Advertisement

ಕಲ್ಯಾಣಪುರ ಅಗಸನ ಕೆರೆ: ಬೇಸಾಯಕ್ಕೆ ಪೂರಕವಾಗಿ ಅಭಿವೃದ್ಧಿಯಾಗಲಿ

01:00 AM Mar 19, 2019 | Team Udayavani |

ಮಲ್ಪೆ: ಸುಮಾರು 800 ವರ್ಷಗಳ ಹಿಂದಿನ ಐತಿಹಾಸಿಕ ಅಗಸನ ಕೆರೆ ಆಡಳಿತ ನಿರ್ಲಕ್ಷéದಿಂದಾಗಿ ಸರಿಯಾದ ನಿರ್ವಹಣೆಯಿಲ್ಲದೆ ಇಂದು ತ್ಯಾಜ್ಯಗಳಿಂದ ತುಂಬಿಕೊಂಡಿದೆ.

Advertisement

ಕಲ್ಯಾಣಪುರ ಗ್ರಾ.ಪಂ. ವ್ಯಾಪ್ತಿಯ ಮೂಡುತೋನ್ಸೆ ಗ್ರಾಮದ ಜೀವ ಜಲವಾಗಿದ್ದ ಅಗಸನಕೆರೆ ಎರಡು ಎಕ್ರೆಗಳಷ್ಟು ವಿಸೀ¤ರ್ಣವನ್ನು ಹೊಂದಿದೆ. ಈ ಕೆರೆಯ ಉತ್ತರ ಬದಿಯಿಂದ ಕೋಟೆ ರಸ್ತೆಯ ಬದಿ ಮತ್ತು ತಣೀ¡ರು ಕಟ್ಟೆ ಮೂಡುಬೆಟ್ಟು ಹಾಗೂ ನಜರತ್‌ ಬೈಲು, ಕೊಳಂಬೆ ಹಾಗೂ ಅದರ ಪರಿಸರದ ಸುಮಾರು 4 ಕಿ. ಮೀ. ವಿಸೀ¤ರ್ಣದ ಸುತ್ತಮುತ್ತಲಿನ ಭೂಮಿ ಬೇಸಾಯ ಹಾಗೂ ತೋಟಕ್ಕೆ ಬಳಕೆಯಾಗುತ್ತಿತ್ತು. ವರ್ಷದಲ್ಲಿ ಮೂರು ಬೆಳೆಯನ್ನು ಬೆಳೆಯಲಾಗುತ್ತಿತ್ತು. ಈ ಕೆರೆಯಿಂದ ಒಟ್ಟು 5 ಕಡೆಯಿಂದ ಬೇಸಾಯಕ್ಕೆ ನೀರು ಹರಿದು ಹೋಗುತಿತ್ತು.
ಯುಗಾದಿ ಹಬ್ಬದ ದಿನದಂದು ಊರಿನ ರೈತರು ಸೇರಿ ಕೆರೆಗೆ ಪೂಜೆ ಮಾಡಿ ಮೀನು ಹಿಡಿಯುತ್ತಿದ್ದರು. ನಾನಾ ಜಾತೀಯ ಪಕ್ಷಿಗಳ ವಾಸಸ್ಥಾನವೂ ಇದಾಗಿತ್ತು.

ಈ ಹಿಂದೆ ಜಿ.ಪಂ. ಸದಸ್ಯ ಜನಾರ್ದನ ತೋನ್ಸೆ ಅವರು ನಗರ ಪ್ರಾಧಿಕಾರದ ಅಧ್ಯಕ್ಷನಾಗಿದ್ದ ಆವಧಿಯಲ್ಲಿ ಕೆರೆ ಅಭಿವೃದ್ದಿ ಯೋಜನೆಗೆ 2.5 ಕೋ ರೂ. ಎಸ್ಟಿಮೇಟ್‌ ಆಗಿತ್ತು. ಪ್ರಾಧಿಕಾರದಿಂದ 50 ಲಕ್ಷ ರೂ. ತೆಗೆದಿರಿಸುವ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಕೆಲವೊಂದು ತಾಂತ್ರಿಕ ಕಾರಣದಿಂದ ಹಿನ್ನಡೆಗೊಂಡಿತ್ತೆನ್ನಲಾಗಿದೆ. 

ಈ ಪುರಾತನ ಕೆರೆಯ ಮಣ್ಣನ್ನು ತೆರವುಗೊಳಿಸಿ ಕೆರೆ ಸುತ್ತ ದಂಡೆಯನ್ನು ಕಟ್ಟಿ ಈಗ ಇದ್ದ ಮರವನ್ನು ಉಳಿಸಿಕೊಂಡು ಸಾರ್ವಜನಿಕ ಪಾರ್ಕ್‌ ಮಾಡಬೇಕು. ಬೇಸಾಯಕ್ಕೆ ಇದೇ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕೆಂದು ಬೇಸಾಯಗಾರರ ಆಗ್ರಹವಾಗಿದೆ.

ಬೇಸಾಯಕ್ಕೆ ಪೂರಕವಾಗಿ ಅಭಿವೃದ್ದಿಯಾಗಲಿ
ಕೆರೆಯಲ್ಲಿ ತುಂಬಿದ ಹೂಳನ್ನು ತೆಗೆದು, ಕೆರೆ ಸುತ್ತ ದಂಡೆಯನ್ನು ಕಟ್ಟಿ  ಸುತ್ತ ವಾಕಿಂಗ್‌ ಟ್ರಾÂಕ್‌, ಸ್ವಿಮ್ಮಿಂಗ್‌ ಪೂಲ್‌ ನಿರ್ಮಿಸಿ, ಅಭಿವೃದ್ಧಿ ಪಡಿಸಿದರೆ ಈ ಪ್ರದೇಶವನ್ನು ಒಂದು ಸುಂದರ ಪ್ರವಾಸಿ ತಾಣವನ್ನಾಗಿ ರೂಪಿಸಬೇಕು. ಜತೆಗೆ ಬೇಸಾಯಕ್ಕೂ ಇದು ಉಪಯೋಗವಾಗುವಂತೆ ಅಭಿವೃದ್ದಿ ಕಾರ್ಯವನ್ನು ಕೈಗೊಳ್ಳಬೇಕು.
-ಸುನೇತ್ರ ನಾಯಕ್‌ ಕಲ್ಯಾಣಪುರ,  ಸ್ಥಳೀಯರು

Advertisement
Advertisement

Udayavani is now on Telegram. Click here to join our channel and stay updated with the latest news.

Next