.
ರೋಟರಿ ಅಧ್ಯಕ್ಷ ಅರುಣ್ ಡಿ’ಸೋಜಾ ಸ್ವಾಗತಿಸಿ, ಕಾರ್ಯದರ್ಶಿ ರಾಮ ಪೂಜಾರಿ ಟಿ. ವಂದಿಸಿದರು. ಮಾಜಿ ಅಸಿಸ್ಟೆಂಟ್ ಗವರ್ನರ್ ಅಲೆನ್ ಲೂವಿಸ್ ಪ್ರಸ್ತಾವನೆಗೈದರು. ರಾಮಕೃಷ್ಣ ಮತ್ತು ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.