ಕರೆಕ್ಟ್ ಆಗಿ ಹೇಳಿ. ಚಿತ್ರದ ತುಂಬಾ ಡಬ್ಬಲ್ ಮೀನಿಂಗ್ ಸಂಭಾಷಣೆಗಳಿವೆಯಾ? ಟ್ರೇಲರ್‌ನಲ್ಲಿರೋದು ಸಿನಿಮಾದಲ್ಲಿದೆ ಅಂತ ನಂಬಬೇಡಿ. ಸಿನಿಮಾದಲ್ಲಿ ಬೇರೇನೋ ಇದೆ. ಹಾಗಾದರೆ, ಟ್ರೇಲರ್‌ನಲ್ಲಿರೋದು ಸಿನಿಮಾದಲ್ಲಿರೋದಿಲ್ವಾ? ಇದೆ. ಬಟ್ ಇಡೀ ಸಿನಿಮಾ ಇರೋಲ್ಲ. ಟ್ರೇಲರ್‌ಗೊàಸ್ಕರವೇ ಬೇರೆ, ಸಿನಿಮಾಗೋಸ್ಕರವೇ ಬೇರೆ ಶೂಟ್ ಮಾಡಿದ್ರಾ? ಇಲ್ಲ, ಟ್ರೇಲರ್‌ನಲ್ಲಿರೋದೇ ಸಿನಿಮಾದಲ್ಲೂ ಇರತ್ತೆ. ಸಿನಿಮಾದಲ್ಲಿರೋದೇ ಟ್ರೇಲರ್‌ನಲ್ಲೂ ಇರುತ್ತೆ.
ಹಾಗಾದರೆ, ಸಿನಿಮಾದಲ್ಲೂ ತುಂಬಾ ಡಬ್ಬಲ್ ಮೀನಿಂಗ್ ಸಂಭಾಷಣೆಗಳಿವೆ ಅಂತಾಯ್ತು? ಹೀಗೆ ಮತ್ತೆ ಅದೇ ಪಾಯಿಂಟಿಗೆ ಬಂತು ನಿಂತಿತು ಪ್ರಶ್ನೋತ್ತರ. ಕೊನೆಗೆ ಚಿತ್ರದ ನಾಯಕ ಕಂ ನಿರ್ದೇಶಕ ಶ್ರೀನಿ ಬಿಡಿಸಿ ಬಿಡಿಸಿ ಹೇಳಿದರು. “ಪ್ರೇಕ್ಷಕರನ್ನ ಸೆಳೆಯೋಕೆ ಡಬ್ಬಲ್ ಮೀನಿಂಗ್ ಸಂಭಾಷಣೆಗಳು ಅನಿವಾರ್ಯವಾಗಿತ್ತು. ಆದರೆ, ಅದೇ ಸಿನಿಮಾ ಅಲ್ಲ. ಸಿನಿಮಾದಲ್ಲಿ ಇನ್ನೂ ಬೇರೇನೋ ಇದೆ. ಮುಖ್ಯವಾಗಿ ಇಲ್ಲಿ ನಾಯಕ ಮೋಕ್ಷ ಹುಡುಕಿಕೊಂಡು ಹೋಗುತ್ತಾನೆ.
ಅದೇ ಚಿತ್ರದ ಕಥೆ. ಆದರೆ, ಅದರಿಂದ ಮಾರ್ಕೆಟಿಂಗ್ ಮಾಡುವುದು ಕಷ್ಟ. ಹಾಗಾಗಿ ಡಬ್ಬಲ್ ಮೀನಿಂಗ್ ಸಂಭಾಷಣೆಗಳಿಗೆ ಮೊರೆ ಹೋಗಬೇಕಾಯಿತು …’ ಹೀಗೆ ಶ್ರೀನಿ ಹೇಳುತ್ತಾ ಹೋದರು. “ಶ್ರೀನಿವಾಸ ಕಲ್ಯಾಣ’ ಟ್ರೇಲರ್‌ಗಿಂಥ ಅದರಲ್ಲಿನ ಡಬ್ಬಲ್ ಮೀನಿಂಗ್ ಸಂಭಾಷಣೆಗಳದ್ದೇ ಚರ್ಚೆ. ಇಲ್ಲಿ ಡಬ್ಬಲ್ ಮೀನಿಂಗ್ ಇಲ್ಲವೇ ಇಲ್ಲ, ಎಲ್ಲವೂ ನೇರವಾಗಿಯೇ ಇದೆ ಎನ್ನುವುದು ಶ್ರೀನಿ ಅಭಿಪ್ರಾಯ.
ಟ್ರೇಲರ್‌ನಲ್ಲಿ ಡಬ್ಬಲ್ ಮೀನಿಂಗ್ ಸಂಭಾಷಣೆಗಳನ್ನು ತುಂಬುವುದಕ್ಕೂ ಅವರಿಗೂ ಕಾರಣವಿದೆ. “ಸುಮಾರು ಒಂದು ವರ್ಷದ ಹಿಂದೆ ಒಂದು ಟೀಸರ್ ಬಿಟ್ಟಿದ್ದೆವು. ಎಲ್ಲರೂ ಕ್ರಿಯೇಟಿವ್ ಆಗಿದೆ ಅಂತ ಹೊಗಳಿದ್ದರು. ಆದರೆ, ರೀಚ್ ಆಗಿರಲಿಲ್ಲ. ಹೆಸರು ಹೇಳಿದರೆ, ಇದೇನು ದೇವರ ಸಿನಿಮಾನಾ ಅಂತ ಕೇಳ್ಳೋರು. ಅದೇ ಕಾರಣಕ್ಕೆ ಈ ಟ್ರೇಲರ್‌ನ ಆರಂಭದಲ್ಲಿ ಇದು ದೇವರ ಸಿನಿಮಾ ಅಲ್ಲ ಅಂತ ಹಾಕಿದ್ದು.
ಹಾಗೆಯೇ ಜನರ ಗಮನ ಸೆಳೆಯುವುದಕ್ಕೆ ಒಂದಿಷ್ಟು ಡಬ್ಬಲ್ ಮೀನಿಂಗ್ ಸಂಭಾಷಣೆಗಳನ್ನು ಬಳಿಸಿದ್ದು’ ಎಂಬ ಉತ್ತರ ಅವರಿಂದ ಬರುತ್ತದೆ. ಇಲ್ಲಿ ಅವರು ಫಿಲಾಸಫಿಕಲ್ ಆಗಿ ಏನೋ ಹೇಳುವುದಕ್ಕೆ ಹೊರಟಿದ್ದಾರಂತೆ. “ಮುಖ್ಯವಾಗಿ ಅರಿಷಡ್ವರ್ಗಗಳನ್ನು ಇಟ್ಟುಕೊಂಡು ಈ ಚಿತ್ರ ಮಾಡುತ್ತಿದ್ದೀನಿ. ಅರಿಷಡ್ವರ್ಗಗಳನ್ನು ಒಂದೊಂದು ಪಾತ್ರವನ್ನಾಗಿ ಮಾಡಿದ್ದೀವಿ …’ ಎಂದು ಹೇಳಿದರು.